ತಮಿಳುನಾಡಲ್ಲಿ ಮನೆಯಲ್ಲೇ ಮಹಿಳೆಗೆ ಹೆರಿಗೆ; ಪೋಷಕರ ನಿರ್ಲಕ್ಷ್ಯದಿಂದ ತಾಯಿ-ಮಗು ಇಬ್ಬರೂ ಸಾವು

|

Updated on: Jan 16, 2025 | 11:25 PM

ತಮಿಳುನಾಡಿನಲ್ಲಿ ಮನೆಯಲ್ಲೇ ಹೆರಿಗೆಯಾದ ಬಳಿಕ 31 ವರ್ಷದ ಮಹಿಳೆ ಆಕೆಯ ಮಗು ಇಬ್ಬರೂ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಘಟನೆ ರಾಣಿಪೇಟೆ ಮತ್ತು ತಮಿಳುನಾಡು ರಾಜ್ಯದಲ್ಲಿ ಆಘಾತದ ಅಲೆಗಳನ್ನು ಸೃಷ್ಟಿಸಿದ್ದು, ಹೆರಿಗೆಯ ಸಮಯದಲ್ಲಿ ತೆಗೆದುಕೊಳ್ಳಬೇಕಾದ ವೈದ್ಯಕೀಯ ಸೌಲಭ್ಯದ ಮಹತ್ವವನ್ನು ಎತ್ತಿ ತೋರಿಸಿದೆ. ಈ ಘಟನೆಯ ಸುತ್ತಲಿನ ಸಂದರ್ಭಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಮಿಳುನಾಡಲ್ಲಿ ಮನೆಯಲ್ಲೇ ಮಹಿಳೆಗೆ ಹೆರಿಗೆ; ಪೋಷಕರ ನಿರ್ಲಕ್ಷ್ಯದಿಂದ ತಾಯಿ-ಮಗು ಇಬ್ಬರೂ ಸಾವು
Baby (2)
Follow us on

ರಾಣಿಪೇಟೆ: ತಮಿಳುನಾಡಿನ ರಾಣಿಪೇಟೆ ನಗರವನ್ನು ಒಂದು ದುರಂತ ಘಟನೆ ಬೆಚ್ಚಿಬೀಳಿಸಿದೆ. ಅಲ್ಲಿ 31 ವರ್ಷದ ಮಹಿಳೆ ಜ್ಯೋತಿ ಆಸ್ಪತ್ರೆಗೆ ತೆರಳದೆ ಮನೆಯಲ್ಲೇ ಹೆರಿಗೆ ಮಾಡಿಸಿಕೊಂಡಿದ್ದಾರೆ. ಸುಸೂತ್ರವಾಗಿ ಡೆಲಿವರಿಯೂ ಆಗಿದೆ. ಆದರೆ, ಅದಾದ ಸ್ವಲ್ಪ ಹೊತ್ತಿನಲ್ಲೇ ಆಕೆ ಮತ್ತು ನವಜಾತ ಶಿಶು ಇಬ್ಬರೂ ಸಾವನ್ನಪ್ಪಿದ್ದಾರೆ. ಪೊಂಗಲ್ ಹಬ್ಬದ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಮಹಿಳೆಯ ಸಂಬಂಧಿಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ತಮಿಳ್ ಸೆಲ್ವನ್ ಅವರ ಪತ್ನಿ ಜ್ಯೋತಿ ತಮ್ಮ ಮೂವರು ಮಕ್ಕಳೊಂದಿಗೆ ರಾಣಿಪೇಟೆ ಜಿಲ್ಲೆಯ ಆರ್ಕಾಟ್‌ನ ತಿರುನಾವುಕ್ಕರಸು ಬೀದಿಯಲ್ಲಿ ವಾಸಿಸುತ್ತಿದ್ದರು. ಅವರು ತಮ್ಮ ನಾಲ್ಕನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಸಂಕ್ರಾಂತಿ ಆಚರಿಸಲು ಆರ್ಕಾಟ್‌ನಲ್ಲಿರುವ ತಮ್ಮ ತಾಯಿಯ ಮನೆಗೆ ಪ್ರಯಾಣಿಸಿದ್ದರು. ಈ ಘಟನೆ ನಡೆದ ದಿನ, ಜ್ಯೋತಿಗೆ ಬೆಳಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿತು. ಆದರೆ ಅವರ ಸಂಬಂಧಿಕರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಿಲ್ಲ.

ಇದನ್ನೂ ಓದಿ: ಮದುವೆ ನಾಲ್ಕು ದಿನ ಇರುವಾಗ ಪೊಲೀಸರೆದುರೇ ಗುಂಡಿಕ್ಕಿ ಮಗಳ ಹತ್ಯೆಗೈದ ತಂದೆ

ಈ ಕಾರಣದಿಂದ ಆಕೆಗೆ ಮನೆಯಲ್ಲೇ ಹೆರಿಗೆಯಾಗಿದೆ. ಇದರ ಪರಿಣಾಮವಾಗಿ ಜ್ಯೋತಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದರು. ನಂತರ ಮಹಿಳೆಯ ತಾಯಿ- ಮಗುವಿನ ಶವವನ್ನು ಚೀಲದಲ್ಲಿ ಬಚ್ಚಿಟ್ಟು ಆಕೆಯ ಮನೆಯವರು ಜ್ಯೋತಿ ಪ್ರಜ್ಞಾಹೀನಳಾಗಿದ್ದಾಳೆಂದು ಹೇಳಿ ಆರ್ಕಾಟ್ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರು ಜ್ಯೋತಿ ಹೆರಿಗೆಯಾದ ಕೂಡಲೆ ಸಾವನ್ನಪ್ಪಿದ್ದಾಳೆಂದು ಕಂಡುಹಿಡಿದರು.

ಈ ಬಗ್ಗೆ ಪ್ರಶ್ನಿಸಿದಾಗ ಜ್ಯೋತಿಯ ತಾಯಿ ಸತ್ಯವನ್ನು ಬಹಿರಂಗಪಡಿಸಿದರು. ಜ್ಯೋತಿಗೆ ಮನೆಯಲ್ಲಿಯೇ ಹೆರಿಗೆಯಾಗಿದೆ. ತಾಯಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಮಗುವಿನ ಶವವನ್ನು ಮನೆಯಲ್ಲಿಯೇ ಚೀಲದಲ್ಲಿ ಬಚ್ಚಿಟ್ಟಿದ್ದಾಗಿ ಅವರು ಒಪ್ಪಿಕೊಂಡರು. ನಂತರ ವೈದ್ಯರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ಮಹಾಕುಂಭಕ್ಕೆ ಹೋಗುತ್ತಿದ್ದ ರೈಲಿನ ಎಸಿ ಕೋಚ್​ನಲ್ಲಿ ವ್ಯಕ್ತಿಯಿಂದ ಮೂತ್ರ ವಿಸರ್ಜನೆ; ಪ್ರಯಾಣಿಕರ ಆಕ್ರೋಶ

ಆರ್ಕಾಟ್ ನಗರ ಪೊಲೀಸರು ಜ್ಯೋತಿಯ ಮನೆಗೆ ಹೋಗಿ ಚೀಲದಲ್ಲಿ ಅಡಗಿಸಿಟ್ಟಿದ್ದ ಮಗುವನ್ನು ಮತ್ತೆ ಆಸ್ಪತ್ರೆಗೆ ತಂದರು. ನಂತರ, ಪೊಲೀಸರು ತಾಯಿ ಮತ್ತು ಮಗುವಿನ ಶವಗಳನ್ನು ಶವಪರೀಕ್ಷೆಗಾಗಿ ಅಕ್ಕಂಪರೈ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ಪೊಲೀಸರು ಜ್ಯೋತಿಯ ತಾಯಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಜ್ಯೋತಿಗೆ ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆ ಸಿಕ್ಕಿದ್ದರೆ, ಆಕೆ ಮತ್ತು ಮಗು ಇಬ್ಬರೂ ಬದುಕುಳಿಯುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:24 pm, Thu, 16 January 25