Public Examination bill: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಡೆಯುವ ಅಕ್ರಮ ತಡೆಯಲು ಫೆ.5ರಂದು ಹೊಸ ಮಸೂದೆ ಮಂಡನೆ ಸಾಧ್ಯತೆ
ಪಬ್ಲಿಕ್ ಎಕ್ಸಾಮಿನೇಷನ್ ಮಸೂದೆ: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಹೊಸ ಮಸೂದೆಯನ್ನು ಪರಿಚಯಿಸಲಿದೆ. ಈ ಮಸೂದೆ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಎಸಗುವ ವ್ಯಕ್ತಿಗಳಿಗೆ ಹತ್ತು ವರ್ಷಗಳ ಕಾಲ ಶಿಕ್ಷೆಯನ್ನು ಹಾಗೂ ಒಂದು ಕೋಟಿ ದಂಡವನ್ನು ವಿಧಿಸಲಾಗಿದೆ. ಈ ಮಸೂದೆಯನ್ನು ಸೋಮವಾರ ಅಂದರೆ ಫೆ.5ರಂದು ಉಭಯ ಸದನಗಳಲ್ಲಿ ಮಂಡನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಮಸೂದೆಯಲ್ಲಿ ಯಾವೆಲ್ಲ ಕಾನೂನಿನ ಕ್ರಮಗಳನ್ನು ಒಳಗೊಂಡಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ದೆಹಲಿ, ಫೆ.2: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುವ ಅವ್ಯವಹಾರಗಳು ಮತ್ತು ಅಕ್ರಮಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಪಬ್ಲಿಕ್ ಎಕ್ಸಾಮಿನೇಷನ್ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) (Public Examination bill) ಮಸೂದೆಯನ್ನು ಪರಿಚಯಿಸಲಿದೆ. ಈಗಾಗಲೇ ಈ ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಉಭಯ ಸದನಗಳಲ್ಲಿ ಮಂಡನೆಯಾಗಲಿದೆ. ಪಬ್ಲಿಕ್ ಎಕ್ಸಾಮಿನೇಷನ್ ಮಸೂದೆಯನ್ನು ಫೆ.5ರಂದು ಸದನದಲ್ಲಿ ಮಂಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಮಸೂದೆಯ ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವ್ಯವಹಾರಗಳು ಮತ್ತು ಅಕ್ರಮ ನಡೆದರೆ ಆರೋಪಿಗಳಿಗೆ ಹತ್ತು ವರ್ಷ ಜೈಲು ಹಾಗೂ ಒಂದು ಕೋಟಿ ರೂ. ದಂಡವನ್ನು ವಿಧಿಸಲಾಗುವುದು. ಹಾಗೂ ಈ ಕಾನೂನಿಗೆ ವಿದ್ಯಾರ್ಥಿಗಳು ಗುರಿಯಾಗುವುದಿಲ್ಲ. ಯಾರು ಈ ಅಕ್ರಮವನ್ನು ಮಾಡಿದ್ದಾರೆ, ಅವ್ಯವಹಾರ ಗ್ಯಾಂಗ್ಗಳಿಗೆ ಮತ್ತು ಈ ಮಾಫಿಯಾದಲ್ಲಿ ತೋಡಗಿಕೊಂಡಿರುವ ವ್ಯಕ್ತಿಗಳು ಈ ಕಾನೂನಿಗೆ ಗುರಿಯಾಗಲಿದ್ದಾರೆ. ಜತೆಗೆ ಈ ಕೃತ್ಯದಲ್ಲಿ ಸರ್ಕಾರಿ ಅಧಿಕಾರಿಗಳು ತೋಡಗಿಕೊಂಡಿದ್ದರೆ ಅವರನ್ನು ಕೂಡ ಈ ಶಿಕ್ಷೆಗೆ ಗುರಿಯಾಲಿದ್ದಾರೆ.
ರಾಜಸ್ಥಾನದಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ, ಹರಿಯಾಣದಲ್ಲಿ ಗ್ರೂಪ್-ಡಿ ಹುದ್ದೆಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ), ಗುಜರಾತ್‌ನಲ್ಲಿ ಜೂನಿಯರ್ ಕ್ಲರ್ಕ್‌ಗಳ ನೇಮಕಾತಿ ಪರೀಕ್ಷೆ ಮತ್ತು ಬಿಹಾರದಲ್ಲಿ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆ, ಕರ್ನಾಟಕದ ಪೊಲೀಸ್ ಇಲಾಖೆ ಪರೀಕ್ಷೆಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರದ್ದುಗೊಳಿಸಿರುವ ಕಾರಣ ಈ ಮಸೂದೆಯನ್ನು ತರಲಾಗುತ್ತಿದೆ ಎಂದು ಮೂಲಗಳು ಹೇಳಿದೆ. ಇನ್ನು ಇಂತಹ ಪರೀಕ್ಷೆಗಳನ್ನು ಮಾಡಲು ಡಿಜಿಟಲ್ ಕ್ರಮಗಳನ್ನು ಹಾಗೂ ಇದಕ್ಕೊಂದು ರಾಷ್ಟ್ರೀಯ ತಾಂತ್ರಿಕ ಸಮಿತಿಯನ್ನು ರಚಿಸಲು ಈ ಮಸೂದೆಯಲ್ಲಿ ತಿಳಿಸಲಾಗಿದೆ.
ಈ ಸಮಿತಿಯ ಮೂಲಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಇನ್ಸುಲೇಟ್ ಮಾಡಲು ಪ್ರೋಟೋಕಾಲ್‌ಗಳನ್ನು ಅಭಿವೃದ್ಧಿಪಡಿಸುವುದು, ಫೂಲ್‌ಫ್ರೂಫ್ ಐಟಿ ಭದ್ರತಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಮಾರ್ಗಗಳು ಮತ್ತು ವಿಧಾನಗಳನ್ನು ರೂಪಿಸುವುದು, ಪರೀಕ್ಷಾ ಕೇಂದ್ರಗಳಲ್ಲಿ ಎಲೆಕ್ಟ್ರಾನಿಕ್ ಕಣ್ಗಾವಲು ಖಾತರಿಪಡಿಸುವುದು ಮತ್ತು ಅಂತಹ ಪರೀಕ್ಷೆಗಳನ್ನು ನಡೆಸಲು ನಿಯೋಜಿಸಬೇಕಾದ ಐಟಿ ಮತ್ತು ಭೌತಿಕ ಮೂಲಸೌಕರ್ಯಗಳಿಗೆ ರಾಷ್ಟ್ರೀಯ ಮಾನದಂಡಗಳು ಮತ್ತು ಸೇವೆಗಳನ್ನು ರೂಪಿಸಲಾಗುವುದು ಎಂದು ಈ ಮಸೂದೆಯನ್ನು ತಿಳಿಸಲಾಗಿದೆ.
ಇದನ್ನೂ ಓದಿ: ಜಾರ್ಖಂಡ್ನ 12ನೇ ಮುಖ್ಯಮಂತ್ರಿಯಾಗಿ ಚಂಪೈ ಸೊರೆನ್ ಪ್ರಮಾಣವಚನ ಸ್ವೀಕಾರ
ಈ ಮೂಲಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮ ಮತ್ತು ಅವ್ಯವಹಾರಗಳನ್ನು ತಡೆಗಟ್ಟಬಹುದು. ಹಾಗೂ ಅಕ್ರಮಗಳಲ್ಲಿ ಭಾಗಿಯಾಗುವ ಗ್ಯಾಂಗ್ಗಳನ್ನು ಈ ಮೂಲಕ ಪತ್ತೆ ಮಾಡಿ ಶಿಕ್ಷೆ ನೀಡಬಹುದು. ಪರೀಕ್ಷೆ ಪೇಪರ್ ಸೂರಿಕೆಯನ್ನು ಕೂಡ ತಡೆಯಲು ಇದು ಸಹಾಯ ಮಾಡುತ್ತದೆ. ಈ ಮಸೂದೆಯು ಪ್ರಾಥಮಿಕವಾಗಿ ಇಂತಹ ಕೃತ್ಯಗಳನ್ನು ತಡೆಗಟ್ಟುತ್ತದೆ. ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಗಳಿಗೆ ಹೆಚ್ಚಿನ ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ವಿಶ್ವಾಸಾರ್ಹತೆಯನ್ನು ತರುವುದು ಈ ಮಸೂದೆ ಮುಖ್ಯ ಗುರಿಯಾಗಿದೆ.
ಈ ಮಸೂದೆಯಿಂದ ಪ್ರಾಮಾಣಿಕ ಮತ್ತು ನಿಜವಾಗಲು ಪ್ರಯತ್ನ ಪಟ್ಟ ಯುವ ಸಮುದಾಯಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಅವರ ಭವಿಷ್ಯವು ಸುರಕ್ಷಿತವಾಗಿಸುವುದು ಮಸೂದೆಯ ಹೊಣೆಯಾಗಿದೆ. ಇನ್ನು ಸಾರ್ವಜನಿಕ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಬಜೆಟ್ ಅಧಿವೇಶಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳನ್ನು ಉದ್ದೇಶಿ ಮಾಡಿದ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ