ತಮಿಳುನಾಡು: 1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ನ 1ರಿಂದ ಶಾಲೆ ಆರಂಭ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 28, 2021 | 10:46 PM

ಒಂದೂವರೆ ವರ್ಷದ ನಂತರ (19 ತಿಂಗಳು) ಅಂದರೆ ನವೆಂಬರ್ 1ರಿಂದ ಶಾಲೆಗಳು ಆರಂಭವಾಗಲಿವೆ. 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಕಳೆದ ಸೆ.1ರಿಂದಲೇ ಭೌತಿಕ ತರಗತಿಗಳು ನಡೆಯುತ್ತಿವೆ.

ತಮಿಳುನಾಡು: 1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ನ 1ರಿಂದ ಶಾಲೆ ಆರಂಭ
ಪ್ರಾತಿನಿಧಿಕ ಚಿತ್ರ
Follow us on

ಚೆನ್ನೈ: ತಮಿಳುನಾಡಿನಲ್ಲಿ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿಯೇ ಪಾಠ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಒಂದೂವರೆ ವರ್ಷದ ನಂತರ (19 ತಿಂಗಳು) ಅಂದರೆ ನವೆಂಬರ್ 1ರಿಂದ ಶಾಲೆಗಳು ಆರಂಭವಾಗಲಿವೆ. 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಕಳೆದ ಸೆ.1ರಿಂದಲೇ ಭೌತಿಕ ತರಗತಿಗಳು ನಡೆಯುತ್ತಿವೆ.

ದೀರ್ಘಾವಧಿಗೆ ಶಾಲೆಗಳು ನಡೆಯದ ಕಾರಣ ಕಲಿಕೆಯಲ್ಲಿ ಸಾಕಷ್ಟವಾಗಿದೆ ಎಂದು ವೈದ್ಯಕೀಯ ಪರಿಣಿತರು, ಪೋಷಕರು ಮತ್ತು ಶಿಕ್ಷಣ ತಜ್ಞರು ಅಭಿಪ್ರಾಯಟ್ಟಿದ್ದರು. ಅವರ ದೃಷ್ಟಿಕೋನವನ್ನು ಗಮನದಲ್ಲಿರಿಸಿಕೊಂಡು 1ರಿಂದ 8ನೇ ತರಗತಿವರೆಗಿನ ಎಲ್ಲ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ನವೆಂಬರ್ 1ರಿಂದ ಆರಂಭಿಸಲು ಅನುಮತಿ ನೀಡಲಾಗಿದೆ. ಕೊವಿಡ್-19 ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಶಾಲೆಗಳನ್ನು ನಡೆಸಬೇಕು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ಶಿಕ್ಷಣ ಇಲಾಖೆಯು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದು ಮುಖ್ಯಮಂತ್ರಿ ಆದೇಶದಲ್ಲಿ ತಿಳಿಸಿದ್ದಾರೆ.

(Tamil Nadu schools to reopen for classes I to VIII students from November 1)

ಇದನ್ನೂ ಓದಿ: Viral Video: ತಮಿಳುನಾಡು ಕಾಂಗ್ರೆಸ್ ಸಭೆಯಲ್ಲಿ ಸಂಸದರ ಎದುರೇ ಕುರ್ಚಿ ಎತ್ತಿ ಕಾರ್ಯಕರ್ತರ ಕಿತ್ತಾಟ

ಇದನ್ನೂ ಓದಿ: ಕೊರೊನಾದಿಂದ ಶಾಲೆಗಳಿಲ್ಲದೆ ಓದಲು..ಬರೆಯಲು ಮರೆತ ಮಕ್ಕಳು