ನಿಮಗೆ ಮೋದಿ ಮೇಲೆ ಯಾಕಿಷ್ಟು ಕೋಪ?: ಅಮಿತ್ ಶಾ ಹೇಳಿಕೆಗೆ ಸ್ಟಾಲಿನ್ ಪ್ರತಿಕ್ರಿಯೆ

|

Updated on: Jun 12, 2023 | 8:50 PM

ಭವಿಷ್ಯದಲ್ಲಿ ತಮಿಳುನಾಡಿನವರು ಪ್ರಧಾನಿ ಸ್ಥಾನಕ್ಕೇರಲು ನೀವು ಶ್ರಮಿಸಬೇಕು ಎಂದು ಅಮಿತ್ ಶಾ ಭಾನುವಾರ ತಮಿಳುನಾಡಿನ ತಮ್ಮ ಪಕ್ಷದ ಕಾರ್ಯಕರ್ತರನ್ನು ಒತ್ತಾಯಿಸಿದ್ದಾರೆಂದು ವರದಿಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸ್ಟಾಲಿನ್, ತಮಿಳಿಗನೊಬ್ಬ ಪ್ರಧಾನಿಯಾಗಬೇಕು ಎಂಬ ಆಲೋಚನೆ ಬಿಜೆಪಿಗೆ ಇದ್ದರೆ...

ನಿಮಗೆ ಮೋದಿ ಮೇಲೆ ಯಾಕಿಷ್ಟು ಕೋಪ?: ಅಮಿತ್ ಶಾ ಹೇಳಿಕೆಗೆ ಸ್ಟಾಲಿನ್ ಪ್ರತಿಕ್ರಿಯೆ
ಎಂಕೆ ಸ್ಟಾಲಿನ್
Follow us on

ಚೆನ್ನೈ: ತಮಿಳುನಾಡಿನ ವ್ಯಕ್ತಿಯೊಬ್ಬರು ಪ್ರಧಾನಿಯಾಗುವಂತೆ ಮಾಡಿ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಹೇಳಿಕೆಗೆ ತಮಿಳುನಾಡು (Tamil nadu) ಎಂಕೆ ಸ್ಟಾಲಿನ್ (MK Stalin) ತಿರುಗೇಟು ನೀಡಿದ್ದು, ಬಿಜೆಪಿ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಇಷ್ಟೊಂದು ಕೋಪಗೊಂಡಿರುವುದು ಯಾಕೆ ಎಂದು ಕೇಳಿದ್ದಾರೆ. ನಾನು ಅವರ ಸಲಹೆಯನ್ನು ಸ್ವಾಗತಿಸುತ್ತೇನೆ. ಆದರೆ ಅವರಿಗೆ ಮೋದಿ ಮೇಲೆ ಯಾಕೆ ಕೋಪ? ಎಂದು ಸೇಲಂನಲ್ಲಿ ಮಾತನಾಡಿದ ಸ್ಟಾಲಿನ್ ವ್ಯಂಗ್ಯವಾಡಿದ್ದಾರೆ.

ಭವಿಷ್ಯದಲ್ಲಿ ತಮಿಳುನಾಡಿನವರು ಪ್ರಧಾನಿ ಸ್ಥಾನಕ್ಕೇರಲು ನೀವು ಶ್ರಮಿಸಬೇಕು ಎಂದು ಅಮಿತ್ ಶಾ ಭಾನುವಾರ ತಮಿಳುನಾಡಿನ ತಮ್ಮ ಪಕ್ಷದ ಕಾರ್ಯಕರ್ತರನ್ನು ಒತ್ತಾಯಿಸಿದ್ದಾರೆಂದು ವರದಿಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸ್ಟಾಲಿನ್, ತಮಿಳಿಗನೊಬ್ಬ ಪ್ರಧಾನಿಯಾಗಬೇಕು ಎಂಬ ಆಲೋಚನೆ ಬಿಜೆಪಿಗೆ ಇದ್ದರೆ, ತಮಿಳಿಸೈ ಸೌಂದರರಾಜನ್ (ತೆಲಂಗಾಣ ರಾಜ್ಯಪಾಲ) ಮತ್ತು ಎಲ್ ಮುರುಗನ್ (ಕೇಂದ್ರ ಸಚಿವ) ಇದ್ದಾರೆ. ಅವರಿಗೆ ಪ್ರಧಾನ ಮಂತ್ರಿ ಅಭ್ಯರ್ಥಿಗಳಾಗುವ ಅವಕಾಶ ಸಿಗಬಹುದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಬಿಜೆಪಿಯ ಕೆಲವು ಹಿರಿಯ ನಾಯಕರ ಪ್ರಕಾರ, ಈ ಹಿಂದೆ ಇಬ್ಬರು ಹಿರಿಯ ರಾಜ್ಯ ನಾಯಕರು ಪ್ರಧಾನಿಯಾಗುವುದನ್ನು ಡಿಎಂಕೆ ತಡೆದಿತ್ತು ಎಂದು ಅಮಿತ್ ಶಾ ಹೇಳಿಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರೊಂದಿಗೆ ಸಭೆಯಲ್ಲಿ ಅಮಿತ್ ಶಾ ಅವರು ಕೆ ಕಾಮರಾಜ್ ಮತ್ತು ಜಿಕೆ ಮೂಪನಾರ್ ಅವರನ್ನು ಡಿಎಂಕೆ ಪ್ರಧಾನಿಯಾಗದಂತೆ ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಹೇಳಿಕೆಯನ್ನು ತಳ್ಳಿಹಾಕಿದ ಎಂಕೆ ಸ್ಟಾಲಿನ್, ಡಿಎಂಕೆ ವಿವರವಾದ ವಿವರಣೆಯನ್ನು ನೀಡಬೇಕಾದರೆ ಶಾ ಅವರ ಹೇಳಿಕೆಯನ್ನು ಬಹಿರಂಗಗೊಳಿಸಿ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿಯವರ ಅಮೆರಿಕ ಭೇಟಿಗೆ ಮುಂಚಿತವಾಗಿ ವಿಶೇಷ ‘ಮೋದಿ ಜಿ’ ಥಾಲಿ ಬಿಡುಗಡೆ ಮಾಡಿದ ನ್ಯೂಜೆರ್ಸಿಯ ರೆಸ್ಟೊರೆಂಟ್

ತಮಿಳುನಾಡಿಗೆ ಕೇಂದ್ರದ ಉಪಕ್ರಮಗಳ ಬಗ್ಗೆ ಅಮಿತ್ ಶಾ ಅವರ ಸಮರ್ಥನೆಗಳನ್ನು ಡಿಎಂಕೆ ಪ್ರಶ್ನಿಸಿದೆ. ಅವರು ಹೇಳಿದಂತೆ ಹಣ ಹಂಚಿಕೆಯು ಸರ್ಕಾರದ ಸಾಂವಿಧಾನಿಕ ಕರ್ತವ್ಯದ ಭಾಗವಾಗ ಎಂದು ಸ್ಟಾಲಿನ್ ಹೇಳಿದ್ದಾರೆ.

ಸ್ಟಾಲಿನ್ ಅವರು ಬಯಸಿದಂತೆ ಯಾವುದೇ “ವಿಶೇಷ ಯೋಜನೆಗಳನ್ನು ಶಾ ಅವರಿಗೆ ನೀಡಲು ಸಾಧ್ಯವಿಲ್ಲ ಎಂದು ಡಿಎಂಕೆ ಸಂಸದೀಯ ಪಕ್ಷದ ನಾಯಕ ಟಿಆರ್ ಬಾಲು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:34 pm, Mon, 12 June 23