AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆಯ ಮನೆಯಲ್ಲಿ ನೆಲೆಸುವುದು ಮಗನ ಹಕ್ಕಲ್ಲ: ಪಂಜಾಬ್-ಹರ್ಯಾಣ ಹೈಕೋರ್ಟ್ ಮಹತ್ವದ ತೀರ್ಪು

ಮನೆಯ ರಿಪೇರಿಗೆ ಹಣ ಖರ್ಚು ಮಾಡಿದ್ದೇವೆ ಎಂದು ಮಗ ಹಕ್ಕು ಸ್ಥಾಪನೆಗೆ ಮುಂದಾಗಿದ್ದಾರೆ. ಆದರೆ ಈ ಹಕ್ಕುಸ್ಥಾಪನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.

ತಂದೆಯ ಮನೆಯಲ್ಲಿ ನೆಲೆಸುವುದು ಮಗನ ಹಕ್ಕಲ್ಲ: ಪಂಜಾಬ್-ಹರ್ಯಾಣ ಹೈಕೋರ್ಟ್ ಮಹತ್ವದ ತೀರ್ಪು
ಸಾಂಕೇತಿಕ ಚಿತ್ರ
TV9 Web
| Edited By: |

Updated on: Sep 28, 2021 | 8:49 PM

Share

ಚಂಡೀಗಡ: ‘ನಮ್ಮ ಪೋಷಕರನ್ನು ನಾವು ದೇವರಂತೆ ಕಾಣಬೇಕು’ ಎಂದು ತಂದೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ ಮಗನಿಗೆ ಕಿವಿಮಾತು ಹೇಳಿದ ಪಂಜಾಬ್-ಹರ್ಯಾಣ ಹೈಕೋರ್ಟ್​ನ ನ್ಯಾಯಾಧೀಶರು, ‘ಮನೆಯ ರಿಪೇರಿಗೆಂದು ಹಣ ಖರ್ಚು ಮಾಡಿದ ಮಾತ್ರಕ್ಕೆ ಮಗನಿಗೆ ತಂದೆಯ ಮನೆಯ ಮೇಲೆ ಹಕ್ಕು ಬರುವುದಿಲ್ಲ’ ಎಂದು ಅಭಿಪ್ರಾಯಪಟ್ಟಿದೆ. ಮಗ ಮತ್ತು ಆತನ ಪತ್ನಿಯೇ ತಂದೆಯ ಮನೆಯಿಂದ ಹೊರ ನಡೆಯಬೇಕು ಎಂಬ ಆದೇಶವನ್ನು ದೃಢಪಡಿಸಿದ ಹೈಕೋರ್ಟ್​, ‘ಪೋಷಕರು ಮತ್ತು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗೆ ಕಾಯ್ದೆ, 2007 (ಹಿರಿಯ ನಾಗರಿಕರ ಕಾಯ್ದೆ)’ ಅನ್ವಯ ತೆರವು ಆದೇಶವು ಸಿಂಧು ಆಗುತ್ತದೆ ಎಂದು ಅಭಿಪ್ರಾಯಪಟ್ಟಿತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆಯು ಮನೆಯನ್ನು ಗಿಫ್ಟ್ ಅಥವಾ ಇತರ ಯಾವುದೇ ಮಾರ್ಗದ ಮೂಲಕ ಮಗನ ಹೆಸರಿಗೆ ಹಸ್ತಾಂತರಿಸಿಲ್ಲ. ಮನೆಯ ರಿಪೇರಿಗೆ ಹಣ ಖರ್ಚು ಮಾಡಿದ್ದೇವೆ ಎಂದು ಮಗ ಹಕ್ಕು ಸ್ಥಾಪನೆಗೆ ಮುಂದಾಗಿದ್ದಾರೆ. ಆದರೆ ಈ ಹಕ್ಕುಸ್ಥಾಪನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.

ಮಕ್ಕಳು ತಮ್ಮ ತಂದೆ-ತಾಯಿಯರನ್ನು ಅವರಷ್ಟಕ್ಕೆ ಬಿಟ್ಟು, ಹಿಂಸೆ ಕೊಡಲು ಶುರು ಮಾಡಿದರೆ ಪೋಷಕರು ಕಂಪಿಸುವುದಿಲ್ಲವೇ. ಇಂಥ ಸಂದರ್ಭಗಳಲ್ಲಿ ಪೋಷಕರು ಅಸಹಾಯಕ ಸ್ಥಿತಿ ತಲುಪುತ್ತಾರೆ. ಕಷ್ಟ ಪರಿಹರಿಸಿಕೊಳ್ಳಲು ಒಂದು ವೇದಿಕೆಯಿಂದ ಮತ್ತೊಂದು ಸಂಸ್ಥೆಗೆ ಎಡತಾಕುತ್ತಾರೆ. ಬದುಕು ಎನ್ನುವುದು ಅಸಾಧಾರಣ ಸವಾಲುಗಳು ಮತ್ತು ಅವಕಾಶಗಳಿಂದ ತುಂಬಿದೆ. ಆದರೆ ಇಂಥ ಅವಕಾಶಗಳನ್ನು ನೀವು ನಿಮ್ಮ ಪೋಷಕರ ವಿರುದ್ಧ ಬಳಸಿಕೊಳ್ಳಬಾರದು ಎಂದು ನ್ಯಾಯಾಲಯವು ತಿಳಿಸಿತು.

ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್​ನ ವಾಕ್ಯವೊಂದನ್ನು ಉದ್ಧರಿಸಿದ ನ್ಯಾಯಾಲಯವು, ಮಕ್ಕಳು ತಮ್ಮ ಪೋಷಕರನ್ನು ದೇವರಂತೆ ಕಾಣಬೇಕು ಎಂದು ಹೇಳಿತು. ‘ಗುರು ಗ್ರಂಥ ಸಾಹಿಬ್​ನಲ್ಲಿ ಶ್ರೀ ಗುರು ರಾಮ್ ದಾಸ್ ಹೀಗೆ ಬರೆದಿದ್ದಾರೆ. ‘ಓ ಮಗನೇ, ನಿನ್ನ ತಂದೆಯ ಜೊತೆಗೆ ನೀನೇಕೆ ವಾದ ಮಾಡುತ್ತೀ? ನಿನ್ನನ್ನು ಬೆಳೆಸಿದವನೊಂದಿಗೆ ವಾದ ಮಾಡುವುದು ಪಾಪ’. ಪೋಷಕರನ್ನು ದೇವರಂತೆ ಕಾಣಬೇಕು ಎನ್ನಲು ಇಂಥ ವಾಕ್ಯಗಳು ನಮಗೆ ಮಾರ್ಗದರ್ಶಿಯಾಗಬೇಕು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.

(Punjab Haryana High Court Denies Sons Plea to Stay in Fathers House)

ಇದನ್ನೂ ಓದಿ: Senior Citizens IT Returns: ಹಿರಿಯ ನಾಗರಿಕರು ಐಟಿ ರಿಟರ್ನ್ಸ್ ಸಲ್ಲಿಸುವ ಅಗತ್ಯ ಇಲ್ಲ; ಷರತ್ತುಗಳು ಅನ್ವಯ

ಇದನ್ನೂ ಓದಿ: Senior Citizens Fixed Deposits: ಹಿರಿಯ ನಾಗರಿಕರಿಗೆ ಶೇ 7.25ರ ತನಕ ಬಡ್ಡಿ ದರ ನೀಡುವ ಟಾಪ್ 5 ಬ್ಯಾಂಕ್​ಗಳಿವು

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ