ರಾಹುಲ್ ಗಾಂಧಿ ಯಾರು, ಪ್ರಧಾನಿ ಅಭ್ಯರ್ಥಿಯೇ? ಮೋದಿಯನ್ನು ಚರ್ಚೆಗೆ ಆಹ್ವಾನಿಸಿದ ಕಾಂಗ್ರೆಸ್​ ವಿರುದ್ಧ ಬಿಜೆಪಿ ವಾಗ್ದಾಳಿ

ಲೋಕಸಭಾ ಚುನಾವಣೆಯ ಸಾರ್ವಜನಿಕ ಚರ್ಚೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರ ಪ್ರಸ್ತಾಪಕ್ಕೆ ಸಂಸದ ತೇಜಸ್ವಿ ಸೂರ್ಯ, ಸಚಿವೆ ಸ್ಮೃತಿ ಇರಾನಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ರಾಹುಲ್ ಗಾಂಧಿ ಯಾರು, ಪ್ರಧಾನಿ ಅಭ್ಯರ್ಥಿಯೇ? ಮೋದಿಯನ್ನು ಚರ್ಚೆಗೆ ಆಹ್ವಾನಿಸಿದ ಕಾಂಗ್ರೆಸ್​ ವಿರುದ್ಧ ಬಿಜೆಪಿ ವಾಗ್ದಾಳಿ
ತೇಜಸ್ವಿ ಸೂರ್ಯImage Credit source: India Today
Follow us
ನಯನಾ ರಾಜೀವ್
|

Updated on:May 12, 2024 | 11:03 AM

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಜೋರಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಶಕ್ತಿಯ ಪ್ರಯೋಗದಲ್ಲಿ ನಿರತವಾಗಿವೆ. ಈ ವೇಳೆ ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ(Rahul Gandhi) ಪ್ರಧಾನಿ ನರೇಂದ್ರ ಮೋದಿಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕಾಂಗ್ರೆಸ್​ ಮತ್ತು ಇಂಡಿಯಾ ಮೈತ್ರಿಕೂಟದಲ್ಲಿ ಗಾಂಧಿ ಕುಟುಂಬದ ಸ್ಥಾನವನ್ನು ಪ್ರಶ್ನಿಸಿರುವ ಸಂಸದ ತೇಜಸ್ವಿ ಸೂರ್ಯ, ಪ್ರಧಾನಿ ಮೋದಿಯೊಂದಿಗೆ ಚರ್ಚೆ ಮಾಡುವ ಮೊದಲು ರಾಹುಲ್ ಗಾಂಧಿ ತನ್ನನ್ನು ವಿರೋಧ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಹೇಳಿದರು.

ಪ್ರಧಾನಿ ಮೋದಿಯನ್ನು ಚರ್ಚೆಗೆ ಆಹ್ವಾನಿಸಲು ರಾಹುಲ್​ ಗಾಂಧಿ ಯಾರು? ಪ್ರಧಾನಿ ಅಭ್ಯರ್ಥಿಯೇ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇಂಡಿಯಾ ಮೈತ್ರಿಯ ಮಾತು ಬಿಡಿ, ಮೊದಲು ಕಾಂಗ್ರೆಸ್​ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು, ಪಕ್ಷದ ಸೋಲಿನ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುವುದಾಗಿ ಹೇಳಿದ ಬಳಿಕ ಪ್ರಧಾನಿ ಮೋದಿಯೊಂದಿಗೆ ಚರ್ಚೆ ಮಾಡಬಹುದು ಎಂದಿದ್ದಾರೆ.

ಟ್ವೀಟ್​

ಇಷ್ಟೇ ಅಲ್ಲದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಇದೇ ಪ್ರಶ್ನೆ ಮಾಡಿದ್ದು, ರಾಹುಲ್​ ಗಾಂಧಿಗೆ ಸಾಮಾನ್ಯ ಬಿಜೆಪಿ ಕಾರ್ಯಕರ್ತನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯವಿಲ್ಲ. ಎರಡನೆಯದಾಗಿ ಮೋದಿ ಸಮನಾಗಿ ಚರ್ಚಿಸಲು ಬಯಸುವವರು ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯೇ? ಎಂದು ಪ್ರಶ್ನೆ ಮಾಡಿದ್ದಾರೆ.​

ರಾಹುಲ್ ಗಾಂಧಿ ಟ್ವೀಟ್

ರಾಹುಲ್​ ಗಾಂಧಿ ಏನು ಹೇಳಿದ್ದರು? ಆರೋಗ್ಯಕರ ಪ್ರಜಾಪ್ರಭುತ್ವಕ್ಕಾಗಿ ಪ್ರಮುಖ ಪಕ್ಷಗಳು ತಮ್ಮ ದೃಷ್ಟಿಕೋನವನ್ನು ಒಂದೇ ವೇದಿಕೆಯಿಂದ ದೇಶಕ್ಕೆ ಪ್ರಸ್ತುತಪಡಿಸಲು ಇದು ಸಕಾರಾತ್ಮಕ ಉಪಕ್ರಮವಾಗಿದೆ. ಈ ಸಂವಾದದಲ್ಲಿ ಪ್ರಧಾನಿ ಮೋದಿ ಭಾಗವಹಿಸುವ ನಿರೀಕ್ಷೆಯೂ ಇದೆ ಎಂದಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:56 am, Sun, 12 May 24