AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಎಲ್ಲರೂ ವಾಪಾಸ್ ಬನ್ನಿ… ಐಪಿಎಲ್ ಫ್ರಾಂಚೈಸಿಗಳಿಂದ ಸೂಚನೆ

IPL 2025: ಭಾರತ ಮತ್ತು ಪಾಕಿಸ್ತಾನ್ ನಡುವೆ ಕದನ ವಿರಾಮ ಘೋಷಣೆಯಾದ ಹಿನ್ನಲೆ ಮುಂದಿನ ವಾರದಿಂದ ಟೂರ್ನಿ ಪುನರಾರಂಭವಾಗುವ ಸಾಧ್ಯತೆಯಿದೆ. ಪ್ರಸ್ತುತ ಮಾಹಿತಿ ಪ್ರಕಾರ, ಮುಂದಿನ ಗುರುವಾರ ಅಥವಾ ಶುಕ್ರವಾರ ಐಪಿಎಲ್​ಗೆ ಮತ್ತೆ ಚಾಲನೆ ನೀಡಲು ಬಿಸಿಸಿಐ ನಿರ್ಧರಿಸಿದೆ. ಅಲ್ಲದೆ ಇದಕ್ಕಾಗಿ ಕೇಂದ್ರ ಅನುಮತಿಯನ್ನು ಪಡೆಯಲಿದ್ದಾರೆ. ಕೇಂದ್ರ ಸರ್ಕಾರದಿಂದ ಅನುಮತಿ ಲಭಿಸಿದರೆ ಮೇ 15 ಅಥವಾ 16 ರಿಂದ ಐಪಿಎಲ್ ಸೀಸನ್-18 ಮತ್ತೆ ಶುರುವಾಗಲಿದೆ.

IPL 2025: ಎಲ್ಲರೂ ವಾಪಾಸ್ ಬನ್ನಿ... ಐಪಿಎಲ್ ಫ್ರಾಂಚೈಸಿಗಳಿಂದ ಸೂಚನೆ
Rcb
ಝಾಹಿರ್ ಯೂಸುಫ್
|

Updated on: May 11, 2025 | 9:56 AM

Share

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಈ ವಾರದಲ್ಲೇ ಪುನಾರಂಭಗೊಳ್ಳುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಮ್ಮ ವಿದೇಶಿ ಆಟಗಾರರಿಗೆ ಭಾರತಕ್ಕೆ ಮರಳುವಂತೆ ಸೂಚನೆ ನೀಡಿದೆ ಎಂದು ವರದಿಯಾಗಿದೆ. ಭಾರತ ಮತ್ತು ಪಾಕಿಸ್ತಾನ್ ನಡುವಣ ಕದನ ವಿರಾಮದ ಘೋಷಣೆ ಬೆನ್ನಲ್ಲೇ ಐಪಿಎಲ್ ಪುನರಾರಂಭಿಸಲು ಬಿಸಿಸಿಐ ಚರ್ಚಿಸಿದೆ. ಅದರಂತೆ ಮೇ 15 ಅಥವಾ 16 ರಿಂದ ಟೂರ್ನಿ ಮತ್ತೆ ಶುರುವಾಗುವ ಸಾಧ್ಯತೆಯಿದೆ.

ಭಾನುವಾರ ಬಿಸಿಸಿಐ ಪದಾಧಿಕಾರಿಗಳು ಮತ್ತು ಐಪಿಎಲ್ ಆಡಳಿತ ಮಂಡಳಿಯು ಸಭೆ ಕರೆದಿದ್ದು, ಈ ಸಭೆಯ ಬಳಿಕ ಐಪಿಎಲ್ ಪುನರಾರಂಭದ ದಿನಾಂಕವನ್ನು ಫೈನಲ್ ಮಾಡುವ ಸಾಧ್ಯತೆಯಿದೆ. ಪ್ರಸ್ತುತ ಮಾಹಿತಿ ಪ್ರಕಾರ, ಮೇ ತಿಂಗಳಲ್ಲೇ ಟೂರ್ನಿಯನ್ನು ಪೂರ್ಣಗೊಳಿಸಲು ಬಿಸಿಸಿಐ ಚಿಂತಿಸಿದೆ.

ಹೀಗಾಗಿ ಗುರುವಾರ ಅಥವಾ ಶುಕ್ರವಾರದಿಂದ ಟೂರ್ನಿ ಆರಂಭವಾಗುವ ಸಾಧ್ಯತೆ ಹೆಚ್ಚಿದ್ದು, ಇದೇ ಕಾರಣದಿಂದಾಗಿ ಹಲವಾರು ಫ್ರಾಂಚೈಸಿಗಳು ಆಟಗಾರರು ಮತ್ತು ಸಿಬ್ಬಂದಿಯನ್ನು ಸಂಪರ್ಕಿಸಿ ಭಾರತಕ್ಕೆ ಹಿಂತಿರುಗಲು ಸಿದ್ಧರಾಗಿರಲು ಕೇಳಿಕೊಂಡಿವೆ.

ಇದನ್ನೂ ಓದಿ
Image
ಬೋಲ್ಡ್ ಫೋಟೋಗೆ ಬೌಲ್ಡ್ ಆಗಿ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ
Image
IPL 2025: ಪ್ಲೇಆಫ್​ ಆಡಲಿರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು
Image
IPL 2025: ಕರುಣ್ ನಾಯರ್ ಡಕೌಟ್: ಈ ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್?
Image
IPL ನಲ್ಲಿ ಬದಲಾವಣೆ: ರೌಂಡ್ ರಾಬಿನ್ ಸ್ವರೂಪ, ಒಂದು ತಂಡಕ್ಕೆ 18 ಪಂದ್ಯ

ಇದರ ನಡುವೆ ಒಂದು ಫ್ರಾಂಚೈಸಿಯ ಕೋಚಿಂಗ್ ಸಿಬ್ಬಂದಿಗಳು ಭಾನುವಾರ ವಿದೇಶಕ್ಕೆ ತೆರಳಬೇಕಿತ್ತು. ಆದರೆ ಇದೀಗ ಪ್ರಯಾಣವನ್ನು ಮುಂದೂಡುವಂತೆ ಅವರಿಗೆ ಸೂಚಿಸಲಾಗಿದೆ. ಅಂದರೆ ಈ ವಾರವೇ ಐಪಿಎಲ್ ಮರು ನಿಗದಿಯಾಗುವುದು ಕನ್ಫರ್ಮ್ ಎನ್ನಬಹುದು.

ಮತ್ತೊಂದೆಡೆ ಗುಜರಾತ್ ಟೈಟಾನ್ಸ್‌ ತಂಡದ ಇಬ್ಬರು ವಿದೇಶಿ ಆಟಗಾರರು ಮಾತ್ರ ತವರಿಗೆ ತೆರಳಿದ್ದಾರೆ. ಇಂಗ್ಲೆಂಡ್​ನ  ಜೋಸ್ ಬಟ್ಲರ್ ಮತ್ತು ಸೌತ್ ಆಫ್ರಿಕಾದ ಜೆರಾಲ್ಡ್ ಕೋಟ್ಝಿಯ ಮಾತ್ರ ಭಾರತದಿಂದ ತೆರಳಿದ್ದು, ಅವರನ್ನು ಮರಳಿ ಕರೆತರಲು ಫ್ರಾಂಚೈಸಿ ಪ್ರಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ.

ಅಲ್ಲದೆ ಸಾಧ್ಯವಾದಷ್ಟು ಬೇಗ ಪಂದ್ಯಾವಳಿಯನ್ನು ಪುನರಾರಂಭಿಸಲು ಯೋಜನೆಗಳು ನಡೆಯುತ್ತಿರುವುದರಿಂದ ಎಲ್ಲಾ ಫ್ರಾಂಚೈಸಿಗಳು ವಿದೇಶಿ ಆಟಗಾರರು ಮತ್ತು ತರಬೇತಿ ಸಿಬ್ಬಂದಿಯನ್ನು ಭಾರತಕ್ಕೆ ಮರಳಿ ಕರೆಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಮೇ ತಿಂಗಳಾಂತ್ಯದಲ್ಲಿ ಐಪಿಎಲ್ ಪೂರ್ಣಗೊಳ್ಳುವ ಸಾಧ್ಯತೆ ಹೆಚ್ಚಿದೆ.

57 ಪಂದ್ಯಗಳು ಪೂರ್ಣ:

ಇಂಡಿಯನ್ ಪ್ರೀಮಿಯರ್ ಲೀಗ್​ನ ಲೀಗ್​ ಹಂತದಲ್ಲಿ ಈವರೆಗೆ 57 ಪಂದ್ಯಗಳನ್ನಾಡಲಾಗಿದೆ. 58ನೇ ಪಂದ್ಯವು ಯುದ್ಧದ ಭೀತಿಯ ಕಾರಣ ಅರ್ಧದಲ್ಲೇ ಸ್ಥಗಿತಗೊಳಿಸಲಾಗಿತ್ತು. ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಈ ಪಂದ್ಯವನ್ನು ಮರು ನಿಗದಿ ಮಾಡಲು ಬಿಸಿಸಿಐ ನಿರ್ಧರಿಸಿದ್ದು, ಹೀಗಾಗಿ ಈ ಪಂದ್ಯದೊಂದಿಗೆ ಐಪಿಎಲ್ ಮತ್ತೆ ಶುರುವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: IPL 2025: ಮುಂದಿನ ಪಂದ್ಯಕ್ಕೆ RCB ನಾಯಕನೇ ಅಲಭ್ಯ..!

ಅದರಂತೆ ಲೀಗ್ ಹಂತದಲ್ಲಿ 13 ಪಂದ್ಯಗಳು ನಡೆಯಬೇಕಿದ್ದು, ಈ ಪಂದ್ಯಗಳ ಮೂಲಕ ಈ ಬಾರಿ ಪ್ಲೇಆಫ್ ಆಡಲಿರುವ 4 ತಂಡಗಳಾವುವು ಎಂಬುದು ನಿರ್ಧಾರವಾಗಲಿದೆ. ಇದಾದ ಬಳಿಕ ಪ್ಲೇಆಫ್ ಸುತ್ತಿನಲ್ಲಿ 4 ಮ್ಯಾಚ್​ಗಳು ನಡೆಯಲಿದೆ.