Amit Shah Press Meet Live: ಅಮಿತ್​ ಶಾ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ

Amit Shah Press Meet Live: ಅಮಿತ್​ ಶಾ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ

ರಮೇಶ್ ಬಿ. ಜವಳಗೇರಾ
|

Updated on: Dec 18, 2024 | 5:27 PM

HM Amit Shah Press Conference Live Streaming: ಅಂಬೇಡ್ಕರ್.. ಅಂಬೇಡ್ಕರ್.. ಅಂಬೇಡ್ಕರ್ ಎಂದು ಸ್ಮರಿಸುತ್ತಿದ್ದ ಕಾಂಗ್ರೆಸ್ಸಿಗರ ವಿರುದ್ಧ ವಾಗ್ದಾಳಿ ನಡೆಸೋಕೆ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ನಿನ್ನೆ ರಾಜ್ಯಸಭೆಯಲ್ಲಿ ಅಮಿತ್ ಶಾ ಮಾತನಾಡಿದ ಒಂದೇ ಒಂದು ಮಾತು ಕೋಲಾಹಲ ಸೃಷ್ಟಿಸಿದೆ. ಇದನ್ನೇ ಅಸ್ತ್ರವಾಗಿ ಮಾಡಿಕೊಂಡ ವಿಪಕ್ಷಗಳು ಶಾ ವಿರುದ್ಧ ಮುಗಿಬಿದ್ದಿವೆ. ಇನ್ನು ಈ ಸಂಬಂಧ ಸ್ಪಷ್ಟನೆ ನೀಡಲು ಶಾ ತುರ್ತು ಸುದ್ದಿಗೋಷ್ಠಿ ನಡೆಸಿದ್ದು, ಅದರ ನೇರಪ್ರಸಾರ ಇಲ್ಲಿದೆ ನೋಡಿ.

ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಿನ್ನೆ (ಡಿಸೆಂಬರ್ 17) ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸೋ ಭರದಲ್ಲಿ ಅಂಬೇಡ್ಕರ್.. ಅಂಬೇಡ್ಕರ್.. ಅಂಬೇಡ್ಕರ್.. ಅಂಬೇಡ್ಕರ್.. ಅಂಬೇಡ್ಕರ್ ಎನ್ನುವುದು ಈಗ ಫ್ಯಾಷನ್ ಆಗಿಬಿಟ್ಟಿದೆ. ಅದರ ಬದಲು ದೇವರ ಹೆಸರು ಹೇಳಿದ್ರೆ ಏಳು ಜನ್ಮಗಳವರೆಗೂ ಸ್ವರ್ಗ ಪ್ರಾಪ್ತಿಯಾಗ್ತಿತ್ತು ಎಂದು ಹೇಳಿದ್ದಾರೆ. ಇದೇ ಮಾತು ಇದೀಗ ವಿವಾದಕ್ಕೆ ಕಾರಣವಾಗಿದ್ದು, ವಿಪಕ್ಷಗಳು ಅಮಿತ್ ಶಾ ವಿರುದ್ಧ ಸಿಡಿದೆದ್ದಿವು. ಇನ್ನು ಇದೇ ವಿಚಾರವಾಗಿ ಅಮಿತ್ ಶಾ ತುರ್ತು ಸುದ್ದಿಗೋಷ್ಠಿ ನಡೆಸಿದ್ದು, ಅದರ ನೇರಪ್ರಸಾರ ಇಲ್ಲಿದೆ ನೋಡಿ.