ಹೈದರಾಬಾದ್: ತೆಲಂಗಾಣದಾದ್ಯಂತ (Telangana) ಕಿರಿಯ ವೈದ್ಯರು ಮಾಡುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದ ಕರೆಯಿಂದ ಇಂದು (ಸೋಮವಾರ) ಬೆಳಗ್ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಆರೋಗ್ಯ ಸೇವೆಗಳಿಗೆ ಹೊಡೆತ ಬಿದ್ದಿದೆ. ಹೈದರಾಬಾದ್‌ನ (Hyderabad) ಉಸ್ಮಾನಿಯಾ ವೈದ್ಯಕೀಯ ಕಾಲೇಜಿನಲ್ಲಿ (Osmania Medical College) ಮುಷ್ಕರ ನಡೆಸುತ್ತಿದ್ದಾರೆ. ತೆಲಂಗಾಣ ಜೂನಿಯರ್ ಡಾಕ್ಟರ್ಸ್ ಅಸೋಸಿಯೇಷನ್ (ಟಿಜೆಯುಡಿಎ) ಸದಸ್ಯರು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದ ಕರೆಯಿಂದಾಗಿ ಸಿಬ್ಬಂದಿ ಕೊರತೆಯ ಬಿಕ್ಕಟ್ಟನ್ನು ನಿವಾರಿಸಲು, ಆಸ್ಪತ್ರೆಯ ಆಡಳಿತ ಮಂಡಳಿಗಳು ಬೋಧಕ ಸಿಬ್ಬಂದಿ ಸೇರಿದಂತೆ ಎಲ್ಲಾ ಹಿರಿಯ ಆರೈಕೆದಾರರಿಗೆ ತಮ್ಮ ರಜೆಯನ್ನು ರದ್ದುಗೊಳಿಸಿ ತಮ್ಮ ನಿಯಮಿತ ಕರ್ತವ್ಯಕ್ಕೆ ವರದಿ ಮಾಡುವಂತೆ ಸೂಚಿಸಿವೆ.
ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿ ಇಂದು ಹೊರರೋಗಿ ವಿಭಾಗವು ಕಾರ್ಯ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆದರೆ, ಮೆಡಿಕೋ ಮುಷ್ಕರದಿಂದಾಗಿ 50ಕ್ಕೂ ಹೆಚ್ಚು ಆಪರೇಷನ್ಗಳನ್ನು ಮುಂದೂಡಬೇಕಾಯಿತು. ಇಂದು ಮುಂಜಾನೆಯಿಂದಲೇ ಕಿರಿಯ ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಒಪಿ ಮತ್ತು ಐಚ್ಛಿಕ ಶಸ್ತ್ರಚಿಕಿತ್ಸೆಗಳನ್ನು ಬಹಿಷ್ಕರಿಸಿದ್ದಾರೆ.
#WATCH | Telangana junior doctors organise a protest at the Osmania Medical College in Hyderabad as part of the indefinite statewide strike.
They say that they will boycott outpatient (OPD) services, elective surgeries and ward duties and demand the solution of unresolved… pic.twitter.com/QsK3EXaSSB
— ANI (@ANI) June 24, 2024
ಇದನ್ನೂ ಓದಿ: Viral: ಗೋ ಹತ್ಯೆ ಮಾಡುವವರಿಗೆ ಚಿಕಿತ್ಸೆ ನೀಡಬೇಡಿ, ಆಸ್ಪತ್ರೆಯ ಮೇಲೆ ಗುಂಪಿನ ದಾಳಿ, ಕಣ್ಣೀರು ಹಾಕಿದ ವೈದ್ಯರು
ಕಿರಿಯ ವೈದ್ಯರು ತಮ್ಮ ಸ್ಟೈಫಂಡ್ ಅನ್ನು ನಿಯಮಿತವಾಗಿ ಪಾವತಿಸಲು ವ್ಯವಸ್ಥೆ, ಉತ್ತಮ ಹಾಸ್ಟೆಲ್ ಸೌಲಭ್ಯಗಳು, ಆಸ್ಪತ್ರೆ ಆವರಣದೊಳಗೆ ಭದ್ರತೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರಕ್ಕೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಇಂದು ಮಧ್ಯಾಹ್ನ ಅಥವಾ ಸಂಜೆ ಮುಷ್ಕರ ನಿರತ ವೈದ್ಯರೊಂದಿಗೆ ರಾಜ್ಯ ಸರ್ಕಾರ ಮಾತುಕತೆ ನಡೆಸುವ ನಿರೀಕ್ಷೆಯಿದೆ ಎಂದು ಹಿರಿಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ ಅಕ್ರಮ: ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಪ್ರಶಂಸಿದ ಭಾರತೀಯ ವೈದ್ಯಕೀಯ ಸಂಘ
ತೆಲಂಗಾಣದಲ್ಲಿ ಕಿರಿಯ ವೈದ್ಯರು ರಾಜ್ಯಾದ್ಯಂತ ಅನಿರ್ದಿಷ್ಟ ಅವಧಿಗೆ ಮುಷ್ಕರ ನಡೆಸುತ್ತಿದ್ದಾರೆ. OPD ಸೇವೆಗಳು, ಶಸ್ತ್ರಚಿಕಿತ್ಸೆಗಳನ್ನು ಬಹಿಷ್ಕರಿಸಿದ್ದಾರೆ. ವೈದ್ಯರ ಮೇಲೆ ಪರಿಣಾಮ ಬೀರುವ ಹಲವಾರು ಬಗೆಹರಿಯದ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿದ್ದಾರೆ. ಅವರ ಪ್ರಮುಖ ಬೇಡಿಕೆಗಳಲ್ಲಿ ಸಕಾಲದಲ್ಲಿ ಸ್ಟೈಫಂಡ್ ವಿತರಣೆಗಾಗಿ ಗ್ರೀನ್ ಚಾನಲ್ ಸ್ಥಾಪನೆ ಮುಂತಾದವುಗಳು ಸೇರಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ