ಮಹಾಕುಂಭಕ್ಕೆ ಹೋಗುತ್ತಿದ್ದ ರೈಲಿನ ಎಸಿ ಕೋಚ್​ನಲ್ಲಿ ವ್ಯಕ್ತಿಯಿಂದ ಮೂತ್ರ ವಿಸರ್ಜನೆ; ಪ್ರಯಾಣಿಕರ ಆಕ್ರೋಶ

ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಕ್ಕೆ ಹೋಗುತ್ತಿದ್ದ ಸಂಗಮ್ ಎಕ್ಸ್‌ಪ್ರೆಸ್‌ ರೈಲಿನ ಎಸಿ ಕೋಚ್‌ನಲ್ಲಿ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡಿದ್ದಾರೆ. ಈ ಘಟನೆಯನ್ನು ಪ್ರಯಾಣಿಕರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಆಕ್ರೋಶಕ್ಕೆ ಗುರಿಯಾಗಿದೆ. ರೈಲ್ವೆ ಅಧಿಕಾರಿಗಳು ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮಹಾಕುಂಭಕ್ಕೆ ಹೋಗುತ್ತಿದ್ದ ರೈಲಿನ ಎಸಿ ಕೋಚ್​ನಲ್ಲಿ ವ್ಯಕ್ತಿಯಿಂದ ಮೂತ್ರ ವಿಸರ್ಜನೆ; ಪ್ರಯಾಣಿಕರ ಆಕ್ರೋಶ
Sangam Express Train
Follow us
ಸುಷ್ಮಾ ಚಕ್ರೆ
|

Updated on: Jan 16, 2025 | 10:15 PM

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮೀರತ್‌ನಿಂದ ಮಹಾಕುಂಭಕ್ಕೆ ಹೋಗುವ ಸಂಗಮ್ ಎಕ್ಸ್‌ಪ್ರೆಸ್‌ ರೈಲಿನ ಎಸಿ ಕೋಚ್‌ನಲ್ಲಿ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡಿದ ನಾಚಿಕೆಗೇಡಿನ ಘಟನೆ ನಡೆದಿದೆ. ಇದು ಆ ಕೋಚ್‌ನಲ್ಲಿದ್ದ ಪ್ರಯಾಣಿಕರನ್ನು ಆಘಾತ ಮತ್ತು ಕೋಪಕ್ಕೆ ಒಳಪಡಿಸಿದೆ. ರೈಲ್ವೆ ಅಧಿಕಾರಿಗಳು ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸಂಗಮ್ ಎಕ್ಸ್‌ಪ್ರೆಸ್ ರೈಲು ಮೀರತ್‌ನಿಂದ ಪ್ರಯಾಗ್‌ರಾಜ್‌ಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಆರೋಪಿ ತನ್ನ ಸೀಟಿನಿಂದ ಎದ್ದು, ತನ್ನ ಪ್ಯಾಂಟ್‌ನ ಜಿಪ್ ಬಿಚ್ಚಿ, ಮಹಿಳಾ ಮತ್ತು ವೃದ್ಧ ಪ್ರಯಾಣಿಕರ ಮುಂದೆಯೇ ಬಹಿರಂಗವಾಗಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಆ ವ್ಯಕ್ತಿ 3ನೇ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇಡೀ ಘಟನೆಯನ್ನು ಪ್ರಯಾಣಿಕರು ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Viral: ಸೀಟಿಗಾಗಿ ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಬ್ಬರ ನಡುವೆ ನಡೆಯಿತು ಜಡೆ ಜಗಳ; ವಿಡಿಯೋ ವೈರಲ್‌

ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪ್ರತಿ ರೈಲು ಬೋಗಿಯಲ್ಲಿ ಪ್ರತಿ ಬದಿಯಲ್ಲಿ ಎರಡು ಶೌಚಾಲಯಗಳಿರುತ್ತವೆ. ರೈಲಿನಲ್ಲಿ ಎರಡು ಶೌಚಾಲಯಗಳಿದ್ದರೂ ಆ ವ್ಯಕ್ತಿ ರೈಲಿನ ಕೋಚ್​ನೊಳಗೇ ಮೂತ್ರ ವಿಸರ್ಜನೆ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನ ಜೊತೆ ನಟ ಗೋಲ್ಡನ್ ಸ್ಟಾರ್​ ಗಣೇಶ್​ಗೆ ಅವಿನಾಭಾವ ಸಂಬಂಧ
ಮಂಗಳೂರಿನ ಜೊತೆ ನಟ ಗೋಲ್ಡನ್ ಸ್ಟಾರ್​ ಗಣೇಶ್​ಗೆ ಅವಿನಾಭಾವ ಸಂಬಂಧ
ಗೃಹ ಸಚಿವ ಸ್ಟ್ಯಾಂಡಿಂಗ್ ಇನ್ಸಸ್ಟ್ರಕ್ಷನ್​ಗಳ ಬಗ್ಗೆ ಮಾತ್ರ ಮಾತಾಡುತ್ತಾರೆ
ಗೃಹ ಸಚಿವ ಸ್ಟ್ಯಾಂಡಿಂಗ್ ಇನ್ಸಸ್ಟ್ರಕ್ಷನ್​ಗಳ ಬಗ್ಗೆ ಮಾತ್ರ ಮಾತಾಡುತ್ತಾರೆ
ತಮ್ಮ ಬದಲು ರಮೇಶ್ ಜಾರಕಿಹೊಳಿಯನ್ನು ಮಾತಾಡಲು ಬಿಟ್ಟರೇ ಯತ್ನಾಳ್?
ತಮ್ಮ ಬದಲು ರಮೇಶ್ ಜಾರಕಿಹೊಳಿಯನ್ನು ಮಾತಾಡಲು ಬಿಟ್ಟರೇ ಯತ್ನಾಳ್?
ವಿಜಯೇಂದ್ರರನ್ನು ಸಿಎಂ ಮಾಡುವ ಸಂಕಲ್ಪ ತೊಟ್ಟಿದ್ದೇವೆ: ರೇಣುಕಾಚಾರ್ಯ
ವಿಜಯೇಂದ್ರರನ್ನು ಸಿಎಂ ಮಾಡುವ ಸಂಕಲ್ಪ ತೊಟ್ಟಿದ್ದೇವೆ: ರೇಣುಕಾಚಾರ್ಯ
ಪತ್ನಿ ಜೊತೆ ಚಾಮುಂಡಿ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದ ನಟ ದರ್ಶನ್
ಪತ್ನಿ ಜೊತೆ ಚಾಮುಂಡಿ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದ ನಟ ದರ್ಶನ್
ಒಟ್ಟು ಆರು ಇರಿತದ ಗಾಯಗಳೊಂದಿಗೆ ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲು
ಒಟ್ಟು ಆರು ಇರಿತದ ಗಾಯಗಳೊಂದಿಗೆ ಸೈಫ್ ಅಲಿ ಖಾನ್ ಆಸ್ಪತ್ರೆಗೆ ದಾಖಲು
ಚಾಮರಾಜಪೇಟೆ ಘಟನೆ ಖಂಡಿಸಿ ಮೈಸೂರಲ್ಲಿ ಬಿಜೆಪಿ ಮುಖಂಡರ ಪ್ರತಿಭಟನೆ
ಚಾಮರಾಜಪೇಟೆ ಘಟನೆ ಖಂಡಿಸಿ ಮೈಸೂರಲ್ಲಿ ಬಿಜೆಪಿ ಮುಖಂಡರ ಪ್ರತಿಭಟನೆ
ಗನ್ ಲೈಸೆನ್ಸ್ ರದ್ದು ಮಾಡೋದು ಬೇಡವೆಂದು ಪೊಲೀಸರಿಗೆ ದರ್ಶನ್ ಮನವಿ
ಗನ್ ಲೈಸೆನ್ಸ್ ರದ್ದು ಮಾಡೋದು ಬೇಡವೆಂದು ಪೊಲೀಸರಿಗೆ ದರ್ಶನ್ ಮನವಿ
ಎರಡೆರಡು ಹುದ್ದೆಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ: ಪರಮೇಶ್ವರ್
ಎರಡೆರಡು ಹುದ್ದೆಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ: ಪರಮೇಶ್ವರ್
ಕಟ್ಟಡದ 13ನೇ ಮಹಡಿಯಿಂದ ಮೂರು ಬಾರಿ ಜಿಗಿದರೂ ಬದುಕಿದ ಕಾರ್ಮಿಕ
ಕಟ್ಟಡದ 13ನೇ ಮಹಡಿಯಿಂದ ಮೂರು ಬಾರಿ ಜಿಗಿದರೂ ಬದುಕಿದ ಕಾರ್ಮಿಕ