ಕೆಂಪುಕೋಟೆ ಬಳಿ ಸತ್ತ ಕಾಗೆಗಳಲ್ಲಿ ಹಕ್ಕಿ ಜ್ವರ; ಜ. 26 ರವರೆಗೆ ಸಾರ್ವಜನಿಕರ ಪ್ರವೇಶಕ್ಕಿಲ್ಲ ಅನುಮತಿ
ಮೃತ ಕಾಗೆಗಳ ಸ್ಯಾಂಪಲ್ಗಳನ್ನು ಜಲಂಧರ್ ಮತ್ತು ಭೋಪಾಲ್ಗೆ ಟೆಸ್ಟ್ಗೆ ಕಳಿಸಲಾಗಿತ್ತು. ದೆಹಲಿಯಲ್ಲಿ ಹಕ್ಕಿಜ್ವರ ಭೀತಿ ಹೆಚ್ಚುತ್ತಿರುವ ಬೆನ್ನಲ್ಲೇ, ಘಾಜಿಪುರ ಪಶುಮಾರುಕಟ್ಟೆಯಲ್ಲಿ ಪ್ರಾಣಿವಧೆ ನಿಷೇಧ ಸಂಬಂಧ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮುಂದೂಡಿದೆ.
ದೆಹಲಿ: ಗಣರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಸಜ್ಜಾಗುತ್ತಿರುವ ಕೆಂಪುಕೋಟೆ (Red Fort)ಯಲ್ಲಿ ಸದ್ಯ ಹಕ್ಕಿ ಜ್ವರದ ಭೀತಿ ಎದುರಾಗಿದ್ದು, ಜ.26ರವರೆಗೂ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ.
ರೆಡ್ ಫೋರ್ಟ್ ಬಳಿ ಕೆಲವು ದಿನಗಳ ಹಿಂದೆ 15 ಕಾಗೆಗಳು ಸತ್ತುಬಿದ್ದಿದ್ದವು. ಅವುಗಳ ಸ್ಯಾಂಪಲ್ ತಪಾಸಣೆ ಮಾಡಿದ್ದು, ಇದೀಗ ವರದಿ ಬಂದಿದೆ. ಹಕ್ಕಿಜ್ವರದಿಂದಲೇ ಮೃತಪಟ್ಟಿದ್ದು ವರದಿಯಲ್ಲಿ ಸ್ಪಷ್ಟವಾದ ಹಿನ್ನೆಲೆಯಲ್ಲಿ ಆತಂಕ ಶುರುವಾಗಿದೆ. ಇದೇ ಕಾರಣಕ್ಕೆ ಇಂದಿನಿಂದ ಜನವರಿ 26ವರೆಗೂ ಕೆಂಪುಕೋಟೆ ಗೇಟ್ ಮುಚ್ಚಲಿದ್ದು, ಪ್ರವಾಸಿಗರ ಭೇಟಿಗೆ ಅವಕಾಶ ಇಲ್ಲ ಎಂದು ಸ್ಥಳೀಯ ಆಡಳಿತ ತಿಳಿಸಿದೆ.
ಜನವರಿ 26ರಂದು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನಡೆಯುವ ಜತೆ, ಸಶಸ್ತ್ರ ಪಡೆಗಳ ಪರೇಡ್ ಕೂಡ ಇರುತ್ತದೆ. ಹಾಗಾಗಿ ಮುಂಜಾಗೃತಾ ಕ್ರಮ ವಹಿಸುವ ನಿಟ್ಟಿನಲ್ಲಿ ಒಂದು ವಾರದ ಕಾಲ ಮುಚ್ಚಲಾಗುವುದು ಎಂದು ತಿಳಿಸಲಾಗಿದೆ.
ಇನ್ನು ಮೃತ ಕಾಗೆಗಳ ಸ್ಯಾಂಪಲ್ಗಳನ್ನು ಜಲಂಧರ್ ಮತ್ತು ಭೋಪಾಲ್ಗೆ ಟೆಸ್ಟ್ಗೆ ಕಳಿಸಲಾಗಿತ್ತು. ದೆಹಲಿಯಲ್ಲಿ ಹಕ್ಕಿಜ್ವರ ಭೀತಿ ಹೆಚ್ಚುತ್ತಿರುವ ಬೆನ್ನಲ್ಲೇ, ಘಾಜಿಪುರ ಪಶುಮಾರುಕಟ್ಟೆಯಲ್ಲಿ ಪ್ರಾಣಿವಧೆ ನಿಷೇಧ ಸಂಬಂಧ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮುಂದೂಡಿದೆ. ಹಕ್ಕಿ ಜ್ವರ ಕಾರಣದಿಂದ ಸದ್ಯ ಘಾಜಿಪುರ ಮಾರ್ಕೆಟ್ ಕೂಡ ಬಂದ್ ಆಗಿದೆ. ಇನ್ನು ಮಾರ್ಚ್ 8ರಂದು ಅರ್ಜಿ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ತಿಳಿಸಿದೆ.
91 ಸಾವಿರ ಜನರಿಗೆ ಉದ್ಯೋಗಾವಕಾಶ! ನಾಲ್ಕು ಐಟಿ ಕಂಪನಿಗಳಿಂದ ಕ್ಯಾಂಪಸ್ ಸೆಲೆಕ್ಷನ್ಗೆ ಸಿದ್ಧತೆ..