ದುಬಾರಿ ಕೊಡುಗೆ -ವಿಡಿಯೋ ನೋಡಿ: ಸಚಿವ ಕೆಟಿಆರ್ ಹುಟ್ಟುಹಬ್ಬಕ್ಕೆ ಟೊಮೇಟೊ ವಿತರಿಸಿದ ಬಿಆರ್‌ಎಸ್ ನಾಯಕ
ತೆಲಂಗಾಣ ಐಟಿ ಸಚಿವ ಕೆ.ಟಿ. ರಾಮರಾವ್ ಅವರ ಹುಟ್ಟುಹಬ್ಬದ ಅಂಗವಾಗಿ ಬಿಆರ್‌ಎಸ್ ಮುಖಂಡ ರಾಜನಾಲ ಶ್ರೀಹರಿ ಅವರು 300 ಮಂದಿಗೆ ತಲಾ 2 ಕೆಜಿ ಟೊಮೆಟೊ ವಿತರಿಸಿದರು. ಕಳೆದ ವರ್ಷ ದಸರಾ ವೇಳೆ ಶ್ರೀಹರಿ ಕೋಳಿ ಮತ್ತು ಮದ್ಯವನ್ನು ಜನರಿಗೆ ದಾನ ಮಾಡಿದ್ದರು.
ವಾರಂಗಲ್, ಜುಲೈ 24: ಬಿಆರ್‌ಎಸ್ ಕಾರ್ಯಾಧ್ಯಕ್ಷ ಹಾಗೂ ತೆಲಂಗಾಣ ಸಚಿವ ಕೆ.ಟಿ. ರಾಮರಾವ್ (KT Rama Rao) ಅವರ 47ನೇ ಹುಟ್ಟುಹಬ್ಬದ ಅಂಗವಾಗಿ ಬಿಆರ್‌ಎಸ್ ಮುಖಂಡ ರಾಜನಾಲ ಶ್ರೀಹರಿ (BRS leader Rajanala Srihari) ಜನರಿಗೆ ಟೊಮೆಟೊ (tomatoes) ವಿತರಿಸಿದರು. ಸೋಮವಾರ ಶ್ರೀಹರಿ 300 ಕ್ಕೂ ಹೆಚ್ಚು ಜನರಿಗೆ ತಲಾ 2 ಕೆಜಿ ಟೊಮ್ಯಾಟೊ ನೀಡಿದರು, ಅವರಲ್ಲಿ ಹೆಚ್ಚಿನವರು ಮಹಿಳೆಯರಾಗಿದ್ದರು. ನೂರಾರು ಮಹಿಳೆಯರು (women) ವಾರಂಗಲ್ (Warangal) ಚೌಕದ ಬಳಿ ಟೊಮೆಟೊ ಸಂಗ್ರಹಿಸಲು ಸರತಿ ಸಾಲಿನಲ್ಲಿ ನಿಂತಿದ್ದರು.
ಕೆಟಿಆರ್ ಅವರ 47ನೇ ಹುಟ್ಟುಹಬ್ಬದಂದು ಸುಮಾರು 300 ಮಂದಿಗೆ ತಲಾ ಎರಡು ಕೆಜಿ ಟೊಮೇಟೊ ವಿತರಿಸಿದ್ದೇನೆ. ಕೆಟಿಆರ್ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದು ನನಗೆ ಇಷ್ಟವಿಲ್ಲ ಎಂದು ಕೆಟಿಆರ್ ಹೇಳಿದ್ದರು. ಬಡವರಿಗೆ ಸಹಾಯವಾಗುವ ರೀತಿಯಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಬೇಕೆಂದು ಕೆಟಿಆರ್ ಬಯಸುತ್ತಾರೆ, ಅದಕ್ಕಾಗಿಯೇ ನಾನು ಟೊಮೇಟೊ ವಿತರಿಸುತ್ತಿದ್ದೇನೆ ಎಂದು ಶ್ರೀಹರಿ ಹೇಳಿದರು.
Remember #BRS leader Rajanala Srihari, who distributed liquor and chicken to mark the party’s entry into national politics? Today, he distributed tomatoes in #Warangal on the occasion of IT Minister #KTR‘s birthday. #GiftASmile #Telangana pic.twitter.com/O6CHM05bfq
— Krishnamurthy (@krishna0302) July 24, 2023
ಆಂಧ್ರಪ್ರದೇಶದ ಕ್ರೀಡಾ ಪ್ರಾಧಿಕಾರದ (ಎಸ್‌ಎಪಿ) ಮಾಜಿ ಅಧ್ಯಕ್ಷ ಶ್ರೀಹರಿ ಅವರು ಕಳೆದ ದಸರಾ ಸಂದರ್ಭದಲ್ಲಿ ಜನರಿಗೆ ಕೋಳಿ ಮತ್ತು ಮದ್ಯವನ್ನು ವಿತರಿಸುವ ಮೂಲಕ ಸುದ್ದಿಯಾಗಿದ್ದರು. ರಾಮರಾವ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ಹಣ ವ್ಯರ್ಥ ಮಾಡುವ ಬದಲು ಅನಾಥರಿಗೆ ಸಹಾಯ ಮಾಡಲು ಬಿಆರ್‌ಎಸ್ ಪಕ್ಷದ ಕಾರ್ಯಕರ್ತರಿಗೆ ವಿನಂತಿಸಿದರು. 94 ಅನಾಥ ಮಕ್ಕಳಿಗೆ ಲ್ಯಾಪ್ ಟಾಪ್ ವಿತರಿಸಿ ಅವರ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸುವುದಾಗಿ ಭರವಸೆ ನೀಡಿದರು.