ತಮಿಳುನಾಡಿನ (Tamil nadu) ವಿದ್ಯುತ್ ಮತ್ತು ಅಬಕಾರಿ ಸಚಿವ ವಿ ಸೆಂಥಿಲ್ ಬಾಲಾಜಿ(Senthil Balaji )ಭ್ರಷ್ಟಾಚಾರ ಆರೋಪ ಅಷ್ಟೇ ಅಲ್ಲ ಕೊಲೆ ಮತ್ತು ಅಪಹರಣದ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು takethelede.in ವರದಿ ಮಾಡಿದೆ. . ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ಬೆಳಗ್ಗೆ ಸೆಂಥಿಲ್ ಅವರನ್ನು ಬಂಧಿಸಿ, ವೈದ್ಯಕೀಯ ತಪಾಸಣೆಗಾಗಿ ಓಮಂಡೂರರ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಿದ್ದರು. ಅಲ್ಲಿ ಬಿಕ್ಕಿ ಬಿಕ್ಕಿ ಅತ್ತ ಸಚಿವರು ಕುಸಿದುಬಿದ್ದರು. ಅವರನ್ನು ತಕ್ಷಣವೇ ಐಸಿಯುಗೆ ರವಾನಿಸಲಾಯಿತು. ಬಾಲಾಜಿ ಅವರ ಹೃದಯದಲ್ಲಿ ಮೂರು ಬ್ಲಾಕ್‌ಗಳಿದ್ದು, ತಕ್ಷಣದ ಬೈಪಾಸ್ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಆಸ್ಪತ್ರೆ ತಿಳಿಸಿದೆ.
ಬಾಲಾಜಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಎಂಕೆ ಸ್ಟಾಲಿನ್ ಬಿಜೆಪಿ ನಾಯಕತ್ವವನ್ನು ತರಾಟೆಗೆ ತೆಗೆದುಕೊಂಡು ತಮ್ಮ ಸಚಿವರ ಬಂಧನ ರಾಜಕೀಯ ಪ್ರೇರಿತ ಎಂದಿದ್ದಾರೆ.
ಸೇನಾಪತಿ ಕುಳಂದೈವೇಲು ಅವರು ಸೆಂಥಿಲ್ ಬಾಲಾಜಿ ಅವರ ಜನ್ಮಸ್ಥಳ ರಾಮೇಶ್ವರಂಪಟ್ಟಿಯ ಪಕ್ಕದಲ್ಲಿರುವ ಕರೂರ್ ಜಿಲ್ಲೆಯ ಅರುವಂಕಟ್ಟನೂರಿನವರು. 2019 ರಿಂದ ಸೇನಾಪತಿ ತನ್ನ ತಂದೆ ದಿವಂಗತ ಕುಳಂದೈವೇಲುಗೆ ನ್ಯಾಯ ಒದಗಿಸಲು ಹೋರಾಡುತ್ತಿದ್ದಾರೆ. ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರ ಆರ್‌ವಿ ಅಶೋಕ್ ಕುಮಾರ್ ಅವರು ತಮ್ಮ ಪೂರ್ವಜರ ಭೂಮಿಯನ್ನು ಕಬಳಿಸುವ ಸಲುವಾಗಿ ತನ್ನ ತಂದೆಯ ಕೊಲೆಗೆ ಯೋಜನೆ ರೂಪಿಸಿ ಕುಮ್ಮಕ್ಕು ನೀಡಿದ್ದರು ಎಂದು ಸೇನಾಪತಿ ಆರೋಪಿಸಿದ್ದಾರೆ. ನನ್ನ ತಂದೆ ಪಿ ಕುಳಂದೈವೇಲು ಅವರು ನಮ್ಮ ಗ್ರಾಮದಲ್ಲಿ ಸುಮಾರು 24 ಕೋಟಿ ಮೌಲ್ಯದ ಸುಮಾರು 25 ಎಕರೆ ಜಮೀನಿನ ಮಾಲೀಕರಾಗಿದ್ದರು. 2009 ರಿಂದ ಸೆಂಥಿಲ್ ಬಾಲಾಜಿ ಅವರು ನಮ್ಮ ವಿರುದ್ಧ ನಿಂತಿದ್ದಾರೆ. ಇಲ್ಲಿಯವರೆಗೆ, ನಮಗೆ ನ್ಯಾಯ ದೊರಕಿಸಲು ಯಾರೂ ಸಹಾಯ ಮಾಡುತ್ತಿಲ್ಲ ಎಂದಿದ್ದಾರೆ ಸೇನಾಪತಿ.
A gentle reminder to Thiru @mkstalin on what he spoke a few years back about the #CashForJobScam tainted Thiru Senthil Balaji.
Are you going to refute this, Thiru @mkstalin?
Why are you playing victim card today? https://t.co/ybFUtqrFov pic.twitter.com/c1YeCyhvFn
— K.Annamalai (@annamalai_k) June 14, 2023
17 ಫೆಬ್ರವರಿ 2018 ರಂದು ನನ್ನನ್ನು ಮತ್ತು ತಂದೆ ಕುಳಂದೈವೇಲು ಅವರನ್ನು ಅಪಹರಿಸುವ ಪ್ರಯತ್ನ ನಡೆದಿದೆ ಎಂದು ಸೇನಾಪತಿ ಆರೋಪಿಸಿದ್ದಾರೆ. ಆದರೆ ಅದು ವಿಫಲವಾಯಿತು. ನನ್ನ ತಂದೆಯನ್ನು 17 ಫೆಬ್ರವರಿ 2019 ರಂದು ಅಪಹರಿಸಲಾಯಿತು.ಅವರನ್ನು ಗಂಭೀರವಾದ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಂದೆ ಕೋಮಾದಿಂದ ಎಚ್ಚರವಾದಾಗ ನನ್ನ ಸಹೋದರಿ ಮತ್ತು ನಾನು ಇದನ್ನು ಯಾರು ಮಾಡಿದ್ದು ಎಂದು ಕೇಳಿದೆವು. ಸ್ಥಳೀಯ ವಂಗಲ್ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯೊಂದಿಗೆ ಸೆಂಥಿಲ್ ಬಾಲಾಜಿಯ ಜನರು ಅಪಘಾತ ಎಂದು ಸುಳ್ಳು ಹೇಳಿ, ಸ್ಥಳೀಯ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ದು, ಏಕಾಂತ ಸ್ಥಳದಲ್ಲಿ ಕಾಯುತ್ತಿದ್ದ ಟೆಂಪೋ ವ್ಯಾನ್‌ಗೆ ಸ್ಥಳಾಂತರಿಸಿದರು.ನಂತರ ಅವರು ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಅಪ್ಪ ಹೇಳಿದ್ದರು. ಎರಡು ತಿಂಗಳ ನಂತರ, ಅವರ ತಂದೆ ಕುಳಂದೈವೇಲು ನಿಧನರಾದರು.
ಆಂಬುಲೆನ್ಸ್ ಚಾಲಕ ಆನಂದನ್ ಕೂಡ ನಾಪತ್ತೆಯಾಗಿದ್ದಾರೆ ಎಂದು ಸೇನಾಪತಿ ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಬಂಧನ; 2024ರಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ: ಎಂಕೆ ಸ್ಟಾಲಿನ್
ತಂದೆಯ ಮರಣದ ನಂತರ, ಅವರ ಸ್ವಂತ ಕುಟುಂಬವೇ ನನ್ನ ವಿರುದ್ಧ ತಿರುಗಿ ನಿಂತಿತು.ನನ್ನ ಸಹೋದರಿ ಅರುಣಾದೇವಿ ಸೆಂಥಿಲ್ ಬಾಲಾಜಿಯ ಬಳಿಗೆ ಹೋದಳು. ಆಕೆ ಆಸ್ತಿ ಬಗ್ಗೆ ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಪ್ರಾರಂಭಿಸಿದಳು.
ಕುಲಂದೈವೇಲು ಅವರ ಇಚ್ಛೆಯಂತೆ 12 ಎಕರೆ ಸೇನಾಪತಿಗೆ ಮತ್ತು 3 ಎಕರೆ ಅರುಣಾದೇವಿಗೆ ಹೋಗುತ್ತದೆ. ಸೇಲಂ ಜಿಲ್ಲೆಯಲ್ಲಿ ಸೆಂಥಿಲ್ ಬಾಲಾಜಿ ಅವರ ನೆರವಿನಿಂದ ಅರುಣಾದೇವಿ ಹೊಸ ಮನೆಯನ್ನು ನಿರ್ಮಿಸಿದ್ದಾರೆ ಎನ್ನಲಾಗಿದೆ. ಅವರ ಪತಿ ಕೂಡ ಸಚಿವರ ಬಗ್ಗೆ ಭಯಗೊಂಡಿದ್ದಾರೆ ಎನ್ನಲಾಗಿದೆ.
ಆಗಸ್ಟ್ 2020 ರಲ್ಲಿ, ನನ್ನ ತಾಯಿ ಸಾವಿತ್ರಿ ಕುಳಂದೈವೇಲು ಅವರ ಮೇಲೆ ವಿಷ ಬೆರೆಸಿ ಕೊಲೆ ಯತ್ನ ನಡೆದಿತ್ತು ಎಂದು ಸೇನಾಪತಿ ಆರೋಪಿಸಿದ್ದಾರೆ. ಅವರ ತಾಯಿ ಸಾವಿತ್ರಿ ಅರುಣಾದೇವಿಯ ಒತ್ತೆಯಾಳು ಎಂದು ಸೇನಾಪತಿ ಆರೋಪಿಸಿದ್ದಾರೆ.
ಕೆಳ ನ್ಯಾಯಾಂಗ, ಸ್ಥಳೀಯ ಪೊಲೀಸ್ ಸಿಬ್ಬಂದಿ ಮತ್ತು ವಕೀಲರು ತಮ್ಮ ಪ್ರಕರಣವನ್ನು ಇಲ್ಲದಾಗಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಸೇನಾಪತಿ ಹೇಳಿದ್ದಾರೆ.
ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರ ಅಶೋಕ್ ಕುಮಾರ್ ಸಹ ಎಂಎಸ್ಎಲ್ ಇನ್ಫೋಟೆಕ್ ಇಂಡಿಯಾವನ್ನು ನಡೆಸುತ್ತಿದ್ದಾರೆ. ಇದು ಸೈಬರ್ ಕ್ರೈಮ್ ಘಟಕವಾಗಿದ್ದು, ಫೋನ್‌ಗಳನ್ನು ಕಾನೂನುಬಾಹಿರವಾಗಿ ಟ್ಯಾಪ್ ಮಾಡಲಾಗುತ್ತದೆ ಮತ್ತು ಇಮೇಲ್‌ಗಳನ್ನು ಹ್ಯಾಕ್ ಮಾಡಲಾಗುತ್ತದೆ. MSL ಕೊಯಮತ್ತೂರು ಮತ್ತು ಕರೂರ್‌ನಲ್ಲಿ ಕಚೇರಿಗಳನ್ನು ಹೊಂದಿತ್ತು ಆದರೆ ಈಗ ಕೊಯಮತ್ತೂರು ಕಚೇರಿಯನ್ನು ಮುಚ್ಚಲಾಗಿದೆ. ಅವರ ಚಲನವಲನಗಳನ್ನು ಪತ್ತೆಹಚ್ಚಲು ಅವರ ಫೋನ್ ಅನ್ನು ಮೇಲ್ವಿಚಾರಣೆ ಮಾಡಲಾಗಿದೆ ಎಂದು ಸೇನಾಪತಿ ಆರೋಪಿಸಿದ್ದಾರೆ.
ಗೋಕುಲ್ ಪ್ರಕರಣ
2016 ರಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ವಿಧಾನಸಭೆ ಚುನಾವಣೆಗೆ ಮುನ್ನ ತಮಿಳುನಾಡು ಪ್ರವಾಸ ಕೈಗೊಂಡಾಗ, ಅವರು ಕರೂರಿನಲ್ಲಿ ಭಾಷಣವೊಂದನ್ನು ಮಾಡಿದ್ದರು. ಗೋಕುಲ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಅಪಹರಿಸಿ, ಕೊಲೆ ಬೆದರಿಕೆ ಹಾಕಲಾಗಿದೆ. ಅವರ ಆಸ್ತಿಗಳನ್ನು ಕಸಿದುಕೊಳ್ಳಲಾಗಿದೆ.ಅವರ ಕುಟುಂಬವು ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದರೆ ಗೋಕುಲ್ ಎಲ್ಲಿದ್ದಾನೆ ಎಂಬುದು ತಿಳಿದಿಲ್ಲ ಎಂದಿದ್ದರು ಸ್ಟಾಲಿನ್.
2011ರಲ್ಲಿ ಗೋಕುಲ್ ನಾಪತ್ತೆಯಾಗಿದ್ದ. ದತ್ತು ಪಡೆದ ಮಗು ಅವನಾಗಿದ್ದು, ಕೊಯಮತ್ತೂರಿನ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ, ಆತನ ಕುಟುಂಬವು ಕರೂರಿನಲ್ಲಿ 25 ಕೋಟಿ ರೂ. ಮೌಲ್ಯದ ಜಮೀನು ಹೊಂದಿದೆ.
ಸೆಂಥಿಲ್ ಬಾಲಾಜಿ ಮತ್ತು ಆತನ ಸಹೋದರ ಅಶೋಕ್ ಕುಮಾರ್ ನಕಲಿ ದಾಖಲೆ ಸೃಷ್ಟಿಸಿ ಭೂಮಿಯನ್ನು ವಶಪಡಿಸಿಕೊಳ್ಳಲು ಮತ್ತು ಅದನ್ನು ಮಾರಾಟ ಮಾಡಲು ಬಯಸಿತ್ತು.ಇದಕ್ಕೆ ಗೋಕುಲ್ ಆಕ್ಷೇಪ ವ್ಯಕ್ತಪಡಿಸಿದ್ದ ಎಂದು ಗೋಕುಲ್ ತಾಯಿ ದೇವಾನೈ ಆರೋಪಿಸಿದ್ದಾರೆ
ಇವರಿಬ್ಬರ ಗ್ಯಾಂಗ್ ಗೋಕುಲ್ ಅವರನ್ನು ಅಪಹರಿಸಿ, ಬಲವಂತವಾಗಿ ಮಾದಕ ದ್ರವ್ಯ ತಿನ್ನಿಸಿ, ಸಹಿ ಹಾಕುವಂತೆ ಒತ್ತಾಯಿಸಿ ಜಮೀನನ್ನು ತಮ್ಮ ಬೇನಾಮಿಗಳ ಹೆಸರಿಗೆ ಬರೆದುಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Senthil Balaji: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಯ ಬಂಧನಕ್ಕೆ ಕಾರಣವಾದ ಘಟನೆಗಳ ಟೈಮ್‌ಲೈನ್
ಕರೂರ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಪ್ರಕರಣವನ್ನು ದಾಖಲಿಸಿದ ವಕೀಲರ ಸೆಂಥಿಲ್ ಬಾಲಾಜಿ ಗ್ಯಾಂಗ್‌ನಿಂದ ಹಣ ಪಡೆದು ಪ್ರಕರಣವನ್ನು ಹಿಂಪಡೆದಿದ್ದಾರೆ ಎಂದು ದೇವಾನೈ ಆರೋಪಿಸಿದ್ದಾರೆ. ಹೇಬಿಯಸ್ ಕಾರ್ಪಸ್ ಪ್ರಕರಣವು ಪ್ರಸ್ತುತ ಹೈಕೋರ್ಟ್‌ನ ಮಧುರೈ ಪೀಠದ ಮುಂದೆ ಇದೆ. ಕರೂರಿನಲ್ಲಿ ಸೆಂಥಿಲ್ ಬಾಲಾಜಿ ಮತ್ತು ಅಶೋಕ್ ಕುಮಾರ್ ಅವರ ತಂದೆ ಕುಳಂದೈವೇಲು ಮತ್ತು ಗೋಕುಲ್ ಪ್ರಕರಣ ಸೇರಿದಂತೆ ಒಟ್ಟು 14 ಕೊಲೆಗಳು ನಡೆದಿವೆ ಎಂದು ಸೇನಾಪತಿ ಆರೋಪಿಸಿದ್ದಾರೆ.
ಕುಲಂದೈವೇಲು ಪ್ರಕರಣವು 2019 ರಿಂದ ತಮಿಳುನಾಡು CBCID ಯಲ್ಲಿದೆ. ಇದುವರೆಗೆ ಪ್ರಾಥಮಿಕ ತನಿಖೆಯನ್ನು ಮಾತ್ರ ನಡೆಸಲಾಗಿದೆ. ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರರು ದೊಡ್ಡ ಪ್ರಮಾಣದ ಭೂಮಿಯನ್ನು ಕಬಳಿಸಿದ್ದಾರೆ ಎಂದು ಕರೂರಿನ ಸ್ಥಳೀಯರು ಹೇಳುತ್ತಾರೆ. ಜಮೀನುಗಳು ಅವರ ಬೇನಾಮಿಗಳ ಹೆಸರಿನಲ್ಲಿದ್ದು, ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ ಎನ್ನುತ್ತಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:37 pm, Wed, 14 June 23