AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Village Cooking Channel: ಐತಿಹಾಸಿಕ ಸಾಧನೆ ಮಾಡಿದ ತಮಿಳು ವಿಲೇಜ್​ ಕುಕ್ಕಿಂಗ್ ಚಾನಲ್​; ಇಲ್ಲಿ ರಾಹುಲ್​ ಗಾಂಧಿಯೂ ಅಡುಗೆ ಮಾಡಿದ್ದರು !

ಈ ಹಳ್ಳಿ ಅಡುಗೆ ಚಾನಲ್​ ಶುರು ಮಾಡಿದ್ದು 75 ವರ್ಷದ ಪೆರಿಯಥಾಂಬಿ ಮತ್ತು ಅವರ ಮೊಮ್ಮಕ್ಕಳಾದ ಅಯ್ಯನಾರ್, ಮುರುಗೇಶನ್, ತಮಿಳುಸೆಲ್ವನ್, ಮುತ್ತುಮಾನಿಕಂ ಮತ್ತು ಸುಬ್ರಮಣಿಯನ್.

Tamil Village Cooking Channel: ಐತಿಹಾಸಿಕ ಸಾಧನೆ ಮಾಡಿದ ತಮಿಳು ವಿಲೇಜ್​ ಕುಕ್ಕಿಂಗ್ ಚಾನಲ್​; ಇಲ್ಲಿ ರಾಹುಲ್​ ಗಾಂಧಿಯೂ ಅಡುಗೆ ಮಾಡಿದ್ದರು !
ವಿಲೇಜ್​ ಕುಕ್ಕಿಂಗ್​ ಯೂಟ್ಯೂಬ್​ ಚಾನಲ್​ನ ಅಜ್ಜ-ಮೊಮ್ಮಕ್ಕಳು
Follow us
TV9 Web
| Updated By: Lakshmi Hegde

Updated on:Jul 06, 2021 | 5:25 PM

ತಮಿಳುನಾಡಿನ ಹೆಸರುವಾಸಿ ವಿಲೇಜ್​ ಕುಕ್ಕಿಂಗ್​ ಚಾನಲ್​ (Village Cooking Channel-VCC) ಈಗೊಂದು ಐತಿಹಾಸಿಕ ಸಾಧನೆ ಮಾಡಿದೆ. ವಿಲೇಜ್​ ಕುಕ್ಕಿಂಗ್​ ಚಾನಲ್​ ಯಾವುದು ಅಂತ ಗೊತ್ತಾಗಿರಬೇಕಲ್ಲ..! ಅದೇ ಜನವರಿಯಲ್ಲಿ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಹೋಗಿದ್ದ ರಾಹುಲ್ ಗಾಂಧಿ, ಮಶ್ರೂಮ್​ ಬಿರ್ಯಾನಿ ಮಾಡಿದ್ದರಲ್ಲ..ಅದೇ ಅಡುಗೆ ಚಾನಲ್. ಆ ಕುಕ್ಕಿಂಗ್​ ಚಾನಲ್​ ಇದೀಗ ಯೂಟ್ಯೂಬ್​​ನಲ್ಲಿ ಬರೋಬ್ಬರಿ 1 ಕೋಟಿ ಚಂದಾದಾರರನ್ನು (subscribers) ನ್ನು ಹೊಂದಿದೆ. ಅಷ್ಟೇ ಅಲ್ಲ 1 ಕೋಟಿ ಸಬ್​ಸ್ಕ್ರೈಬರ್ಸ್​ ಹೊಂದಿದ ತಮಿಳಿನ ಮೊದಲ ಯೂಟ್ಯೂಬ್​ ಚಾನಲ್​ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಈ ಹಳ್ಳಿ ಅಡುಗೆ ಚಾನಲ್​ ಶುರು ಮಾಡಿದ್ದು 75 ವರ್ಷದ ಪೆರಿಯಥಾಂಬಿ ಮತ್ತು ಅವರ ಮೊಮ್ಮಕ್ಕಳಾದ ಅಯ್ಯನಾರ್, ಮುರುಗೇಶನ್, ತಮಿಳುಸೆಲ್ವನ್, ಮುತ್ತುಮಾನಿಕಂ ಮತ್ತು ಸುಬ್ರಮಣಿಯನ್. 2018ರ ಏಪ್ರಿಲ್​ನಿಂದ ಶುರುವಾದ ಅಡುಗೆ ಚಾನಲ್​ ಭರ್ಜರಿ ಯಶಸ್ಸುಕಂಡಿದೆ. ಕೊವಿಡ್​ 19 ವಿರುದ್ಧ ಹೋರಾಟಕ್ಕಾಗಿ ಈ ತಮಿಳು ವಿಲೇಜ್​ ಕುಕ್ಕಿಂಗ್​ ಚಾನಲ್​ನಿಂದ ಬಂದ ಆದಾಯದಲ್ಲಿ 10 ಲಕ್ಷ ರೂಪಾಯಿಯನ್ನು ತಾತ-ಮೊಮ್ಮಕ್ಕಳು ಮುಖ್ಯಮಂತ್ರಿ ಕೊವಿಡ್ 19 ಪರಿಹಾರ ನಿಧಿಗೆ ನೀಡಿದ್ದಾರೆ. ​

ಇದು ಪಕ್ಕಾ ಹಳ್ಳಿಗಳ, ಸಂಪ್ರದಾಯ ಬದ್ಧ ಅಡುಗೆ ಮಾಡಿ ತೋರಿಸುವ ಚಾನಲ್​. ಯಾವುದೇ ಮನೆಯೊಳಗೆ ಅಡುಗೆ ಮಾಡದೆ ಪುಡುಕೊಟ್ಟಾಯ್​ ಜಿಲ್ಲೆಯ ಒಂದು ಕೃಷಿ ಭೂಮಿಯಲ್ಲಿ ಇವರೆಲ್ಲ ಸೇರಿ ಸಾಂಪ್ರದಾಯಿಕ, ಹಳ್ಳಿ ಅಡುಗೆಗಳನ್ನು ಮಾಡುತ್ತಾರೆ. ವೆಜ್​, ನಾನ್​ವೆಜ್​ ಅಡುಗೆಗಳನ್ನು ತಯಾರಿಸಿ, ಅದನ್ನು ನಂತರ ಅನಾಥಾಶ್ರಮಗಳಿಗೆ, ಬಡ ಜನರಿಗೆ ಹಂಚುತ್ತಾರೆ. ಇತ್ತ ಅಡುಗೆಯೂ ಆಯಿತು, ಅತ್ತ ಸಹಾಯವೂ ಆಯಿತು ಎಂಬಂತೆ ಕೆಲಸ ಮಾಡುತ್ತಿದ್ದಾರೆ. ಪೆರಿಯಾಥಂಬಿ ಅವರು ಕಳೆದ 50 ವರ್ಷಗಳಿಂದಲೂ ಅಡುಗೆ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೆ ಹೆಸರು ತಂದುಕೊಟ್ಟಿದ್ದು ಈ ಯೂಟ್ಯೂಬ್ ಚಾನಲ್​. ಇದು ನನ್ನ ಶ್ರಮ ಮಾತ್ರವಲ್ಲ…ಎಲ್ಲ ಸಾಧ್ಯವಾಗಿದ್ದು ಮೊಮ್ಮಕ್ಕಳಿಂದಲೇ ಎನ್ನುತ್ತಾರೆ ಪೆರಿಯಾಥಂಬಿ. ನನಗೆ ಯೂಟ್ಯೂಬ್ ಚಾನಲ್​ ಎಂದರೇನು ಎಂದೇ ಗೊತ್ತಿರಲಿಲ್ಲ. ಮೊಮ್ಮಕ್ಕಳೇ ಎಲ್ಲ ವಿವರಿಸಿದರು. ಅದೀಗ ಇಷ್ಟರ ಮಟ್ಟಿಗೆ ಯಶಸ್ಸು ಕಂಡಿದೆ ಎಂದಿದ್ದಾರೆ.

ಯೂಟ್ಯೂಬ್​ ಚಾನಲ್​ ಮಾಡಿದ ಪ್ರಾರಂಭದಲ್ಲಿ ನಮಗೆ ಸುಮಾರು 1.5 ಲಕ್ಷ ರೂಪಾಯಿಯಷ್ಟು ನಷ್ಟವಾಯಿತು. ಅಷ್ಟೊಂದು ಜನರೇನೂ ಇಷ್ಟಪಡುತ್ತಿರಲಿಲ್ಲ. 2019ರಷ್ಟೊತ್ತಿಗೆ ಕೇವಲ 37 ಸಾವಿರ ಸಬ್​ಸ್ಕ್ರೈಬರ್​​ ಇದ್ದರು. ಬಳಿಕ ರೂಪುರೇಷೆಯಲ್ಲಿ ಬದಲಾವಣೆ ಮಾಡಿಕೊಂಡೆವು. ಈಗ ಇಷ್ಟರ ಮಟ್ಟಿಗೆ ಜನರು ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಪೆರಿಯಾಥಂಬಿ ಮೊಮ್ಮಕ್ಕೂ ಅಡುಗೆ ಮಾಡುವ ಜತೆ ವಿದ್ಯಾವಂತರೂ ಆಗಿದ್ದಾರೆ. ಸುಬ್ರಹ್ಮಣಿಯನ್​ ಅವರು ಕಾಮರ್ಸ್​​ನಲ್ಲಿ ಎಂಫಿಲ್​ ಮಾಡಿದ್ದಾರೆ. ವಿಡಿಯೋ ಶೂಟ್​ ಮಾಡುವುದು, ಎಡಿಟ್​ ಮಾಡುವುದು ಇವರದ್ದೇ ಜವಾಬ್ದಾರಿ. ತಮಿಳುಸೆಲ್ವನ್ ನ್ಯಾನೊತಂತ್ರಜ್ಞಾನದಲ್ಲಿ ಎಂಫಿಲ್​ ಮಾಡಿದ್ದರೆ, ಮುತ್ತುಮಾನಿಕಂ ಹೋಟೆಲ್ ಮ್ಯಾನೇಜ್​ಮೆಂಟ್​ ಓದಿದ್ದಾರೆ. ಅಯ್ಯನಾರ್​ ಅವರು ಬಿಕಾಂ ಪದವಿ ಗಳಿಸಿದ್ದಾರೆ.

Rahul Gandhi

ರಾಹುಲ್​ ಗಾಂಧಿ ಭೇಟಿಕೊಟ್ಟ ಸಂದರ್ಭ

ಫ್ರೂಟ್ ಸಲಾಡ್​ ಮಾಡುವುದನ್ನು ತೋರಿಸಿದ ವಿಧಾನ:

ಇದನ್ನೂ ಓದಿ: ರಾಖಿ ಸಾವಂತ್​ಗೆ ಪಾಠ ಕಲಿಸಿ, ಪ್ರಾಮಿಸ್​ ಮಾಡಿದ್ದ ಸಲ್ಲು; ಎಲ್ಲವನ್ನೂ ಬಾಯ್ಬಿಟ್ಟ ನಟಿ

Tamil Nadu Village Cooking Channel hits 1 crore YouTube subscribers

Published On - 5:22 pm, Tue, 6 July 21

ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಹೇಗಿದೆ ನೋಡಿ ‘ಭರ್ಜರಿ ಬ್ಯಾಚುಲರ್ಸ್​’ ಹಳ್ಳಿ ಜೀವನ; ಸಾರ್ಥಕತೆಯ ಭಾವನೆ
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ