ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಇಂದು ರಾಜ್ಯ ವಿಧಾನಸಭೆಯಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ನಿಂದ ಶಾಶ್ವತ ವಿನಾಯಿತಿ ಕೋರುವ ಮಸೂದೆಯನ್ನು ಮಂಡಿಸಿದರು. ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಭಾನುವಾರ ನೀಟ್ ಪರೀಕ್ಷೆಆರಂಭವಾಗುವುದಕ್ಕಿಂತ ಕೆಲವೇ ಗಂಟೆಗಳ ಮೊದಲು 20 ವರ್ಷದ ವಿದ್ಯಾರ್ಥಿ ಆತ್ಮಹತ್ಯೆಯಿಂದ ಸಾವಿಗೀಡಾದ ಪ್ರಕರಣದ ಮರುದಿನವೇ ಈ ಮಸೂದೆ ಮಂಡನೆಯಾಗಿದೆ.
ಸೋಮವಾರ ಮಸೂದೆ ಮಂಡನೆಯ ವೇಳೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ವಿಧಾನಸಭೆಯಿಂದ ಹೊರನಡೆದಿದೆ. ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ವಿದ್ಯಾರ್ಥಿಯ ಆತ್ಮಹತ್ಯೆ ಕುರಿತು ಚರ್ಚಿಸಲು ಅವಕಾಶವನ್ನು ಒದಗಿಸಿಲ್ಲ ಎಂದು ಹೇಳಿದ್ದಾರೆ.
நீட் எனும் பலிபீடத்தில் மற்றுமொரு மரணம்!
கல்வியால் தகுதி வரட்டும்; தகுதி பெற்றால் மட்டுமே கல்வி எனும் அநீதி நீட் ஒழியட்டும்!
நாளை நீட் நிரந்தர விலக்கு சட்ட மசோதா கொண்டு வருவோம்; #NEET-ஐ இந்தியத் துணைக்கண்டத்தின் பிரச்சினையாகக் கொண்டு செல்வோம். pic.twitter.com/iAI4zm9knA
— M.K.Stalin (@mkstalin) September 12, 2021
ತಮಿಳುನಾಡು ಮುಖ್ಯಮಂತ್ರಿ, ಎಂಕೆ ಸ್ಟಾಲಿನ್ ಸರ್ಕಾರವು ರಾಜ್ಯ ವಿಧಾನಸಭೆಯಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಿಂದ ಶಾಶ್ವತ ವಿನಾಯಿತಿ ಕೋರುವ ಮಸೂದೆಯನ್ನು ಪರಿಚಯಿಸುವುದಾಗಿ ಭಾನುವಾರ ಹೇಳಿತ್ತು. ಈ ಬಗ್ಗೆ ಟ್ವೀಟ್ ಮಾಡಿದ್ದ ಸ್ಟಾಲಿನ್, ಪ್ರವೇಶ ಪರೀಕ್ಷೆಯ ವಿರುದ್ಧದ ಕಾನೂನು ಹೋರಾಟವು ಆರಂಭವಾಗಿದೆ ಮತ್ತು ಅದರ ವಿರುದ್ಧ ಮಸೂದೆಯನ್ನು ತರುವ ಭರವಸೆ ನೀಡುತ್ತೇನೆ ಎಂದಿದ್ದರು.
ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ದೇಶಾದ್ಯಂತ 201 ಕ್ಕೂ ಹೆಚ್ಚು ನಗರಗಳಲ್ಲಿ ನೀಟ್ ಪರೀಕ್ಷೆಯನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ಸ್ಟಾಲಿನ್ ಪ್ರತಿನಿಧಿಸುವ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ), ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯ ಚುನಾವಣೆಗೂ ಮುನ್ನ ನೀಟ್ ಅನ್ನು ರದ್ದುಗೊಳಿಸುವ ಭರವಸೆ ನೀಡಿತ್ತು.
ಸೇಲಂ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ. ವೈದ್ಯಕೀಯ ಆಕಾಂಕ್ಷಿಯು ರೈತನ ಮಗ. ಮಾಧ್ಯಮ ವರದಿಗಳ ಪ್ರಕಾರ, ಆತನ ಪೋಷಕರು ಅವನನ್ನು ಮೂರನೇ ಬಾರಿ ಪರೀಕ್ಷೆಗೆ ಹಾಜರಾಗುವಂತೆ ಒತ್ತಾಯಿಸುತ್ತಿದ್ದರು. ಪರೀಕ್ಷೆಯ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಇತರ ಪ್ರವೇಶ ಪರೀಕ್ಷೆಗಳೊಂದಿಗೆ ದಿನಾಂಕಗಳು ಘರ್ಷಣೆಯಾಗಿರುವುದರಿಂದ ಪರೀಕ್ಷೆಯನ್ನು ಮುಂದೂಡುವಂತೆ ಅಥವಾ ಮರುಹೊಂದಿಸಲು ಒತ್ತಾಯಿಸಿದ ಹಲವಾರು ವಿದ್ಯಾರ್ಥಿಗಳು ಮತ್ತು ಪೋಷಕರ ಮನವಿಯನ್ನು ಸೆಪ್ಟೆಂಬರ್ 6 ರಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಮರು ವೇಳಾಪಟ್ಟಿ ಮಾಡಿದರೆ ತುಂಬಾ ಅನ್ಯಾಯವಾಗುತ್ತದೆ ಮತ್ತು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ನೀಟ್ ವಿಷಯವು ತಮಿಳುನಾಡು ರಾಜ್ಯದಲ್ಲಿ ರಾಜಕೀಯವಾಗಿ ಸೂಕ್ಷ್ಮ ವಿಷಯವಾಗಿದೆ .
(Tamil Nadu Chief Minister MK Stalin introduced a bill in the state assembly Seeking Permanent Exemption From NEET)
Published On - 11:14 am, Mon, 13 September 21