ಕಾಶ್ಮೀರ:ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಪೊಲೀಸರು ಎನ್‌ಕೌಂಟರ್ ನಡೆಸಿದ್ದು, ಎಲ್‌ಇಟಿ ಸಂಘಟನೆಯ ಇಬ್ಬರು ಉಗ್ರರ ಹತ್ಯೆಗೀಡಾಗಿದ್ದಾರೆ. ಇಖ್ಲಾಕ್ ಹಾಜಂ ಸೇರಿ ಎಲ್‌ಇಟಿ ಸಂಘಟನೆಯ (LeT/TRF ) ಇಬ್ಬರು ಉಗ್ರರ ಸಾವನ್ನಪ್ಪಿದವರು. ಅನಂತನಾಗ್ ಜಿಲ್ಲೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಅಲಿ ಮೊಹಮದ್ ಅವರನ್ನು (HC Ali Mohd) ಇಖ್ಲಾಕ್ (Ikhlaq Hajam) ಹತ್ಯೆಗೈದಿದ್ದ ಎಂದು ಪೊಲೀಸ್ ಮೂಲಗಳು (IGP Kashmir) ತಿಳಿಸಿವೆ. ಎರಡು ಪಿಸ್ತೂಲುಗಳನ್ನು ಉಗ್ರರ ವಾಸಸ್ಥಳದಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಶ್ರೀನಗರದಲ್ಲಿ ಪೊಲೀಸರಿಂದ ಎನ್‌ಕೌಂಟರ್- ಎಎನ್ಐ ಟ್ವೀಟ್ ವರದಿ:
#UPDATE 2 terrorists of terror outfit LeT/TRF have been neutralised by Srinagar Police. One of the killed terrorists Ikhlaq Hajam was involved in the recent killing of HC Ali Mohd at Hassanpora Anantnag. Incriminating materials including 2 pistols recovered: IGP Kashmir
— ANI (@ANI) February 5, 2022
ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ, ಐವರು ದುರ್ಮರಣ:
ಉತ್ತರ ಪ್ರದೇಶದಲ್ಲಿ ರಾಂಪುರದ ತಾಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Tanda PS) ಭೀಕರ ಅಪಘಾತ ಸಂಭವಿಸಿದ್ದು, ಐವರು ದುರ್ಮರಣಕ್ಕೀಡಾಗಿದ್ದಾರೆ. ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ (Rampur district hospital) ದಾಖಲು ಮಾಡಲಾಗಿದೆ.
Uttar Pradesh | 5 killed, 1 injured in a horrific accident in Tanda area PS in Rampur
5 have died and the condition of the driver is critical and is admitted to the district hospital. The bodies have been sent to the district hospital for post-mortem: Rajesh Kumar, SDM Tanda pic.twitter.com/qy8rioDxmu
— ANI UP/Uttarakhand (@ANINewsUP) February 4, 2022
ಮುಂಬೈ ಸರಣಿ ಸ್ಫೋಟದ ಆರೋಪಿ, ದಾವೂದ್ ಇಬ್ರಾಹಿಂ ಆಪ್ತ ಅಬು ಬಕರ್ ಯುಎಇಯಲ್ಲಿ ಬಂಧನ
ದೆಹಲಿ: 1993 ಮುಂಬೈ ಸರಣಿ ಸ್ಫೋಟದ (1993 Mumbai Blast)ಆರೋಪಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಅಬು ಬಕರ್ ನನ್ನು ಭಾರತೀಯ ಭದ್ರತಾ ದಳದ ಸಿಬ್ಬಂದಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಬಂಧಿಸಿವೆ. 1993ರಲ್ಲಿ ಮುಂಬೈನಲ್ಲಿ ಒಟ್ಟು 12 ಪ್ರದೇಶಗಳನ್ನು ಸ್ಫೋಟಿಸಲಾಗಿತ್ತು. ಈ ದುರಂತದಲ್ಲಿ 257 ಮಂದಿ ಮೃತಪಟ್ಟಿದ್ದರೆ, 713ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 29ವರ್ಷಗಳಿಂದಲೂ ಭಾರತದ ಮೋಸ್ಟ್ವಾಂಟೆಡ್ ಪಟ್ಟಿಯಲ್ಲಿದ್ದ ಉಗ್ರ ಅಬು ಬಕರ್ನನ್ನು ಬಂಧಿಸಲಾಗಿದ್ದು, ಆತನನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಅಬು ಬಕರ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಬಳಕೆ ತರಬೇತಿ ನೀಡುವುದರಲ್ಲಿ ತೊಡಗಿಕೊಂಡಿದ್ದ. ಅಷ್ಟೇ ಅಲ್ಲ ದುಬೈನಲ್ಲಿದ್ದ ಇಬ್ರಾಹಿಂ ದಾವೂದ್ ನಿವಾಸದಲ್ಲಿ ಮುಂಬೈ ಸ್ಫೋಟದ ಕುರಿತು ರೂಪುರೇಷೆ ಮಾಡುವಲ್ಲಿ, ಆರ್ಡಿಎಕ್ಸ್ ಲ್ಯಾಂಡಿಂಗ್ ಮಾಡುವ ಬಗ್ಗೆ ಯೋಜನೆ ರೂಪಿಸುವಲ್ಲಿ ಈತ ಸಕ್ರಿಯನಾಗಿದ್ದ ಎಂದು ಹೇಳಲಾಗಿದೆ. 1993ರ ಸ್ಫೋಟದ ಪ್ರಮುಖ ಆರೋಪಿಯಾಗಿರುವ ಈತ, ನಂತರದ ದಿನಗಳಲ್ಲಿ ಪಾಕಿಸ್ತಾನ ಮತ್ತು ಯುಎಇನಲ್ಲಿಯೇ ವಾಸವಾಗಿದ್ದ. ಈತ ಯುಎಇನಲ್ಲಿಯೇ ವಾಸವಾಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಭಾರತೀಯ ಭದ್ರತಾ ದಳದ ಸಿಬ್ಬಂದಿ ಇದೀಗ ಬಂಧಿಸಿದ್ದಾರೆ. 2019ರಲ್ಲಿ ಯುಎಇ ಭದ್ರತಾ ಏಜೆನ್ಸಿಗಳೇ ಅಬು ಬಕರ್ನನ್ನು ಒಮ್ಮೆ ಅರೆಸ್ಟ್ ಮಾಡಿದ್ದವು. ಆದರೆ ಕೆಲವು ದಾಖಲೆಗಳು ಸರಿಯಾಗಿ ಸಿಗದ ಕಾರಣ ಅದು ಹೇಗೋ ಕಸ್ಟಡಿಯಿಂದ ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ:
Vasant Panchami 2022: ವಿದ್ಯೆಯ ಅಧಿದೇವತೆ ತಾಯಿ ಸರಸ್ವತಿ ಆವಿರ್ಭವಿಸಿದ ದಿನ -ನಿಸರ್ಗ ವಸಂತೋತ್ಸವ ಇಂದಿನಿಂದ ಆರಂಭ
ಇದನ್ನೂ ಓದಿ:
Power Cut: ಕ್ಯಾತ್ಸಂದ್ರ ಉಪವಿಭಾಗದ ವ್ಯಾಪ್ತಿಯಲ್ಲಿ ಭಾನುವಾರ ವಿದ್ಯುತ್ ವ್ಯತ್ಯಯ, ನಿಧಿ ಆಸೆಗೆ ತುಳಸಿ ಕಟ್ಟೆ ಧ್ವಂಸ
Published On - 6:42 am, Sat, 5 February 22