AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸ್ಸಾಂನಲ್ಲಿ ಚುನಾವಣಾ ಆಯೋಗದ ಡಿಲಿಮಿಟೇಶನ್ ಪ್ರಕ್ರಿಯೆಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್

ಅಸ್ಸಾಂನಲ್ಲಿ ಆರಂಭಿಸಿರುವ ಚುನಾವಣಾ ಆಯೋಗದ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ತಡೆಹಿಡಿಯಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ರಾಜ್ಯದಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆ ಕುರಿತು ಯಾವುದೇ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಚುನಾವಣಾ ಸಮಿತಿಯನ್ನು ತಡೆಯುವ ಯಾವುದೇ ಆದೇಶವನ್ನು ನೀಡುವುದಿಲ್ಲ ಎಂದು ಹೇಳಿದೆ.

ಅಸ್ಸಾಂನಲ್ಲಿ ಚುನಾವಣಾ ಆಯೋಗದ ಡಿಲಿಮಿಟೇಶನ್ ಪ್ರಕ್ರಿಯೆಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
ರಶ್ಮಿ ಕಲ್ಲಕಟ್ಟ
|

Updated on:Jul 24, 2023 | 5:23 PM

Share

ದಿಸ್​​​ಪುರ್ ಜುಲೈ 24: ಅಸ್ಸಾಂನ (Assam) 126 ಅಸೆಂಬ್ಲಿ ಕ್ಷೇತ್ರಗಳು ಮತ್ತು 14 ಲೋಕಸಭಾ ಕ್ಷೇತ್ರಗಳ ವಿಂಗಡಣೆಗಾಗಿ ಭಾರತ ಚುನಾವಣಾ ಆಯೋಗದ (ECI) ಇತ್ತೀಚಿನ ಕರಡು ಪ್ರಸ್ತಾವನೆಯನ್ನು ಪ್ರಶ್ನಿಸಿ ಅಸ್ಸಾಂನ ವಿರೋಧ ಪಕ್ಷದ ನಾಯಕರು ಸಲ್ಲಿಸಿದ ಮನವಿಯ ಮೇಲೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಮೂರು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಚಿಸಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಸ್ಸಾಂನಲ್ಲಿ ಆರಂಭಿಸಿರುವ ಚುನಾವಣಾ ಆಯೋಗದ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ತಡೆಹಿಡಿಯಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ರಾಜ್ಯದಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆ ಕುರಿತು ಯಾವುದೇ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಚುನಾವಣಾ ಸಮಿತಿಯನ್ನು ತಡೆಯುವ ಯಾವುದೇ ಆದೇಶವನ್ನು ನೀಡುವುದಿಲ್ಲ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು, 1950 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8 ಎ ಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಲು ಸಮ್ಮತಿಸಿತು. ಇದು ಚುನಾವಣಾ ಆಯೋಗಕ್ಕೆ ಕ್ಷೇತ್ರಗಳ ವಿಂಗಡಣೆಯನ್ನು ಕೈಗೊಳ್ಳಲು ಅಧಿಕಾರ ನೀಡುತ್ತದೆ.

ಮೂರು ವಾರಗಳಲ್ಲಿ ಅರ್ಜಿಗಳ ಕುರಿತು ಕೇಂದ್ರ ಮತ್ತು ಚುನಾವಣಾ ಆಯೋಗದ ಉತ್ತರವನ್ನು ಕೋರಿದ ಸುಪ್ರೀಂಕೋರ್ಟ್, ಅರ್ಜಿದಾರರು ಎರಡು ವಾರಗಳಲ್ಲಿ ತಮ್ಮ ಮರುಪ್ರತಿಕ್ರಿಯೆಗಳನ್ನು ಸಲ್ಲಿಸಬಹುದು ಎಂದು ಹೇಳಿದರು.

ಇದನ್ನೂ ಓದಿ: Viral: ಲೈಕ್​​ ಮಸುಕಾಗುತ್ತದೆ, ಡಿಜಿಟಲ್​ ಗುರುತು ಉಳಿಯುತ್ತದೆ; ಅಸ್ಸಾಂ ಪೊಲೀಸರ ಟ್ವೀಟ್​

ಅಸ್ಸಾಂನ ಒಂಬತ್ತು ವಿರೋಧ ಪಕ್ಷಗಳನ್ನು ಪ್ರತಿನಿಧಿಸುವ ಹತ್ತು ನಾಯಕರು ಕಾಂಗ್ರೆಸ್, ರೈಜೋರ್ ದಳ, ಅಸ್ಸಾಂ ಜಾತೀಯ ಪರಿಷತ್, ಸಿಪಿಐ(ಎಂ), ಸಿಪಿಐ, ಟಿಎಂಸಿ, ಎನ್‌ಸಿಪಿ, ಆರ್‌ಜೆಡಿ ಮತ್ತು ಅಂಚಲಿಕ್ ಗಣ ಮೋರ್ಚಾ ಇತ್ತೀಚೆಗೆ ನಡೆಯುತ್ತಿರುವ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ಸಂಬಂಧ ನ್ಯಾಯಾಲಯದ ಮುಂದೆ ಇನ್ನೆರಡು ಅರ್ಜಿಗಳು ಬಾಕಿ ಇವೆ.  ಅರ್ಜಿದಾರರು ಚುನಾವಣಾ ಸಮಿತಿಯು ಅಳವಡಿಸಿಕೊಂಡ ವಿಧಾನವನ್ನು ಮತ್ತು ಜೂನ್ 20, 2023 ರಂದು ಸೂಚಿಸಿದ ಅದರ ಪ್ರಸ್ತಾಪಗಳನ್ನು ನಿರ್ದಿಷ್ಟವಾಗಿ ಪ್ರಶ್ನಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:05 pm, Mon, 24 July 23