ಸನಾತನ ಧರ್ಮವನ್ನು ಎಚ್‌ಐವಿ ಮತ್ತು ಕುಷ್ಠರೋಗಕ್ಕೆ ಹೋಲಿಸಿದ ಡಿಎಂಕೆ ನಾಯಕ ಎ ರಾಜಾ

ಚೆನ್ನೈನಲ್ಲಿ ದ್ರಾವಿಡರ್ ಕಳಗಂ ಆಯೋಜಿಸಿದ್ದ ವಿಶ್ವಕರ್ಮ ಯೋಜನೆ ವಿರುದ್ಧದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜಾ, ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಕುರಿತು ಉದಯನಿಧಿ ಅವರ ಹೇಳಿಕೆಯು ತುಲನಾತ್ಮಕವಾಗಿ ಸೌಮ್ಯವಾಗಿದೆ. ಸನಾತನ ಮತ್ತು ವಿಶ್ವಕರ್ಮ ಯೋಜನೆಗಳು ಭಿನ್ನವಾಗಿಲ್ಲ. ಮಲೇರಿಯಾ, ಡೆಂಗ್ಯೂನಂತೆ ಸನಾತನ ಧರ್ಮ ತೊಲಗಬೇಕು ಎಂದು ಉದಯನಿಧಿ ಹೇಳಿದ್ದು ಸೌಮ್ಯವಾಗಿದೆ ಎಂದಿದ್ದಾರೆ.

ಸನಾತನ ಧರ್ಮವನ್ನು ಎಚ್‌ಐವಿ ಮತ್ತು ಕುಷ್ಠರೋಗಕ್ಕೆ ಹೋಲಿಸಿದ ಡಿಎಂಕೆ ನಾಯಕ ಎ ರಾಜಾ
ಎ ರಾಜಾ
Follow us
ರಶ್ಮಿ ಕಲ್ಲಕಟ್ಟ
|

Updated on:Sep 08, 2023 | 12:07 PM

ಚೆನ್ನೈ ಸೆಪ್ಟೆಂಬರ್ 07: ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರು ಸನಾತನ ಧರ್ಮದ (Sanatan Dharma) ಬಗ್ಗೆ ನೀಡಿದ ಹೇಳಿಕೆ ವಿವಾದ ತಣ್ಣಗಾಗುವ ಮೊದಲೇ ಡಿಎಂಕೆ ಸಂಸದ ಎ ರಾಜಾ (A Raja), ಸನಾತನ ಧರ್ಮವನ್ನು ಎಚ್‌ಐವಿ ಮತ್ತು ಕುಷ್ಠರೋಗಕ್ಕೆ ಹೋಲಿಸಿ ಸುದ್ದಿಯಾಗಿದ್ದಾರೆ. ಚೆನ್ನೈನಲ್ಲಿ ದ್ರಾವಿಡರ್ ಕಳಗಂ ಆಯೋಜಿಸಿದ್ದ ವಿಶ್ವಕರ್ಮ ಯೋಜನೆ ವಿರುದ್ಧದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜಾ, ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಕುರಿತು ಉದಯನಿಧಿ ಅವರ ಹೇಳಿಕೆಯು ತುಲನಾತ್ಮಕವಾಗಿ ಸೌಮ್ಯವಾಗಿದೆ.ಸನಾತನ ಮತ್ತು ವಿಶ್ವಕರ್ಮ ಯೋಜನೆಗಳು ಭಿನ್ನವಾಗಿಲ್ಲ. ಮಲೇರಿಯಾ, ಡೆಂಗ್ಯೂನಂತೆ ಸನಾತನ ಧರ್ಮ ತೊಲಗಬೇಕು ಎಂದು ಉದಯನಿಧಿ ಹೇಳಿದ್ದು ಸೌಮ್ಯವಾಗಿದೆ. ಈ ರೋಗಗಳು ಸಾಮಾಜಿಕ ಕಳಂಕವನ್ನು ಹೊಂದಿಲ್ಲ. ಎಚ್ಐವಿ ಮತ್ತು ಕುಷ್ಠರೋಗದಂತಹ ಸಾಮಾಜಿಕ ಪಿಡುಗುಗಳನ್ನು ಸನಾತನ ಧರ್ಮದೊಂದಿಗೆ ಹೋಲಿಸಬೇಕು ಎಂದು ರಾಜಾ ಹೇಳಿದರು.

ಮಾಧ್ಯಮಗಳ ವರದಿಗಳ ಪ್ರಕಾರ, 60 ವರ್ಷದ ನಾಯಕ ರಾಜಾ ಅವರು , ಮಲೇರಿಯಾ ಮತ್ತು ಡೆಂಗ್ಯೂಗೆ ಸಂಬಂಧಿಸಿದ ಅಸಹ್ಯತೆಯ ಭಾವನೆ ಇಲ್ಲ ಅಥವಾ ಅವುಗಳನ್ನು ಸಾಮಾಜಿಕ ಪಿಡುಗು ಎಂದು ಪರಿಗಣಿಸಲಾಗಿಲ್ಲ. ಸನಾತನ ಧರ್ಮವನ್ನು ಒಂದು ರೋಗಕ್ಕೆ ಸಮಾನವಾದ ಸಾಮಾಜಿಕ ಅವಮಾನ ಎಂದು ಪರಿಗಣಿಸಬೇಕು ಎಂದು ಹೇಳಿರುವುದಾಗಿ  ವರದಿಗಳು ಉಲ್ಲೇಖಿಸಿವೆ.

ಪ್ರಧಾನಿ ಸಭೆ ಕರೆದು ನನಗೆ ಅನುಮತಿ ನೀಡಿದರೆ ಸಂಪುಟದ ಎಲ್ಲ ಸಚಿವರಿಗೆ ಉತ್ತರ ನೀಡಲು ನಾನು ಸಿದ್ಧನಿದ್ದೇನೆ. ನೀವು ನಿರ್ಧರಿಸಿದ ನಂತರ ‘ಸನಾತನ ಧರ್ಮ’ ಯಾವುದು ಎಂದು ನಾನು ವಿವರಿಸುತ್ತೇನೆ ಎಂದು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ರಾಜಾ ಹೇಳಿದ್ದಾರೆ.

ಉದಯನಿಧಿ ಸ್ಟಾಲಿನ್ ಹೇಳಿದ್ದೇನು?

ಕಳೆದ ಶನಿವಾರ ತಮಿಳುನಾಡಿನಲ್ಲಿ ಸಚಿವ ಉದಯನಿಧಿ ಸ್ಟಾಲಿನ್  ಸಮಾನತೆಯನ್ನು ಸ್ಥಾಪಿಸಲು ಸನಾತನ ಧರ್ಮವನ್ನು (ಹಿಂದೂ ಧರ್ಮದಲ್ಲಿ ನಿಷೇಧಿಸಲಾಗಿರುವ ಕರ್ತವ್ಯಗಳು ಮತ್ತು ಜೀವನ ವಿಧಾನ) ನಿರ್ಮೂಲನೆಗೆ ಕರೆ ನೀಡಿದ ವಿಡಿಯೊ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ, ರಾಜಕೀಯ ವಲಯದಲ್ಲಿ ಭಾರೀ ವಾದ- ವಿವಾದಗಳು ನಡೆದಿವೆ.

ಇದನ್ನೂ ಓದಿ:ಉದಯನಿಧಿ ಅವರ ‘ಸನಾತನ ಧರ್ಮ’ ಹೇಳಿಕೆಯನ್ನು ಸಮರ್ಥಿಸಿಕೊಂಡ ತಮಿಳುನಾಡು ಸಿಎಂ ಸ್ಟಾಲಿನ್

ಚೆನ್ನೈನಲ್ಲಿ ತಮಿಳುನಾಡು ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉದಯನಿಧಿ ಸ್ಟಾಲಿನ್ ತಮಿಳಿನಲ್ಲಿ ಹೇಳಿದ್ದು ಹೀಗೆ: “ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅವುಗಳನ್ನು ರದ್ದುಗೊಳಿಸಬೇಕು. ನಾವು ಡೆಂಗ್ಯೂ, ಸೊಳ್ಳೆಗಳು ಅಥವಾ ಕೊರೊನಾವನ್ನು(ಕೋವಿಡ್-19) ತಡೆಯಲು ಸಾಧ್ಯವಿಲ್ಲ. ನಾವು ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ಸನಾತನ (ಧರ್ಮ)ವನ್ನು ನಿರ್ಮೂಲನೆ ಮಾಡಬೇಕು. ಕೇವಲ ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು. ಉದಯನಿಧಿ ಅವರ ಭಾಷಣದ ವಿಡಿಯೊ ಪ್ರಸಾರವಾಗುತ್ತಿದ್ದಂತೆ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದ ಬಿಜೆಪಿ, ಡಿಎಂಕೆ ನಾಯಕ ನರಮೇಧಕ್ಕೆ ಕರೆ ನೀಡುತ್ತಿದ್ದಾರೆ ಎಂದು ಆರೋಪಿಸಿತು. ಇದಕ್ಕೆ ಉದಯನಿಧಿ, ಬಿಜೆಪಿಯದ್ದು “ಸುಳ್ಳು ನಿರೂಪಣೆ” ಎಂದು ತಳ್ಳಿಹಾಕಿದ್ದರು.

ಆದಾಗ್ಯೂ, ಬುಧವಾರ ನಡೆದ ಮಂತ್ರಿಮಂಡಲದ ಸಭೆಯಲ್ಲಿ ಮೋದಿ,ತಮ್ಮ ಸಚಿವರಲ್ಲಿ ಉದಯನಿಥಿ ಹೇಳಿಕೆಗೆ ತಕ್ಕ ಉತ್ತರ ನೀಡಬೇಕು ಎಂದು ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:43 pm, Thu, 7 September 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್