3 ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಅಂಗೀಕಾರ ಮಾಡಿದ ತಮಿಳುನಾಡು ವಿಧಾನಸಭೆ; ಹೊರನಡೆದ ಬಿಜೆಪಿ, ಎಐಎಡಿಎಂಕೆ ಶಾಸಕರು

| Updated By: Lakshmi Hegde

Updated on: Aug 28, 2021 | 12:17 PM

Farm Laws: ತಮಿಳುನಾಡು ವಿಧಾನಸಭೆಯಲ್ಲಿ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಅಂಗೀಕಾರ ಆಗುವಾಗ ಬಿಜೆಪಿ ಮತ್ತು ಎಐಎಡಿಎಂಕೆ ಶಾಸಕರು ಹೊರನಡೆದಿದ್ದಾರೆ. ಹಾಗೇ, ತರಾತುರಿಯ ನಿರ್ಧಾರ ಎಂದು ಆರೋಪಿಸಿದ್ದಾರೆ.

3 ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಅಂಗೀಕಾರ ಮಾಡಿದ ತಮಿಳುನಾಡು ವಿಧಾನಸಭೆ; ಹೊರನಡೆದ ಬಿಜೆಪಿ, ಎಐಎಡಿಎಂಕೆ ಶಾಸಕರು
ತಮಿಳುನಾಡು ವಿಧಾನಸಭೆ
Follow us on

ಚೆನ್ನೈ: ಕೇಂದ್ರ ಸರ್ಕಾರ (Central Government)ದ ಮೂರು ಕೃಷಿ ಕಾಯ್ದೆ (Farm Laws)ಗಳ ವಿರುದ್ಧ ತಮಿಳುನಾಡು ವಿಧಾನಸಭೆ (Tamil Nadu Assembly )ಇಂದು ನಿರ್ಣಯ ಅಂಗೀಕಾರ ಮಾಡಿದೆ. ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin)​ ನಿರ್ಣಯ ಮಂಡಿಸಿದ್ದರು. ಇಂದು ಧ್ವನಿ ಮತದ ಮೂಲಕ ಮೂರು ಕೃಷಿ ಕಾಯ್ದೆಗಳ ವಿರುದ್ಧದ ನಿರ್ಣಯ ಅಂಗೀಕಾರ ಮಾಡಲಾಗಿದೆ.  

ಇಂದು ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಅನೇಕ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಪ್ರತಿಭಟನೆ ಶುರು ಮಾಡಿ ವರ್ಷಕ್ಕೆ ಬಂತು. ಈ ಮಧ್ಯೆ ಅನೇಕ ರೈತರ ವಿರುದ್ಧ ಪ್ರಕರಣ ದಾಖಲಾಗಿದೆ. ಅದನ್ನೆಲ್ಲ ಕೇಂದ್ರ ಸರ್ಕಾರ ಹಿಂಪಡೆಯಬೇಕು. ಎಲ್ಲ ರೈತರ ವಿರುದ್ಧ ದಾಖಲಾದ ಕೇಸ್​ಗಳೂ ರದ್ದಾಗಬೇಕು ಎಂದು ಒತ್ತಾಯಿಸಿದರು.  ಹಾಗೇ, ವಿಧಾನಸಭೆಯಲ್ಲಿ ನಿರ್ಣಯ ಮಂಡನೆಯಾಗುವಾಗ, ಅದನ್ನು ವಿರೋಧಿಸಿ ಬಿಜೆಪಿ ಶಾಸಕರೆಲ್ಲ ಹೊರನಡೆದಿದ್ದಾರೆ.

ಇನ್ನು ಎಐಎಡಿಎಂಕೆ ಶಾಸಕರೂ ಕೂಡ ಅದೇ ದಾರಿ ತುಳಿದರು. ಅವರೂ ಸಹ ವಿಧಾನಸಭೆಯಿಂದ ಹೊರನಡೆದು, ಕೃಷಿ ಕಾಯ್ದೆಗಳ ವಿರುದ್ಧ ತರಾತುರಿಯಲ್ಲಿ ನಿರ್ಣಯ ಅಂಗೀಕಾರ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸರ್ವಪಕ್ಷಗಳ ಸಭೆ ಕರೆಯಬೇಕು. ರಾಜ್ಯದ ರೈತರ ಅಭಿಪ್ರಾಯ ಸಂಗ್ರಹ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಭೇದಿಸಲು 5 ಜಿಲ್ಲೆಗಳ 26 ಪರಿಣಿತ ಪೊಲೀಸರ ನಿಯೋಜನೆ

ಕಾಶ್ಮೀರ ಕಣಿವೆಯ ಭಯೋತ್ಪಾದನೆ ಶೀಘ್ರವೇ ಅಂತ್ಯಗೊಳ್ಳಲಿದೆ: ಫಾರೂಕ್​ ಅಬ್ದುಲ್ಲಾ

Published On - 12:16 pm, Sat, 28 August 21