ಕಾಮರೆಡ್ಡಿ: ರಸ್ತೆ ಅಗಲೀಕರಣಕ್ಕಾಗಿ ಸ್ವಂತ ಮನೆಯನ್ನೇ ಕೆಡವಿದ ಬಿಜೆಪಿ ಶಾಸಕ ರಮಣರೆಡ್ಡಿ

|

Updated on: Feb 02, 2024 | 2:39 PM

ಚುನಾವಣೆಯಲ್ಲಿ ಸಿಆರ್ ಮತ್ತು ರೇವಂತ್ ರೆಡ್ಡಿ ಅವರನ್ನು ಸೋಲಿಸಿ ಸಂಚಲನ ಮೂಡಿಸಿರುವ ಬಿಜೆಪಿ ಶಾಸಕ ವೆಂಕಟ ರಮಣ ರೆಡ್ಡಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಕ್ಷೇತ್ರದ ರಸ್ತೆ ವಿಸ್ತರಣೆಗಾಗಿ ತಮ್ಮ ಸ್ವಂತ ಮನೆಯನ್ನು ಕೆಡವಲು ಅನುಮತಿ ನೀಡಿದ್ದಾರೆ. ಎಲ್ಲರೂ ತಮಗೆ ಅಧಿಕಾರವಿದ್ದರೆ ಎಲ್ಲವನ್ನೂ ಕೊಂಡುಕೊಳ್ಳಬಹುದು ಎಂದು ಭಾವಿಸುವ ಈ ಹೊತ್ತಿನಲ್ಲಿ ರಸ್ತೆ ಅಗಲೀಕರಣಕ್ಕಾಗಿ ತಮ್ಮ ಮನೆಯನ್ನೇ ಕೆಡವಿದ ರಮಣರೆಡ್ಡಿ ಕೆಲಸಕ್ಕೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಕಾಮರೆಡ್ಡಿಯ ಅಭಿವೃದ್ಧಿ ಕೆಲಸವೂ ಸುಸೂತ್ರವಾಗಿ ನಡೆಯಲಿದೆ.

ಕಾಮರೆಡ್ಡಿ: ರಸ್ತೆ ಅಗಲೀಕರಣಕ್ಕಾಗಿ ಸ್ವಂತ ಮನೆಯನ್ನೇ ಕೆಡವಿದ ಬಿಜೆಪಿ ಶಾಸಕ ರಮಣರೆಡ್ಡಿ
ವೆಂಕಟರಮಣ ರೆಡ್ಡಿ
Image Credit source: Times Algebra
Follow us on

ತೆಲಂಗಾಣ ವಿಧಾನಸಭಾ ಚುನಾವಣೆ(Telangana Assembly Election)ಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳಾದ ಕೆಸಿಆರ್ ಮತ್ತು ರೇವಂತ್ ರೆಡ್ಡಿ ಅವರನ್ನು ಸೋಲಿಸಿ ಸಂಚಲನ ಮೂಡಿಸಿರುವ ಬಿಜೆಪಿ ಶಾಸಕ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ (Katipalli Venkata Ramana Reddy) ಜನಸೇವೆಯಲ್ಲೂ ತಮ್ಮ ಛಾಪು ತೋರಿಸುತ್ತಿದ್ದಾರೆ. ಕ್ಷೇತ್ರದ ರಸ್ತೆ ವಿಸ್ತರಣೆಗಾಗಿ ತಮ್ಮ ಸ್ವಂತ ಮನೆಯನ್ನು ಕೆಡವಲು ಅನುಮತಿ ನೀಡಿದ್ದಾರೆ. ಈ ಮೂಲಕ ಕಾಮರೆಡ್ಡಿ ಶಾಸಕ ರಮಣ ರೆಡ್ಡಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಾಮರೆಡ್ಡಿ ರಸ್ತೆ ಕಿರಿದಾಗಿರುವ ಕಾರಣ ಅಗಲೀಕರಣ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ನಿಮ್ಮ ಕೆಲಸಕ್ಕೆ ನಾವು ಅಡ್ಡಿಪಡಿಸುವುದಿಲ್ಲ ಎಂದು ಹೇಳಿದ್ದರು.

ಇದರೊಂದಿಗೆ ಶಾಸಕರ ಭವನದಿಂದ ಹಳೇ ಬಸ್ ನಿಲ್ದಾಣದವರೆಗಿನ ರಸ್ತೆ ಅಗಲಕ್ಕೆ ಅಡ್ಡಿಯಾಗಿರುವ ಕಟ್ಟಡಗಳಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ರಸ್ತೆ ಅಗಲೀಕರಣಕ್ಕೆ ಇರುವ ಅಡೆತಡೆಗಳಲ್ಲಿ ಸರ್ಕಾರಿ ಸಲಹೆಗಾರ ಶಬ್ಬೀರ್ ಅಲಿ ಅವರ ನಿವಾಸವೂ ಸೇರಿದೆ. ಎರಡು ಚಿತ್ರಮಂದಿರಗಳೂ ಇವೆ.

ಕಾಮರೆಡ್ಡಿ ಅವರು ಸಿಎಂ ಅಭ್ಯರ್ಥಿಗಳಾದ ಕೆಸಿಆರ್ ಮತ್ತು ರೇವಂತ್ ರೆಡ್ಡಿ ಅವರನ್ನು ಸೋಲಿಸಿದ್ದಾರೆ. ಪ್ರಮುಖ ನಾಯಕರು ಕಣದಲ್ಲಿದ್ದರೂ, ರಮಣ ರೆಡ್ಡಿ ಹಿಂದೆ ಸರಿಯದೆ ಪ್ರಚಾರ ನಡೆಸಿ ಅಂತಿಮವಾಗಿ ಗೆದ್ದರು. ಸ್ವಂತ ಹಣದಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದಾಗಿ ಚುನಾವಣಾ ಪ್ರಚಾರದ ವೇಳೆ ರಮಣ ರೆಡ್ಡಿ ಘೋಷಿಸಿದ್ದು ಗೊತ್ತೇ ಇದೆ.

ಮತ್ತಷ್ಟು ಓದಿ: ತೆಲಂಗಾಣ: ಕೆಸಿಆರ್, ರೇವಂತ್ ರೆಡ್ಡಿಯನ್ನು ಸೋಲಿಸಿದ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ! ಯಾರಿವರು?

ನನ್ನ ಮನೆಯನ್ನು ನೆಲಸಮ ಮಾಡಲು ಅವಕಾಶ ನೀಡುವ ಮೂಲಕ ನಾನು ದೊಡ್ಡ ಸೇವೆ ಮಾಡುತ್ತಿದ್ದೇನೆ ಎಂದು ನಾನು ಭಾವಿಸುವುದಿಲ್ಲ. ನಾನು ಕಾಮರೆಡ್ಡಿ ಜನರ ಅನುಕೂಲಕ್ಕಾಗಿ ನನ್ನ ಮನೆಯನ್ನು ಕೆಡವಿದ್ದೇನೆ ಎಂದು ಹೇಳಿದರು.

ರಮಣರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದರು
ತೆಲಂಗಾಣದ ಹಾಲಿ ಸಿಎಂ ಹಾಗೂ ಆಡಳಿತಾರೂಢ ಬಿಆರ್​ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್, ಮತ್ತೊಬ್ಬ ಎದುರಾಳಿ ಕಾಂಗ್ರೆಸ್ ಅಧ್ಯಕ್ಷ ಎ ರೇವಂತ್ ರೆಡ್ಡಿ ಅವರನ್ನು ತೆಲಂಗಾಣದ ಪ್ರತಿಷ್ಠಿತ ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಹಾಲಿ ಮತ್ತು ಭಾವಿ ಸಿಎಂ ಇಬ್ಬರನ್ನೂ ಸೋಲಿಸುವ ಮೂಲಕ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವರು ರಾಷ್ಟ್ರ ನಾಯಕರ ಗಮನ ಸೆಳೆದಿದ್ದರು.

ಮತ್ತಷ್ಟು ಓದಿ: ತೆಲಂಗಾಣ ವಿಧಾನಸಭೆ ಚುನಾವಣೆ: ಈ ಬಾರಿ ಕದನ ಕುತೂಹಲ ಸೃಷ್ಟಿಸಿರುವ ಹೈ ಪ್ರೊಫೈಲ್ ನಾಯಕರುಗಳಿವರು

ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವರು 66652 ಮತಗಳನ್ನು ಪಡೆದುಕೊಂಡಿದ್ದು, ಕೆ. ಚಂದ್ರಶೇಖರ ರಾವ್ 59911 ಮತ್ತು ರೇವಂತ್‌ ರೆಡ್ಡಿ 54916 ಮತಗಳನ್ನು ಪಡೆದುಕೊಂಡಿದ್ದರು. ವೃತ್ತಿಯಲ್ಲಿ ಉದ್ಯಮಿ ಆಗಿರುವ 53 ವರ್ಷದ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವರು, 12 ನೇ ತರಗತಿ ಪಾಸಾಗಿದ್ದಾರೆ.

ಚುನಾವಣಾ ಅಫಿಡವಿಟ್ ಪ್ರಕಾರ ಅವರ ಒಟ್ಟು ಘೋಷಿತ ಆಸ್ತಿ 49.7 ಕೋಟಿ ರೂ.ಗಳಾಗಿದ್ದು, ಇದರಲ್ಲಿ 2.2 ಕೋಟಿ ರೂ. ಚರ ಆಸ್ತಿ ಮತ್ತು 47.5 ಕೋಟಿ ರೂ. ಸ್ಥಿರ ಆಸ್ತಿ ಹೊಂದಿದ್ದಾರೆ. ಅವರ ಒಟ್ಟು ಘೋಷಿತ ಆದಾಯ 9.8 ಲಕ್ಷ ರೂ. ಅದರಲ್ಲಿ 4.9 ಲಕ್ಷ ರೂ. ಸ್ವಯಂ ಆದಾಯವಾಗಿದೆ. ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ವಿರುದ್ಧ 11 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

2018ರ ವಿಧಾನಸಭಾ ಚುನಾವಣೆಯಲ್ಲಿ, ತೆಲಂಗಾಣ ರಾಷ್ಟ್ರ ಸಮಿತಿಯ ಗಂಪ ಗೋವರ್ಧನ್​ ಅವರಿಂದ ಒಟ್ಟು 42% ರಷ್ಟು ಮತಗಳನ್ನು ಪಡೆದುಕೊಳ್ಳುವ ಮೂಲಕ ಕಾಮರೆಡ್ಡಿ ಅವರು ತಮ್ಮ ಶಾಸಕ ಸ್ಥಾನವನ್ನು ಉಳಿಸಿಕೊಂಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Published On - 2:32 pm, Fri, 2 February 24