
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಮಂಗಳವಾರ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು ಇಂದು (ಗುರುವಾರ) ಬೆಳಗ್ಗೆ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆ ಹೊರಡಿಸಿದ ವೈದ್ಯಕೀಯ ಬುಲೆಟಿನ್‌ನಲ್ಲಿ ಸ್ಟಾಲಿನ್ ಅವರನ್ನು “ಕೋವಿಡ್-ಸಂಬಂಧಿತ ರೋಗಲಕ್ಷಣಗಳ ಪರೀಕ್ಷಿಸಲು ಮತ್ತು ವೀಕ್ಷಣೆಗಾಗಿ ದಾಖಲಿಸಲಾಗಿದೆ ಎಂದು ಹೇಳಿದೆ.
ಮಂಗಳವಾರ, ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ ನನಗೆ ಕೊರೊನಾ ಲಕ್ಷಣಗಳು ಕಂಡು ಬಂದಿದ್ದು ಕೋವಿಡ್-19 ಪಾಸಿಟಿವ್ ಎಂದು ದೃಢಪಟ್ಟಿದೆ. ಯಾವುದೇ ಆಂತಕ ಪಡುವ ಅಗತ್ಯ ಇಲ್ಲ, ಈಗಾಗಗಲ್ಲೇ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇನೆ ಎಂದು ಟ್ವಿಟ್ ಮಾಡಿದ್ದಾರೆ. ಎಲ್ಲರು ಮಾಸ್ಕ್ ಧರಿಸೋಣ, ಲಸಿಕೆಯನ್ನು ಪಡೆಯೋಣ ಮತ್ತು ಸುರಕ್ಷಿತವಾಗಿರೋಣ ಎಂದು ಟ್ವೀಟ್ ಮಾಡಿದ್ದಾರೆ.