91 ಸಾವಿರ ಜನರಿಗೆ ಉದ್ಯೋಗಾವಕಾಶ! ನಾಲ್ಕು ಐಟಿ ಕಂಪನಿಗಳಿಂದ ಕ್ಯಾಂಪಸ್ ಸೆಲೆಕ್ಷನ್​ಗೆ ಸಿದ್ಧತೆ..

ಇನ್ನು ವಿಪ್ರೋ ಕೂಡ ದೊಡ್ಡ ಸಂಖ್ಯೆಯಲ್ಲಿ ಫ್ರೆಶರ್​ ಸೆಲೆಕ್ಷನ್​ ಮಾಡಲು ಮುಂದಾಗಿದೆ. ಬೇಡಿಕೆ ಅನುಗುಣವಾಗಿ ಈಗಾಗಲೇ ಪ್ರತಿಭಾವಂತರ ಆಯ್ಕೆ ಪ್ರಕ್ರಿಯೆ ಶುರು ಮಾಡಿದ್ದೇವೆ ಎಂದು ವಿಪ್ರೋ ಎಚ್​ಆರ್ ಡಿಪಾರ್ಟ್​ಮೆಂಟ್ ಮುಖ್ಯಸ್ಥ ಸೌರಭ್​ ಗೋವಿಲ್ ತಿಳಿಸಿದ್ದಾರೆ.

91 ಸಾವಿರ ಜನರಿಗೆ ಉದ್ಯೋಗಾವಕಾಶ! ನಾಲ್ಕು ಐಟಿ ಕಂಪನಿಗಳಿಂದ ಕ್ಯಾಂಪಸ್ ಸೆಲೆಕ್ಷನ್​ಗೆ ಸಿದ್ಧತೆ..
Follow us
Lakshmi Hegde
| Updated By: ಸಾಧು ಶ್ರೀನಾಥ್​

Updated on: Jan 19, 2021 | 3:44 PM

ನವದೆಹಲಿ: ದೇಶದ ನಾಲ್ಕು ಐಟಿ ದಿಗ್ಗಜ ಕಂಪನಿಗಳಾದ ಟಿಸಿಎಸ್​, ಇನ್ಫೋಸಿಸ್​, ಎಚ್​ಸಿಎಲ್​ ಟೆಕ್ನಾಲಜೀಸ್ ಮತ್ತು ವಿಪ್ರೋಗಳು ಮುಂದಿನ ಹಣಕಾಸು ವರ್ಷದಲ್ಲಿ (2021-22) ಒಟ್ಟಾರೆ 91 ಸಾವಿರ ಜನರನ್ನು ಕ್ಯಾಂಪಸ್ ಸೆಲೆಕ್ಷನ್​ ಮಾಡಿಕೊಳ್ಳಲು ಯೋಜನೆ ರೂಪಿಸಿವೆ. ಲಾಕ್​ಡೌನ್ ಮುಕ್ತಾಯವಾದ ಬೆನ್ನಲ್ಲೇ ಕ್ಯಾಂಪಸ್ ಸೆಲೆಕ್ಷನ್​ ಮಾಡಲು ಯೋಜನೆ ರೂಪಿಸುತ್ತಿದ್ದು, ಈ ನಾಲ್ಕೂ ಕಂಪನಿಗಳಿಂದ ಒಟ್ಟಾರೆ 91 ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ.

ಲಾಕ್​ಡೌನ್ ಮುಗಿದ ಬೆನ್ನಲ್ಲೇ ಗ್ರಾಹಕ ಬೇಡಿಕೆಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಪನಿಗಳು ಉತ್ಪಾದನೆ ಪ್ರಕ್ರಿಯೆಯನ್ನೂ ಚುರುಕುಗೊಳಿಸಿವೆ. ಇದಕ್ಕಾಗಿ 2021-22ರ ಅವಧಿಗೆ ನಾಲ್ಕೂ ಕಂಪನಿಗಳಿಂದ ಒಟ್ಟು 91 ಸಾವಿರ ಜನರನ್ನು ಕ್ಯಾಂಪಸ್​ ಸೆಲೆಕ್ಷನ್ ಮಾಡುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ತುಸು ಹೆಚ್ಚಾಗಿದೆ.

ಟಿಸಿಎಸ್​ ಎಕ್ಸಿಕ್ಯೂಟಿವ್​ ವೈಸ್​ ಪ್ರೆಸಿಡೆಂಟ್​ಮತ್ತು ಗ್ಲೋಬಲ್​ ಎಚ್​ಆರ್​ ಮುಖ್ಯಸ್ಥರಾಗಿರುವ ಮಿಲಿಂದ್​ ಲಕ್ಕದ್​ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿ, ನಮ್ಮ ಕಂಪನಿ ಕಳೆದ ವರ್ಷ ಕ್ಯಾಂಪಸ್​ನಿಂದ 40,000 ಹೊಸಬರನ್ನು ಆಯ್ಕೆ ಮಾಡಿಕೊಂಡಿತ್ತು. ಈ ಬಾರಿಯೂ ಅಷ್ಟೇ, ಅಂದರೆ 40,000 ಜನರನ್ನು ಆಯ್ಕೆ ಮಾಡಿಕೊಳ್ಳುವ ಯೋಜನೆ ಇದೆ ಎಂದಿದ್ದಾರೆ.

ಹಾಗೇ ಇನ್ಫೋಸಿಸ್​ ಮುಂಬರುವ ಹಣಕಾಸು ವರ್ಷದಲ್ಲಿ 24,000 ಪದವೀಧರರನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದೆ. ಈ ಕಂಪನಿ ಪ್ರಸಕ್ತ ಅಂದರೆ 2020-21ರ ಆರ್ಥಿಕ ವರ್ಷದಲ್ಲಿ 15,000 ಫ್ರೆಶರ್ಸ್ ಅ​ನ್ನು ಮಾತ್ರ ನೇಮಕ ಮಾಡಿಕೊಂಡಿತ್ತು.

ಇನ್ನು ಎಚ್​ಸಿಎಲ್ ಕಂಪನಿ 15000 ಹೊಸಬರನ್ನು ಭಾರತದಲ್ಲಿ ಕ್ಯಾಂಪಸ್ ಸೆಲೆಕ್ಷನ್​ ಮಾಡಲಿದೆ. ಉಳಿದ 1500-2000ರಷ್ಟು ಬೇರೆ ದೇಶದವರಿಗೆ ಅವಕಾಶ ನೀಡಲಾಗುವುದು. ಕಳೆದ ವರ್ಷ ಶೇ. 70ರಷ್ಟು ಭಾರತದಲ್ಲಿ, ಶೇ. 30ರಷ್ಟು ಹೊರದೇಶಗಳಲ್ಲಿ ಆಯ್ಕೆಯಾಗಿತ್ತು. ಈ ಬಾರಿ ಅದು ಶೇ. 90-ಶೇ. 10ಆಗಿದೆ ಎಂದು ಕಂಪನಿಯ ಟೆಕ್ನಾಲಜಿ ಮುಖ್ಯಸ್ಥ ಅಪ್ಪಾರಾವ್ ವಿವಿ ತಿಳಿಸಿದ್ದಾರೆ.

ಇನ್ನು ವಿಪ್ರೋ ಕೂಡ ದೊಡ್ಡ ಸಂಖ್ಯೆಯಲ್ಲಿ ಫ್ರೆಶರ್​ ಸೆಲೆಕ್ಷನ್​ ಮಾಡಲು ಮುಂದಾಗಿದೆ. ಬೇಡಿಕೆಗೆ ಅನುಗುಣವಾಗಿ ಈಗಾಗಲೇ ಪ್ರತಿಭಾವಂತರ ಆಯ್ಕೆ ಪ್ರಕ್ರಿಯೆ ಶುರು ಮಾಡಿದ್ದೇವೆ ಎಂದು ವಿಪ್ರೋ ಎಚ್​ಆರ್ ಡಿಪಾರ್ಟ್​ಮೆಂಟ್ ಮುಖ್ಯಸ್ಥ ಸೌರಭ್​ ಗೋವಿಲ್ ತಿಳಿಸಿದ್ದಾರೆ.

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು