ಕ್ಯಾಡ್ಬರಿ ಡೈರಿಮಿಲ್ಕ್ ಚಾಕೊಲೇಟ್ನಲ್ಲಿ ಹುಳು ಪತ್ತೆ
ಚಾಕೊಲೇಟ್ನಲ್ಲಿ ಹುಳುಗಳಿವೆ ಎಂದು ವ್ಯಕ್ತಿಯೊಬ್ಬರು ತೆಲಂಗಾಣ ಆಹಾರ ಪ್ರಯೋಗಾಲಯಕ್ಕೆ ಚಾಕೊಲೇಟ್ನ್ನು ಕಳುಹಿಸಿದ್ದರು. ಪರೀಕ್ಷೆಗೆ ಕಳುಹಿಸಲಾದ ಎರಡು ಚಾಕೊಲೇಟ್‌ಗಳಲ್ಲಿ ಹುಳುಗಳಿರುವುದು ಹೌದು ಎಂಬುದು ಸಾಬೀತಾಗಿದೆ. ಚಾಕೊಲೇಟ್‌ಗಳು ಸೇವನೆಗೆ ಅಸುರಕ್ಷಿತ ಎಂದು ವರದಿ ಹೇಳಿದೆ.
ಕ್ಯಾಡ್ಬರಿ ಡೈರಿ ಮಿಲ್ಕ್ನಲ್ಲಿ ಹುಳುಗಳು ಪತ್ತೆಯಾಗಿವೆ, ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯವು ಎರಡು ಕ್ಯಾಡ್ಬರಿ ಡೈರಿ ಮಿಲ್ಕ್(Dairy Milk) ಚಾಕೊಲೇಟ್‌ಗಳಲ್ಲಿ ಹುಳುಗಳಿರುವುದನ್ನು ದೃಢಪಡಿಸಿವೆ. ಪ್ರಯೋಗಾಲಯವು ಚಾಕೊಲೇಟ್‌ಗಳು ಸೇವನೆಗೆ ಅಸುರಕ್ಷಿತ ಎಂದು ಹೇಳಿದೆ. ತಮ್ಮ ಚಾಕೊಲೇಟ್ನಲ್ಲಿ ಹುಳು ಇದೆ ಎಂದು ವ್ಯಕ್ತಿಯೊಬ್ಬರು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಅದರ ವರದಿ ಇದೀಗ ಬಂದಿದ್ದು, ಅದು ಹುಳು ಹೌದು ಎಂದು ಖಚಿತಪಡಿಸಲಾಗಿದೆ.
ರಾಬಿನ್ ಜಾಕಿಯಸ್ ಅವರು ಫೆಬ್ರವರಿ 9 ರಂದು ಹೈದರಾಬಾದ್‌ನ ಅಮೀರಪೇಟ್‌ನ ಸೂಪರ್‌ಮಾರ್ಕೆಟ್‌ನಿಂದ ಖರೀದಿಸಿದ ಚಾಕೊಲೇಟ್‌ಗಳಲ್ಲಿ ಹುಳುಗಳು ಕಂಡುಬಂದ ನಂತರ ಪರೀಕ್ಷೆಗೆ ಕಳುಹಿಸಿದ್ದರು. ಬುಧವಾರ, ರಾಬಿನ್ ಎಂಬುವವರು ಎಕ್ಸ್ನಲ್ಲಿ ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯದ ವರದಿಯನ್ನು ಹಂಚಿಕೊಂಡಿದ್ದಾರೆ.
#Update The Telangana State Food laboratory has confirmed the Cadbury Chocolate (Roasted Almond) was “UNSAFE TO CONSUME” they found WHITE WORMS & WEB!
Here’s the report of the 2 Cadbury chocolates purchased at Ratnadeep Retail.
It is perhaps high time that FMCG companies are… https://t.co/zPvNtKT3NJ pic.twitter.com/8JwBpNZdDg
— Robin Zaccheus (@RobinZaccheus) February 28, 2024
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ರ ಸೆಕ್ಷನ್ 3 (zz) (iii) (ix) ಅಡಿಯಲ್ಲಿ ಅಸುರಕ್ಷಿತವೆಂದು ಪರಿಗಣಿಸಲಾಗಿದೆ ಎಂದು ಪ್ರಯೋಗಾಲಯದ ವರದಿ ಹೇಳಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಟ್ಯಾಗ್ ಮಾಡಿದ ರಾಬಿನ್, ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಚಾಕೊಲೇಟ್ ಅಚ್ಚುಮೆಚ್ಚು, ಹೀಗಿರುವಾಗ ಅವರ ಆರೋಗ್ಯದ ಗತಿ ಎನು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಓದಿ: Chocolate Day 2024 Date: ಚಾಕೋಲೇಟ್ ದಿನ ಯಾವಾಗ?; ಅದರ ಇತಿಹಾಸ, ವಿಶೇಷತೆಯೇನು?
ಪೋಸ್ಟ್ 5.1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಶೇರ್ ಮೂಲಕ ಸುಮಾರು 2,500 ಲೈಕ್‌ಗಳು ಬಂದಿವೆ, ಈ ಕುರಿತು ಜನರು ವಿಭಿನ್ನ ಕಮೆಂಟ್‌ಗಳನ್ನು ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:59 pm, Thu, 29 February 24