ಹಿಂದಿ ಹೇರಿಕೆಯ ವಿರುದ್ಧ ತಮಿಳಿಗರ ‘ಚಂಡಮಾರುತ’

ದಕ್ಷಿಣ ಭಾರತದವರಿಗೆ ಅವರದೇ ಆದ ಭಾಷೆಗಳಿದ್ದು ಹಿಂದಿ ಕಲಿಯುವ ಅನಿವಾರ್ಯತೆ ಇಲ್ಲ. ಈ ರೀತಿ ಹಿಂದಿ ಹೇರಿಕೆ ಮಾಡುವುದನ್ನು ನಾವು ಎಂದೂ ಒಪ್ಪುವುದಿಲ್ಲ ಎಂದು ಅಲ್ಲಿನ ಜನರು ತಿರುಗಿಬಿದ್ದಿದ್ದಾರೆ.

ಹಿಂದಿ ಹೇರಿಕೆಯ ವಿರುದ್ಧ ತಮಿಳಿಗರ ‘ಚಂಡಮಾರುತ’
ತಮಿಳುನಾಡು / ಪುದುಚೇರಿಯ ಮೇಲೆ ಚಂಡಮಾರುತದ ಮೋಡ
Updated By: ganapathi bhat

Updated on: Nov 25, 2020 | 10:48 AM

ಚೆನ್ನೈ: ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಚೆನ್ನೈ, ಪುದುಚೆರಿ ಭಾಗಗಳಿಗೆ ಬುಧವಾರ ಸಂಜೆಯ ವೇಳೆಗೆ ತೀವ್ರ ಚಂಡಮಾರುತ ಬಂದು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಭಾರತೀಯ ಹವಾಮಾನ ಇಲಾಖೆಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಂಡಮಾರುತದ ಕುರಿತು ಕ್ಷಣಕ್ಷಣದ ಮಾಹಿತಿ ಹಂಚಿಕೊಳ್ಳುತ್ತಿದೆ.

ಆದರೆ, ಈ ಮಾಹಿತಿಯನ್ನು ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಲಾಗುತ್ತಿದ್ದು ಹವಾಮಾನ ಇಲಾಖೆಯ ಈ ನಡೆಯ ಕುರಿತು ತಮಿಳರು ಗರಂ ಆಗಿದ್ದಾರೆ.

ನಮಗೆ ಅರ್ಥ ಆಗೋ ಭಾಷೇಲಿ ಹೇಳ್ರೀ…
ತಮಿಳುನಾಡಿಗೆ ಚಂಡಮಾರುತ ಬಂದು ಅಪ್ಪಳಿಸುವುದಾದರೆ ನೀವು ಅಲ್ಲಿಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಮಾಹಿತಿ ನೀಡಬೇಕು. ಅದನ್ನು ಬಿಟ್ಟು ಯಾರನ್ನೋ ಮೆಚ್ಚಿಸುವುದಕ್ಕಾಗಿ ಇಂತಹ ಸಂದರ್ಭದಲ್ಲೂ ನಿಮ್ಮ ಹಿಂದಿ ಪ್ರೇಮವನ್ನು ತೋರಿಸಬೇಡಿ. ದಕ್ಷಿಣ ಭಾರತದವರಿಗೆ ಅವರದೇ ಆದ ಭಾಷೆಗಳಿದ್ದು ಹಿಂದಿ ಕಲಿಯುವ ಅನಿವಾರ್ಯತೆ ಇಲ್ಲ. ಈ ರೀತಿ ಹಿಂದಿ ಹೇರಿಕೆ ಮಾಡುವುದನ್ನು ನಾವು ಎಂದೂ ಒಪ್ಪುವುದಿಲ್ಲ ಎಂದು ತಿರುಗಿಬಿದ್ದಿದ್ದಾರೆ.

ಹಿಂದಿ ಹೇರಿಕೆಯನ್ನು ವಿರೋಧಿಸಿ ಆರಂಭಿಸಿದ #StopHindiImposition ಹ್ಯಾಶ್​ಟ್ಯಾಗ್ ಸದ್ಯ ತಮಿಳುನಾಡಿನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇನ್ನಷ್ಟು ಸುದ್ದಿ…

ನುಗ್ಗಿ ಬರ್ತಿದೆ ಡೆಡ್ಲಿ ನಿವಾರ್ ಚಂಡಮಾರುತ: ಬೆಂಗಳೂರಿನಲ್ಲಿ 2 ದಿನ ಭಾರಿ ಮಳೆ

ನಿವಾರ್ ಚಂಡಮಾರುತ ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿ ಎನ್​ಡಿಆರ್​ಎಫ್

Cyclone Nivar ಎದುರಿಸಲು ಹೇಗೆ ಸಿದ್ಧವಾಗ್ತಿದೆ ತಮಿಳುನಾಡು, ಪುದುಚೇರಿ?

ಕಡಲ ಅಬ್ಬರ, ರಸ್ತೆ ಮೇಲೆ ನೀರು, ಸೈಲೆನ್ಸರ್ ಮೂತಿಗೆ ಪ್ಲಾಸ್ಟಿಕ್ ಬ್ಯಾಗ್: #ChennaiRain ಟ್ರೆಂಡಿಂಗ್​

 

Published On - 10:47 am, Wed, 25 November 20