ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ; ಎಣ್ಣೆ ಚೆಲ್ಲಿ ಬೆಂದುಹೋಯ್ತು ಕಾಲು!

ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ; ಎಣ್ಣೆ ಚೆಲ್ಲಿ ಬೆಂದುಹೋಯ್ತು ಕಾಲು!

ಸುಷ್ಮಾ ಚಕ್ರೆ
|

Updated on: Dec 18, 2024 | 7:43 PM

ಆಘಾತಕಾರಿ ಘಟನೆಯೊಂದರಲ್ಲಿ ತೆಲಂಗಾಣದ ಭುವನಗಿರಿಯಲ್ಲಿ 8ನೇ ತರಗತಿಯ ವಿದ್ಯಾರ್ಥಿ ತನ್ನ ಕಾಲಿನ ಮೇಲೆ ಎಣ್ಣೆ ಸುರಿದ ಹಿನ್ನೆಲೆಯಲ್ಲಿ ಗಂಭೀರವಾದ ಸುಟ್ಟ ಗಾಯವನ್ನು ಅನುಭವಿಸಿದ್ದಾನೆ. ಈ ಘಟನೆ ನಡೆದಾಗ ವಿದ್ಯಾರ್ಥಿ ತಾನು ಓದಿದ ಶಾಲೆಯ ಪ್ರಾಂಶುಪಾಲರಿಗೆ ಅಡುಗೆ ಮಾಡುತ್ತಿದ್ದ ಎನ್ನಲಾಗಿದೆ. ನಾರಾಯಣಪುರಂ ಮಂಡಲದ ಸರ್ವೆಲ್ ಗುರುಕುಲ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಹೈದರಾಬಾದ್: ತೆಲಂಗಾಣದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಓದುತ್ತಿದ್ದ 8ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕರು ಪ್ರಿನ್ಸಿಪಾಲ್​ಗೆ ನೀನೇ ಅಡುಗೆ ಮಾಡಿಕೊಡಬೇಕು ಎಂದು ಹೇಳಿ ಶಾಲೆಯ ಬಿಸಿಯೂಟದ ಅಡುಗೆಮನೆಗೆ ಕಳುಹಿಸಿದ್ದಾರೆ. ಆದರೆ, ಆತನಿಗೆ ಅಡುಗೆ ಮಾಡಲು ಬಾರದ ಕಾರಣದಿಂದ ಏನೋ ಮಾಡಲು ಹೋಗಿ ಬಿಸಿ ಎಣ್ಣೆ ಮೈಮೇಲೆಲ್ಲ ಚೆಲ್ಲಿ ಕಾಲು ಸುಟ್ಟು ಹೋಗಿದೆ. ಆತನ ಮೈಮೇಲೆ ಗಂಭೀರವಾದ ಸುಟ್ಟ ಗಾಯಗಳಾಗಿವೆ. ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ಮತ್ತು ಶಿಕ್ಷಕರ ಅತಿರೇಕದ ವರ್ತನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ತೆಲಂಗಾಣದ ನಾರಾಯಣಪುರಂ ಮಂಡಲದ ಸರ್ವೆಲ್ ಗುರುಕುಲ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮೂಗಳ ಪ್ರಕಾರ, ಅಡುಗೆ ಮಾಡುವಾಗ ಎಣ್ಣೆ ವಿದ್ಯಾರ್ಥಿಯ ಮೇಲೆ ಚೆಲ್ಲಿದೆ. ಇದರಿಂದ ಆತನಿಗೆ ಸುಟ್ಟ ಗಾಯಗಳಾಗಿವೆ. ಈ ಘಟನೆಯ ಆಘಾತಕಾರಿ ವಿಡಿಯೋ ಕೂಡ ಬೆಳಕಿಗೆ ಬಂದಿದ್ದು, ಇದರಲ್ಲಿ ವಿದ್ಯಾರ್ಥಿಗಳ ಎರಡೂ ಕಾಲುಗಳಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಇದರಿಂದ ಶಾಲೆಯ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದ್ದು, ಪ್ರಾಂಶುಪಾಲರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ