ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ಪತ್ನಿ ಜತೆ ಜಗಳವಾಡಿ ಬಂದು ಟ್ರಾನ್ಸ್​ಫಾರ್ಮರ್ ಹತ್ತಿ ಹೈ-ಟೆನ್ಷನ್ ತಂತಿ ಕಚ್ಚಿದ

ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಪತ್ನಿ ಬಳಿ ಜಗಳವಾಡಿಕೊಂಡು ಬಂದು ಟ್ರಾನ್ಸ್​ಫಾರ್ಮರ್ ಹತ್ತಿ ಹೈ ಟೆನ್ಷನ್ ತಂತಿಯನ್ನು ಕಚ್ಚಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಕುಡಿದ ಅಮಲಿನಲ್ಲಿದ್ದ ವ್ಯಕ್ತಿ ಪತ್ನಿ ಜತೆ ಜಗಳವಾಡಿ ಬಂದು ಟ್ರಾನ್ಸ್​ಫಾರ್ಮರ್ ಹತ್ತಿ ಹೈ-ಟೆನ್ಷನ್ ತಂತಿ ಕಚ್ಚಿದ
ಟ್ರಾನ್ಸ್​ಫಾರ್ಮರ್ ಹತ್ತಿದ ವ್ಯಕ್ತಿ
Image Credit source: India TV

Updated on: Apr 06, 2023 | 9:49 AM

ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಪತ್ನಿ ಬಳಿ ಜಗಳವಾಡಿಕೊಂಡು ಬಂದು ಟ್ರಾನ್ಸ್​ಫಾರ್ಮರ್ ಹತ್ತಿ ಹೈ ಟೆನ್ಷನ್ ತಂತಿಯನ್ನು ಕಚ್ಚಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಚಿನ್ನಮಂಗೋಡು ನಿವಾಸಿ 33 ವರ್ಷದ ಧರ್ಮದುರೈ ಎಂಬಾತ ತನ್ನ ಪತ್ನಿ ಜಗಳವಾಡಿಕೊಂಡು ಹುಟ್ಟೂರು ರೆಡ್ಡಿಪಾಳ್ಯಕ್ಕೆ ತೆರಳಿದ್ದರಿಂದ ಮನನೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಧರ್ಮದುರೈ ತನ್ನ ಹೆಂಡತಿಯನ್ನು ಮರಳಿ ಕರೆತರಲು ಮಾವನ ವಿರುದ್ಧ ದೂರು ನೀಡಲು ಹಲವು ಬಾರಿ ಅರಂಬಕ್ಕಂ ಪೊಲೀಸರನ್ನು ಸಂಪರ್ಕಿಸಿದ್ದ.

ಬುಧವಾರ ಧರ್ಮದುರೈ ಅವರು ಮದ್ಯದ ಅಮಲಿನಲ್ಲಿ ಪೊಲೀಸ್ ಠಾಣೆಗೆ ಬಂದಿದ್ದರು, ಅಲ್ಲಿ ಅವರನ್ನು ಕಾಯುವ ಕೊಠಡಿಯಲ್ಲಿ ಕುಳಿತುಕೊಳ್ಳುವಂತೆ ಕೇಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅವರು ಏಕಾಏಕಿ ಪೊಲೀಸ್ ಠಾಣೆ ಆವರಣದಿಂದ ಹೊರಬಂದು ಕಟ್ಟಡದ ಎದುರಿನ ಟ್ರಾನ್ಸ್‌ಫಾರ್ಮರ್‌ ಹತ್ತಿ ಹೈ-ಟೆನ್ಷನ್ ತಂತಿಯನ್ನು ಕಚ್ಚಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಮತ್ತಷ್ಟು ಓದಿ: Video Viral: ಪುಟ್ಟ ಸಹಾಯದ ಮೂಲಕ ಟ್ರಾಫಿಕ್ ಪೊಲೀಸರ ಮುಖದಲ್ಲಿ ನಗು ಮೂಡಿಸಿದ ವ್ಯಕ್ತಿ

ಜನರು ಮತ್ತು ಪೊಲೀಸರು ಯಾವುದೇ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳದಂತೆ ಒತ್ತಾಯಿಸಿದರೂ ಧರ್ಮದುರೈ ಹೈಟೆನ್ಷನ್ ತಂತಿಯನ್ನು ಕಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳು ಧರ್ಮದುರೈ ಅವರನ್ನು ಎಳವೂರ್ ಆಸ್ಪತ್ರೆಗೆ ಕರೆದೊಯ್ದು ನಂತರ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ