ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷಕ್ಕೆ ಖಲಿಸ್ತಾನಿ ಗುಂಪಿನಿಂದಲೂ ಹಣ?; ಎಸ್‌ಎಫ್‌ಜೆ ಮುಖ್ಯಸ್ಥ ಪನ್ನುನ್ ಹೇಳಿದ್ದೇನು ?
ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟ ವಿಡಿಯೊದಲ್ಲಿ, ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್, ದೇವಿಂದರ್ ಪಾಲ್ ಸಿಂಗ್ ಭುಲ್ಲರ್ನ್ನು ಬಿಡುಗಡೆ ಮಾಡಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿಧಿಗೆ ಹಣ ನೀಡಲಾಗಿದೆ ಎಂದು ಆರೋಪ ಮಾಡಿದ್ದಾನೆ. ಭುಲ್ಲರ್ 1993 ರ ದೆಹಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿದ್ದು, ಈ ಬಾಂಬ್ ಸ್ಫೋಟದಲ್ಲಿ 9 ಮಂದಿ ಸಾವಿಗೀಡಾಗಿದ್ದು, 31 ಮಂದಿ ಗಾಯಗೊಂಡಿದ್ದರು.
ದೆಹಲಿ ಮಾರ್ಚ್ 25 : ಖಲಿಸ್ತಾನಿ ಗುಂಪು ಆಮ್ ಆದ್ಮಿ ಪಕ್ಷಕ್ಕೆ (AAP) 2014ರಿಂದ 2022ರವರೆಗೆ ಸುಮಾರು 133.54 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿದೆ ಎಂದು ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್ (Gurpatwant Singh Pannun) ಹೇಳಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟ ವಿಡಿಯೊದಲ್ಲಿ, ಪನ್ನುನ್, ದೇವಿಂದರ್ ಪಾಲ್ ಸಿಂಗ್ ಭುಲ್ಲರ್ನ್ನು ಬಿಡುಗಡೆ ಮಾಡಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ನಿಧಿಗೆ ಹಣ ನೀಡಲಾಗಿದೆ ಎಂದು ಆರೋಪ ಮಾಡಿದ್ದಾನೆ. ಭುಲ್ಲರ್ 1993 ರ ದೆಹಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿದ್ದು, ಈ ಬಾಂಬ್ ಸ್ಫೋಟದಲ್ಲಿ 9 ಮಂದಿ ಸಾವಿಗೀಡಾಗಿದ್ದು, 31 ಮಂದಿ ಗಾಯಗೊಂಡಿದ್ದರು.
ಸಂಸತ್ತಿನ ಅಡಿಪಾಯವನ್ನು “ಅಲುಗಾಡಿಸುವ” ಪ್ರತಿಜ್ಞೆ ಸೇರಿದಂತೆ ಸಿಖ್ಸ್ ಫಾರ್ ಜಸ್ಟಿಸ್ ನಾಯಕ ಈ ಹಿಂದೆ ಭಾರತದ ವಿರುದ್ಧ ಬೆದರಿಕೆಗಳನ್ನು ಹಾಕಿದ್ದಾರೆ. ಅದೃಷ್ಟವಶಾತ್, ಈ ಬೆದರಿಕೆಗಳು ಕಾರ್ಯರೂಪಕ್ಕೆ ಬಂದಿಲ್ಲ.
ಪ್ರತ್ಯೇಕತಾವಾದಿ ನಾಯಕನ ಹತ್ಯೆಗೆ ಭಾರತ ಸಂಚು ರೂಪಿಸಿದೆ ಎಂದು ಅಮೆರಿಕ ಆರೋಪಿಸಿದೆ. ಆದರೆ ಭಾರತ ಈ ಆರೋಪನ್ನು ನಿರಾಕರಿಸಿತ್ತು.
ಪನ್ನುನ್, ಕೇಜ್ರಿವಾಲ್ ಮತ್ತು ಅವರ ಪಕ್ಷವು ಖಲಿಸ್ತಾನಿ ಗುಂಪುಗಳಿಂದ ಹಣ ಪಡೆದಿದೆ ಎಂದು ಆರೋಪಿಸುವುದು ಇದೇ ಮೊದಲಲ್ಲ. ಜನವರಿಯಲ್ಲಿ, ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಬ್ಬರೂ ಯುಎಸ್ ಮತ್ತು ಕೆನಡಾದಲ್ಲಿ ಖಾಲಿಸ್ತಾನ್ ಬೆಂಬಲಿಗರಿಂದ 6 ಮಿಲಿಯನ್ ಡಾಲರ್ ದೇಣಿಗೆಯನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದ್ದನು.
ಏತನ್ಮಧ್ಯೆ, ದೆಹಲಿ ಅಬಕಾರಿ ನೀತಿ “ಹಗರಣ” ದಲ್ಲಿ ಕೇಜ್ರಿವಾಲ್ ಬಂಧನದ ನಂತರ ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾರೆ. ಬಂಧನದಿಂದ ರಕ್ಷಣೆ ಕೋರಿ ಅವರ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಸದ್ಯ ಅವರು ಮಾರ್ಚ್ 28ರವರೆಗೆ ಇಡಿ ಕಸ್ಟಡಿಯಲ್ಲಿದ್ದಾರೆ. ಬಂಧನದಲ್ಲಿದ್ದರೂ ಮುಖ್ಯಮಂತ್ರಿಯಾಗಿ ಮುಂದುವರಿಯಲು ಎಎಪಿ ನಿರ್ಧರಿಸಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಅದರ ಸಂಚಾಲಕರಿಗೆ ಪ್ರಚಾರ ಮಾಡಲು ಸಾಧ್ಯವಾಗದ ಕಾರಣ ಪಕ್ಷವು “ಮೈ ಭೀ ಕೇಜ್ರಿವಾಲ್” ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
ಇದನ್ನೂ ಓದಿ: ಏನಿದೆ ರೇಟ್? ಎಂದು ಕಂಗನಾ ಫೋಟೊ ಪೋಸ್ಟ್ ಮಾಡಿ ಅವಮಾನಿಸಿದ ಸುಪ್ರಿಯಾ ಶ್ರಿನೇಟ್; ಅಕೌಂಟ್ ಹ್ಯಾಕ್ ಎಂದು ಸಬೂಬು
ಅಬಕಾರಿ ನೀತಿ ‘ಹಗರಣ’ದ ಸಂದರ್ಭದಲ್ಲಿ ಕೇಜ್ರಿವಾಲ್ ಬಳಸಿದ್ದ ಫೋನ್ ‘ಕಾಣೆಯಾಗಿದೆ’ ಎಂದು ಇಡಿ ಒಳಗಿನ ಮೂಲಗಳು ಹೇಳಿಕೊಂಡಿವೆ, ಆದರೆ ಎಎಪಿ ನಾಯಕನಿಗೆ ಜೈಲಿನಲ್ಲಿ ಕಂಪ್ಯೂಟರ್ ಅಥವಾ ಕಾಗದವನ್ನು ನೀಡಲಾಗುವುದಿಲ್ಲ ಎಂದು ಸಂಸ್ಥೆ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ ಎಂದು ವರದಿಯಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ