ಬಾಬರಿ ಮಸೀದಿಗೆ ಶಿಲಾನ್ಯಾಸ ಮಾಡಿದ ಟಿಎಂಸಿ ಶಾಸಕ; ಮತ್ತೆ ಭುಗಿಲೆದ್ದ ಹೊಸ ವಿವಾದ
ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿಗೆ ಅಮಾನತುಗೊಂಡಿರುವ ಟಿಎಂಸಿ ಶಾಸಕ ಶಿಲಾನ್ಯಾಸ ನೆರವೇರಿಸಿದ್ದಾರೆ. ಇದರಿಂದಾಗಿ ಪಶ್ಚಿಮ ಬಂಗಾಳದಲ್ಲಿ ಉದ್ವಿಗ್ನತೆ ಉಂಟಾಗಿದೆ. ಅಮಾನತುಗೊಂಡ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಬಿಗಿ ಭದ್ರತೆಯ ನಡುವೆ ಬಾಬರಿ ಮಸೀದಿ ಮಾದರಿಯ ಮಸೀದಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಗಮನಿಸಬೇಕಾದ ವಿಷಯವೆಂದರೆ, ಡಿಸೆಂಬರ್ 6, 1992ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಲಾಗಿತ್ತು. ಇದೀಗ ಅದೇ ದಿನ ಬಾಬರಿ ಮಸೀದಿಯ ಶಿಲಾನ್ಯಾಸ ನೆರವೇರಿಸಲಾಗಿದೆ.

ಮುರ್ಷಿದಾಬಾದ್, ಡಿಸೆಂಬರ್ 6: ಅಯೋಧ್ಯೆಯಲ್ಲಿ ರಾಮ ಮಂದಿರದ (Ram Mandir) ನಿರ್ಮಾಣ ಪೂರ್ಣಗೊಂಡ ಬೆನ್ನಲ್ಲೇ ಇದೀಗ ಬಂಗಾಳದಲ್ಲಿ ಬಾಬರಿ ಮಸೀದಿಗೆ ಶಿಲಾನ್ಯಾಸ ನೆರವೇರಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರದಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ಮಾದರಿಯಲ್ಲಿಯೇ ಮಸೀದಿಯೊಂದಕ್ಕೆ ಶಿಲಾನ್ಯಾಸ ಮಾಡಿದ್ದಾರೆ. ಅಮಾನತುಗೊಂಡ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಇಂದು ಬಿಗಿ ಭದ್ರತೆಯ ನಡುವೆ ಬಾಬರಿ ಮಸೀದಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ.
ಈ ಘಟನೆಯಿಂದ ಪಶ್ಚಿಮ ಬಂಗಾಳದ ಕೋಮು ಸೂಕ್ಷ್ಮ ಪ್ರದೇಶವಾದ ಮುರ್ಷಿದಾಬಾದ್‌ನಲ್ಲಿ ಇಂದು ಉದ್ವಿಗ್ನತೆ ಉಂಟಾಗಿದೆ. ಇಂದು ಬೆಳಿಗ್ಗೆಯಿಂದ ಸಾವಿರಾರು ಜನರು ಸೇರಿದ್ದ ಸ್ಥಳದಲ್ಲಿ “ನಾರಾ-ಎ-ತಕ್ಬೀರ್, ಅಲ್ಲಾಹು ಅಕ್ಬರ್” ಎಂಬ ಘೋಷಣೆಗಳು ಮೊಳಗುತ್ತಿದ್ದಂತೆ ಕಬೀರ್ ವೇದಿಕೆಯ ಮೇಲೆ ಧರ್ಮಗುರುಗಳ ಜೊತೆಗೆ ರಿಬ್ಬನ್ ಕತ್ತರಿಸುವ ಮೂಲಕ ಶಿಲಾನ್ಯಾಸ ಮಾಡಿದ್ದಾರೆ.
#WATCH | Murshidabad, West Bengal: Suspended TMC MLA Humayun Kabir gets on the stage at the venue where he will lay the foundation stone of Babri Masjid. pic.twitter.com/LPGYIMJZTV
— ANI (@ANI) December 6, 2025
ಇದನ್ನೂ ಓದಿ: Ram Mandir Dhwajarohan 2025: ರಾಮ ಮಂದಿರದ ಧ್ವಜಾರೋಹಣಕ್ಕೆ ಈ ದಿನವನ್ನೇ ಆಯ್ಕೆ ಮಾಡಿದ್ದು ಏಕೆ ಗೊತ್ತಾ?
ಈ ಶಿಲಾನ್ಯಾಸ ಸಮಾರಂಭವು ಭಾರೀ ಭದ್ರತಾ ವ್ಯವಸ್ಥೆಯಡಿಯಲ್ಲಿ ನಡೆಯಿತು. ಕೋಮುವಾದಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಈ ವಾರದ ಆರಂಭದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಿಂದ ಅಮಾನತುಗೊಂಡಿದ್ದ ಕಬೀರ್ ಈ ತಿಂಗಳ ಆರಂಭದಲ್ಲಿ ಬಾಬರಿ ಮಸೀದಿಯ ಶಂಕುಸ್ಥಾಪನಾ ಸಮಾರಂಭವನ್ನು ಘೋಷಿಸಿದ್ದರು. ಇದು ರಾಜಕೀಯ ಟೀಕೆಗೆ ಕಾರಣವಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




