ಚೆನ್ನೈ: ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾಹಸ ಪ್ರದರ್ಶಿಸುವಾಗ ಸಂಭವಿಸಿದ ಅನಾಹುತದಲ್ಲಿ ಬೆಂಕಿ ತಗುಲಿ ಕರಾಟೆ ಮಾಸ್ಟರ್ ಸಾವಿಗೀಡಾದ ಘಟನೆ ವರದಿಯಾದಿದೆ. ಪುದುಕೊಟ್ಟೈ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ಇಡೀ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾವಿಗೀಡಾದ ವ್ಯಕ್ತಿಯನ್ನು ಬಾಲಾಜಿ ಎಂದು ಗುರುತಿಸಲಾಗಿದೆ.
ಕರಾಟೆ ಮಾಸ್ಟರ್ ಆಗಿರುವ ಬಾಲಾಜಿ ಇತರರೊಂದಿಗೆ ಪುದುಕೊಟ್ಟೈನಲ್ಲಿ ತೆರೆದ ಮೈದಾನದಲ್ಲಿ ಬೆಂಕಿಯೊಂದಿಗೆ ಸಾಹಸ ನಡೆಸುತ್ತಿದ್ದರು. ಭಾರೀ ಗಾಳಿಯಿಂದಾಗಿ ಬೆಂಕಿ ವೇಗವಾಗಿ ಹಬ್ಬಿ ಸಾಹಸ ಪ್ರದರ್ಶಿಸುತ್ತಿದ್ದ ಬಾಲಾಜಿ ಮೈಗೆ ತಾಗಿದೆ. ಗಂಭೀರ ಸುಟ್ಟ ಗಾಯಗಳೊಂದಿಗೆ ಬಾಲಾಜಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಅವರು ಶುಕ್ರವಾರ ನಿಧನರಾದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಇದನ್ನೂ ಓದಿ: ಜರ್ಮನಿಯ ಪತ್ರಕರ್ತ ಸಿಗದೇ ಇದ್ದಾಗ ಆತನ ಸಂಬಂಧಿ ಮೇಲೆ ಗುಂಡು ಹಾರಿಸಿ ಹತ್ಯೆಗೈದ ತಾಲಿಬಾನ್
ಇದನ್ನೂ ಓದಿ: ‘ರವೀಂದ್ರನಾಥ ಟಾಗೋರ್ ಕಪ್ಪು ಮೈಬಣ್ಣದವರಾಗಿದ್ದರು’ ಎಂದು ಹೇಳಿ ವಿವಾದಕ್ಕೀಡಾದ ಕೇಂದ್ರ ಸಚಿವ ಸುಭಾಶ್ ಸರ್ಕಾರ್
(Tamil Nadu karate Stunt goes wrong Karate master died after he suffered serious burn injuries)
Published On - 6:45 pm, Fri, 20 August 21