ತೆಲಂಗಾಣ ಫೋನ್ ಕದ್ದಾಲಿಕೆ ಪ್ರಕರಣ: ರಾಜ್ಯ ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥ ಆರೋಪಿ ನಂ 1
ತೆಲಂಗಾಣ ಪೊಲೀಸರ ಪ್ರಕಾರ, ಬಂಧಿತ ಎಎಸ್ಪಿಗಳಿಬ್ಬರೂ ಅಮಾನತುಗೊಂಡಿರುವ ರಾಜ್ಯ ಗುಪ್ತಚರ ಬ್ಯೂರೋ (ಎಸ್‌ಐಬಿ) ಉಪ ಪೊಲೀಸ್ ಅಧೀಕ್ಷಕ (ಡಿಎಸ್‌ಪಿ) ಡಿ ಪ್ರಣೀತ್ ರಾವ್ ಅವರೊಂದಿಗೆ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂದಿನ ಬಿಆರ್‌ಎಸ್ ಸರ್ಕಾರದ ಅವಧಿಯಲ್ಲಿ ವಿವಿಧ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ಗುಪ್ತಚರ ಮಾಹಿತಿಯನ್ನು ಅಳಿಸಿಹಾಕಿದ್ದಕ್ಕಾಗಿ ಹಾಗೂ ಫೋನ್ ಕದ್ದಾಲಿಕೆ ಆರೋಪದ ಮೇಲೆ ರಾವ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.
ಹೈದರಾಬಾದ್ ಮಾರ್ಚ್ 25: ತೆಲಂಗಾಣವನ್ನು (Telangana) ಬೆಚ್ಚಿಬೀಳಿಸಿದ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ( phone tapping case) ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು (ASP) ಬಂಧಿಸಿದ್ದಾರೆ. ತನಿಖೆಯ ವೇಳೆ ಹಾಜರಾಗದ ಮತ್ತು ಅಸಹಕಾರ ಆರೋಪದ ಮೇಲೆ ರಾಜ್ಯ ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥ ಟಿ ಪ್ರಭಾಕರ್ ರಾವ್ ಮತ್ತು ಇತರ ಇಬ್ಬರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಎನ್‌ಡಿಟಿವಿ ವರದಿಯ ಪ್ರಕಾರ, ಯುಎಸ್‌ನಲ್ಲಿದ್ದಾರೆ ಎಂದು ನಂಬಲಾದ ರಾವ್ ಅವರನ್ನು ಪ್ರಕರಣದಲ್ಲಿ ಆರೋಪಿ ನಂ.1 ಎಂದು ಹೆಸರಿಸಲಾಗಿದೆ.
ವರದಿಯ ಪ್ರಕಾರ, ಬಂಧಿತರಾದ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ಡಿಸಿಪಿ) ತಿರುಪತಣ್ಣ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್ ಭುಜಂಗ ರಾವ್ ಅವರು ಕ್ರಮವಾಗಿ ವಿಶೇಷ ಗುಪ್ತಚರ ಬ್ಯೂರೋ (ಎಸ್‌ಐಬಿ) ಮತ್ತು ಗುಪ್ತಚರ ಇಲಾಖೆಯಲ್ಲಿ ಎಎಸ್‌ಪಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಅವರನ್ನು ಭಾನುವಾರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಕಮಿಷನರ್ ಕಾರ್ಯಪಡೆಯ (ಹೈದರಾಬಾದ್ ಪೊಲೀಸ್ ವಿಭಾಗ) ಆಗಿನ ಪೊಲೀಸ್ ಉಪ ಆಯುಕ್ತ ಪಿ ರಾಧಾಕೃಷ್ಣ ಮತ್ತು ತೆಲುಗು ಟಿವಿ ಚಾನೆಲ್‌ನ ಹಿರಿಯ ಕಾರ್ಯನಿರ್ವಾಹಕರ ವಿರುದ್ಧವೂ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಏನಿದು ತೆಲಂಗಾಣ ಫೋನ್ ಕದ್ದಾಲಿಕೆ ಪ್ರಕರಣ?
ತೆಲಂಗಾಣ ಪೊಲೀಸರ ಪ್ರಕಾರ, ಬಂಧಿತ ಎಎಸ್ಪಿಗಳಿಬ್ಬರೂ ಅಮಾನತುಗೊಂಡಿರುವ ರಾಜ್ಯ ಗುಪ್ತಚರ ಬ್ಯೂರೋ (ಎಸ್‌ಐಬಿ) ಉಪ ಪೊಲೀಸ್ ಅಧೀಕ್ಷಕ (ಡಿಎಸ್‌ಪಿ) ಡಿ ಪ್ರಣೀತ್ ರಾವ್ ಅವರೊಂದಿಗೆ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂದಿನ ಬಿಆರ್‌ಎಸ್ ಸರ್ಕಾರದ ಅವಧಿಯಲ್ಲಿ ವಿವಿಧ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ಗುಪ್ತಚರ ಮಾಹಿತಿಯನ್ನು ಅಳಿಸಿಹಾಕಿದ್ದಕ್ಕಾಗಿ ಹಾಗೂ ಫೋನ್ ಕದ್ದಾಲಿಕೆ ಆರೋಪದ ಮೇಲೆ ರಾವ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು.
ಇದನ್ನೂ ಓದಿ: ಏನಿದೆ ರೇಟ್? ಎಂದು ಕಂಗನಾ ಫೋಟೊ ಪೋಸ್ಟ್ ಮಾಡಿ ಅವಮಾನಿಸಿದ ಸುಪ್ರಿಯಾ ಶ್ರಿನೇಟ್; ಅಕೌಂಟ್ ಹ್ಯಾಕ್ ಎಂದು ಸಬೂಬು
ಹೈದರಾಬಾದ್ ಪೊಲೀಸ್ ಹೇಳಿಕೆಯ ಪ್ರಕಾರ, ಇಬ್ಬರು ಬಂಧಿತ ಪೊಲೀಸ್ ಅಧಿಕಾರಿಗಳು ತಮ್ಮ ಪ್ರೊಫೈಲ್‌ಗಳನ್ನು ರಚಿಸುವ ಮೂಲಕ ಅಕ್ರಮವಾಗಿ ಖಾಸಗಿ ವ್ಯಕ್ತಿಗಳನ್ನು ಮೇಲ್ವಿಚಾರಣೆ ಮಾಡುವ ಸಂಚಿನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಪ್ಪೊಪ್ಪಿಕೊಂಡರು.ಈ ಮೂಲಕ ಅವರು ಅಧಿಕೃತ ಸ್ಥಾನಗಳನ್ನು ದುರುಪಯೋಗಪಡಿಸಿಕೊಂಡಿದ್ದರು. ಪ್ರಣೀತ್ ರಾವ್ ಅವರು ಅಪರಿಚಿತ ವ್ಯಕ್ತಿಗಳ ಪ್ರೊಫೈಲ್‌ಗಳನ್ನು ಕ್ರಿಯೇಟ್ ಮಾಡಿದ್ದು, ಕೆಲವು ಕಂಪ್ಯೂಟರ್ ಸಿಸ್ಟಮ್‌ಗಳು ಮತ್ತು ಅಧಿಕೃತ ಡೇಟಾವನ್ನು ನಾಶಪಡಿಸುವುದರ ಜೊತೆಗೆ, ಅನುಮತಿಯಿಲ್ಲದೆ ಮತ್ತು ಕಾನೂನುಬಾಹಿರವಾಗಿ ರಹಸ್ಯವಾಗಿ ಮೇಲ್ವಿಚಾರಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರ ಅವರನ್ನು ಅಮಾನತುಗೊಳಿಸಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:59 pm, Mon, 25 March 24