AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರವೀಂದ್ರನಾಥ ಟಾಗೋರ್ ಕಪ್ಪು ಮೈಬಣ್ಣದವರಾಗಿದ್ದರು’ ಎಂದು ಹೇಳಿ ವಿವಾದಕ್ಕೀಡಾದ ಕೇಂದ್ರ ಸಚಿವ ಸುಭಾಶ್ ಸರ್ಕಾರ್

Rabindranath Tagore: ಸುಭಾಶ್ ಸರ್ಕಾರ್​​ಗೆ ಇತಿಹಾಸದ ಬಗ್ಗೆ ತಿಳಿದಿಲ್ಲ. ಇದು ಜನಾಂಗೀಯ ಟೀಕೆ ಮತ್ತು ಬಂಗಾಳದ ಮೇರುವ್ಯಕ್ತಿಗೆ ಮಾಡಿದ ಅವಮಾನ" ಎಂದು ಟಿಎಂಸಿ ನಾಯಕ ಮತ್ತು ಡೈಮಂಡ್ ಹಾರ್ಬರ್ ಸಂಸದ ಅಭಿಷೇಕ್ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.

‘ರವೀಂದ್ರನಾಥ ಟಾಗೋರ್ ಕಪ್ಪು ಮೈಬಣ್ಣದವರಾಗಿದ್ದರು’ ಎಂದು ಹೇಳಿ ವಿವಾದಕ್ಕೀಡಾದ ಕೇಂದ್ರ ಸಚಿವ ಸುಭಾಶ್ ಸರ್ಕಾರ್
ಸುಭಾಶ್ ಸರ್ಕಾರ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Aug 20, 2021 | 5:18 PM

Share

ಕೊಲ್ಕತ್ತಾ: ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟಾಗೋರ್ (Rabindranath Tagore) ಅವರ ಮೈಬಣ್ಣದ ಬಗ್ಗೆ ಟೀಕೆ ಮಾಡಿ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಶ್ ಸರ್ಕಾರ್ (Subhas Sarkar) ಬುಧವಾರ ವಿವಾದಕ್ಕೀಡಾಗಿದ್ದಾರೆ. ಸರ್ಕಾರ್ ವಿರುದ್ಧ ಪಶ್ಚಿಮ ಬಂಗಾಳದ ಆಡಳಿತರೂಢ ಟಿಎಂಸಿ ಆಕ್ರೋಶ ವ್ಯಕ್ತಪಡಿಸಿದೆ. ಟಾಗೋರ್ ಮಗುವಾಗಿದ್ದಾಗ ಅವರ ತಾಯಿ ಸೇರಿದಂತೆ ಅವರ ಕುಟುಂಬದಲ್ಲಿ ಯಾರೊಬ್ಬರೂ ಆ ಮಗುವನ್ನು ಕೈಯಲ್ಲಿ ಹಿಡಿದು ಮುದ್ದಾಡಲಿಲ್ಲ. ಯಾಕೆಂದರೆ ಮಗು ‘ಕಪ್ಪು ಮೈಬಣ್ಣದ್ದಾಗಿತ್ತು’ ಎಂದು ವೈದ್ಯ-ರಾಜಕಾರಣಿ ಎಂ.ಪಿ. ಸರ್ಕಾರ್ ಹೇಳಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತರ ಟಾಗೋರ್ ಸ್ಥಾಪಿಸಿದ ವಿಶ್ವಭಾರತಿ ವಿಶ್ವವಿದ್ಯಾನಿಲಯದ ಶಿಕ್ಷಕರೊಂದಿಗಿನ ಸಂವಾದದಲ್ಲೇ ಸರ್ಕಾರ್ ಈ ರೀತಿ ಹೇಳಿದ್ದಾರೆ. ಕೇಂದ್ರ ಸಚಿವರಿಗಾಗಿ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಸರ್ಕಾರ್ ಅಲ್ಲಿಗೆ ಬಂದಿದ್ದರು.

ಟಾಗೋರರ ಕುಟುಂಬದಲ್ಲಿ ಎಲ್ಲರೂ ಬಿಳಿ ಮೈಬಣ್ಣದವರಾಗಿದ್ದರು. ರವೀಂದ್ರನಾಥ ಟಾಗೋರ್ ಕೂಡ ನಿಜವಾಗಿ ಬೆಳ್ಳಗಿದ್ದರು. ಆದಾಗ್ಯೂ, ಎರಡು ವಿಧದ ಮೈಬಣ್ಣಗಳಿವೆ. ಹಳದಿ ಛಾಯೆಯನ್ನು ಹೊಂದಿರುವವರು, ಮತ್ತು ಕೆಂಪು ಬಣ್ಣವನ್ನು ಹೊಂದಿರುವವರು. ಟಾಗೋರ್ ಎರಡನೇ ವಿಧದ ಚರ್ಮದ ಬಣ್ಣವನ್ನು ಹೊಂದಿದ್ದರು. ಟಾಗೋರ್ ಕಪ್ಪು ಚರ್ಮದವರಾಗಿದ್ದರಿಂದ ಅವರ ತಾಯಿ ಮತ್ತು ಅವರ ಕುಟುಂಬ ಮಗುವನ್ನು ಮಡಿಲಲ್ಲಿರಿಸಲು ನಿರಾಕರಿಸುತ್ತಿದ್ದರು. ಆದರೆ ಅದೇ ವ್ಯಕ್ತಿ ವಿಶ್ವಪ್ರಸಿದ್ಧರಾದರು, ”ಎಂದು ಸಚಿವರು ಹೇಳಿದ್ದಾರೆ.. ಉಪ-ಕುಲಪತಿ ಬಿದ್ಯುತ್ ಚಕ್ರವರ್ತಿ ಈ ಹೇಳಿಕೆ ನೀಡಿದಾಗ ಅವರ ಪಕ್ಕದಲ್ಲಿದ್ದರು. ಸಚಿವರೊಂದಿಗೆ ಸ್ಥಳೀಯ ಬಿಜೆಪಿ ನಾಯಕ ಧ್ರುಬಾ ಸಾಹಾ ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

“ಸುಭಾಶ್ ಸರ್ಕಾರ್​​ಗೆ ಇತಿಹಾಸದ ಬಗ್ಗೆ ತಿಳಿದಿಲ್ಲ. ಇದು ಜನಾಂಗೀಯ ಟೀಕೆ ಮತ್ತು ಬಂಗಾಳದ ಮೇರುವ್ಯಕ್ತಿಗೆ ಮಾಡಿದ ಅವಮಾನ” ಎಂದು ಟಿಎಂಸಿ ನಾಯಕ ಮತ್ತು ಡೈಮಂಡ್ ಹಾರ್ಬರ್ ಸಂಸದ ಅಭಿಷೇಕ್ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:  ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಫೋಟೊ ಶೇರ್ ಮಾಡಿರುವ ರಾಹುಲ್ ಗಾಂಧಿಯ ಪೋಸ್ಟ್ ತೆಗೆದು ಹಾಕಿದ ಫೇಸ್​​ಬುಕ್

ಇದನ್ನೂ ಓದಿ:  ಘಾತುಕ ಹಾಗೂ ಭಯೋತ್ಪಾದಕ ಶಕ್ತಿಗಳು ಕೆಲಕಾಲದವರೆಗೆ ಮೆರೆದಾಡಬಹುದು; ಅವರ ಅಸ್ತಿತ್ವ ಶಾಶ್ವತವಲ್ಲ: ಪ್ರಧಾನಿ ಮೋದಿ

(Union Minister of State for Education Subhas Sarkar courted controversy on Rabindranath Tagore’s complexion)