ಮದುವೆ ನಾಲ್ಕು ದಿನ ಇರುವಾಗ ಪೊಲೀಸರೆದುರೇ ಗುಂಡಿಕ್ಕಿ ಮಗಳ ಹತ್ಯೆಗೈದ ತಂದೆ
ಮದುವೆಗೆ ನಾಲ್ಕೇ ನಾಲ್ಕು ದಿನ ಇರುವಾಗ ತಂದೆಯೊಬ್ಬರು ಮಗಳನ್ನು ಗುಂಡಿಕ್ಕಿ ಹತ್ಯೆ ಮಾದಿರುವ ಘಟನೆ ಗ್ವಾಲಿಯರ್ನಲ್ಲಿ ನಡೆದಿದೆ. ತನ್ನ ಕೊಲೆಗೆ ಕೆಲವೇ ಗಂಟೆಗಳ ಮೊದಲು, ತನು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡಿ ಹಂಚಿಕೊಂಡಿದ್ದಾಳೆ, ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನ ಕುಟುಂಬವು ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ್ದಳು. ನಾನು ವಿಕ್ಕಿಯನ್ನು ಮದುವೆಯಾಗಲು ಬಯಸುತ್ತೇನೆ. ನನ್ನ ಮನೆಯವರು ಆರಂಭದಲ್ಲಿ ಒಪ್ಪಿದ್ದರು ಆದರೆ ನಂತರ ನಿರಾಕರಿಸಿದರು ಎಂದು ಹೇಳಿದ್ದಳು.
ಮದುವೆ ನಿಶ್ಚಯವಾಗಿತ್ತು, ಜನವರಿ 18 ರಂದು ಮದುವೆ ನಡೆಯಬೇಕಿತ್ತು, ನಾಲ್ಕೇ ನಾಲ್ಕು ದಿನ ಇರುವಾಗ ತಂದೆಯೊಬ್ಬ ಮಗಳಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಗ್ವಾಲಿಯರ್ನಲ್ಲಿ ನಡೆದಿದೆ.ಪೊಲೀಸ್ ಅಧಿಕಾರಿಗಳ ಎದುರೇ ವ್ಯಕ್ತಿಯೊಬ್ಬ ತನ್ನ 20 ವರ್ಷದ ಮಗಳನ್ನು ಗುಂಡಿಕ್ಕಿ ಕೊಂದಿದ್ದಾನೆ. ಮಗಳು ತನು ಗುರ್ಜಾರ್ ತನ್ನ ಮನೆಯವರು ಏರ್ಪಡಿಸಿದ್ದ ಮದುವೆಯನ್ನು ಸಾರ್ವಜನಿಕವಾಗಿ ವಿರೋಧಿಸಿ, ತನ್ನ ಸ್ವಂತ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಳು.
ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ನಗರದ ಗೋಲಾ ಕಾ ಮಂದಿರ ಪ್ರದೇಶದಲ್ಲಿ ಈ ಹತ್ಯೆ ನಡೆದಿದೆ. ಸಂತ್ರಸ್ತೆಯ ತಂದೆ ಮಹೇಶ್ ಗುರ್ಜಾರ್, ಆ ದಿನದ ಆರಂಭದಲ್ಲಿ ತನ್ನ ಮಗಳು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಿಂದ ಕೋಪಗೊಂಡರು. ದೇಶಿ ನಿರ್ಮಿತ ಬಂದೂಕಿನಿಂದ ಆಕೆಯನ್ನು ತುಂಬಾ ಹತ್ತಿರದಿಂದ ಶೂಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಂಬಂಧಿ ರಾಹುಲ್ ಕೂಡ ಆಕೆಗೆ ಗುಂಡು ಹಾರಿಸಿದ್ದಾನೆ.
ತನ್ನ ಕೊಲೆಗೆ ಕೆಲವೇ ಗಂಟೆಗಳ ಮೊದಲು, ತನು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡಿ ಹಂಚಿಕೊಂಡಿದ್ದಾಳೆ, ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನ ಕುಟುಂಬವು ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ್ದಳು. 52 ಸೆಕೆಂಡುಗಳ ವೀಡಿಯೊದಲ್ಲಿ, ತನ್ನ ತಂದೆ ಮಹೇಶ್ ಮತ್ತು ಇತರ ಕುಟುಂಬ ಸದಸ್ಯರನ್ನು ತನ್ನ ಸಂಕಟಕ್ಕೆ ಕಾರಣ ಎಂದು ಹೆಸರಿಸಿದ್ದಾಳೆ, ತನ್ನ ಜೀವ ಭಯವನ್ನು ವ್ಯಕ್ತಪಡಿಸಿದ್ದಳು.
ಮತ್ತಷ್ಟು ಓದಿ: ಪತಿಯೇ ವಿಷಹಾಕಿ ಕಾಲುವೆಗೆ ದೂಡಿದ: ವಿಜಯಪುರ ಆತ್ಮಹತ್ಯೆಯತ್ನ ಪ್ರಕರಣಕ್ಕೆ ಹೊಸ ತಿರುವು
ನಾನು ವಿಕ್ಕಿಯನ್ನು ಮದುವೆಯಾಗಲು ಬಯಸುತ್ತೇನೆ. ನನ್ನ ಮನೆಯವರು ಆರಂಭದಲ್ಲಿ ಒಪ್ಪಿದ್ದರು ಆದರೆ ನಂತರ ನಿರಾಕರಿಸಿದರು . ಅವರು ನನ್ನನ್ನು ಪ್ರತಿದಿನ ಥಳಿಸುತ್ತಿದ್ದಾರೆ ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾರೆ. ನನಗೆ ಏನಾದರೂ ಆದರೆ ಅದಕ್ಕೆ ನನ್ನ ಕುಟುಂಬದವರು ಹೊಣೆಯಾಗುತ್ತಾರೆ ಎಂದು ವಿಡಿಯೋದಲ್ಲಿ ಹೇಳಿದ್ದಳು.
ವಿಕ್ಕಿ ಉತ್ತರ ಪ್ರದೇಶದ ಆಗ್ರಾ ನಿವಾಸಿಯಾಗಿದ್ದು, ಆರು ವರ್ಷಗಳಿಂದ ತನು ಜೊತೆ ಸಂಬಂಧ ಹೊಂದಿದ್ದರು. ವೀಡಿಯೊ ವೈರಲ್ ಆದ ನಂತರ ಪೊಲೀಸ್ ಅಧಿಕಾರಿಗಳ ತಂಡವು ಇಬ್ಬರ ನಡುವೆ ಸಂಧಾನ ಮಾಡಿಸಲು ಮನೆಗೆ ಬಂದಿತ್ತು. ಆ ಸಮಯದಲ್ಲಿ ತನು ಮನೆಯಲ್ಲಿ ಇರಲು ನಿರಾಕರಿಸಿದಳು. ಆಗ ತಂದೆ ರೂಮಿಗೆ ಕರೆದೊಯ್ದು ಖಾಸಗಿಯಾಗಿ ಮಾತನಾಡಬೇಕೆಂದರು.
ನಂತರ ನಡೆದದ್ದು ಭಯಾನಕ ಘಟನೆ. ಬಂದೂಕಿನಿಂದ ಮಗಳ ಮೇಲೆ ಗುಂಡು ಹಾರಿಸಿದ್ದರು. ಅದು ಆಕೆಯ ಕುತ್ತಿಗೆ, ಕಣ್ಣು, ಮೂಗಿನ ನಡುವಿನ ಪ್ರದೇಶಕ್ಕೆ ತಗುಲಿತ್ತು ತಕ್ಷಣವೇ ಕುಸಿದುಬಿದ್ದಳು. ತಕ್ಷಣವೇ ಪೊಲೀಸರು ಅಲ್ಲಿಗೆ ಬಂದು ನಡೆದಿರುವ ಘಟನೆ ನೋಡಿ ಬೆಚ್ಚಿಬಿದ್ದರು.
ಮಹೇಶ್ ಗುರ್ಜರ್ ನನ್ನು ಬಂಧಿಸಲಾಗಿದ್ದು, ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಹುಲ್ ಪತ್ತೆ ಮತ್ತು ಬಂಧನಕ್ಕೆ ಪ್ರಯತ್ನಗಳು ನಡೆಯುತ್ತಿವೆ. ತನು ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Wed, 15 January 25