ಥಾಣೆಯ ಕೆಮಿಕಲ್ ಫ್ಯಾಕ್ಟರಿ ಸ್ಫೋಟ; ಸಾವಿನ ಸಂಖ್ಯೆ 10ಕ್ಕೆ ಏರಿಕೆ, ಇನ್ನಷ್ಟು ಶವಗಳಿಗಾಗಿ ಹುಡುಕಾಟ

ಥಾಣೆಯ ಡೊಂಬಿವ್ಲಿ ಎಂಐಡಿಸಿ ಪ್ರದೇಶದಲ್ಲಿ ಮೇ 23ರಂದು ಸಂಭವಿಸಿದ ಭಾರೀ ಸ್ಫೋಟದಲ್ಲಿ ಇದುವರೆಗೆ 10 ಜನರು ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಒಟ್ಟು 26 ಜನರು ತೀವ್ರ ಗಾಯದಿಂದ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಪಘಾತದಲ್ಲಿ ಇದುವರೆಗೆ ಒಟ್ಟು 65 ಮಂದಿ ಗಾಯಗೊಂಡಿದ್ದಾರೆ.

ಥಾಣೆಯ ಕೆಮಿಕಲ್ ಫ್ಯಾಕ್ಟರಿ ಸ್ಫೋಟ; ಸಾವಿನ ಸಂಖ್ಯೆ 10ಕ್ಕೆ ಏರಿಕೆ, ಇನ್ನಷ್ಟು ಶವಗಳಿಗಾಗಿ ಹುಡುಕಾಟ
ಡೊಂಬಿವ್ಲಿಯ ಸ್ಫೋಟ

Updated on: May 25, 2024 | 7:28 PM

ಥಾಣೆ: ಮಹಾರಾಷ್ಟ್ರದ ಥಾಣೆ (Thane) ಜಿಲ್ಲೆಯ ಡೊಂಬಿವ್ಲಿಯಲ್ಲಿ ಉಂಟಾದ ರಾಸಾಯನಿಕ ಕಾರ್ಖಾನೆ ಸ್ಫೋಟದಲ್ಲಿ (Chemical Factory Blast) ಸಾವಿನ ಸಂಖ್ಯೆ 10ಕ್ಕೆ ಏರಿದೆ. ರಕ್ಷಣಾ ಸಿಬ್ಬಂದಿ ಸ್ಥಳದಲ್ಲಿ ಅವಶೇಷಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಇಂದು ಮತ್ತೊಂದು ದೇಹವನ್ನು ಹೊರತೆಗೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ಮೃತದೇಹ ಯಾರದೆಂದು ಗುರುತು ಹಿಡಿಯಲು ಸಾಧ್ಯವಾಗಿಲ್ಲ. ಮೃತದೇಹ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಬಾಯ್ಲರ್ ಸ್ಫೋಟ ಮತ್ತು ಡೊಂಬಿವ್ಲಿ ಎಂಐಡಿಸಿಯ 2ನೇ ಹಂತದಲ್ಲಿರುವ ಅಮುದನ್ ಕೆಮಿಕಲ್ಸ್‌ನಲ್ಲಿ ಗುರುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಮತ್ತು 65ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇವರಲ್ಲಿ 42 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಘಟನೆಯಲ್ಲಿ 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Fire Accident: ಥಾಣೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಸ್ಫೋಟ; ದುರಂತದಲ್ಲಿ 4 ಮಂದಿ ಸಾವು, 25 ಜನರಿಗೆ ಗಾಯ

ಬೆಂಕಿ ಅವಘಡ ಎಷ್ಟು ತೀವ್ರವಾಗಿದೆಯೆಂದರೆ ಅದು ಮನೆಗಳ ಕಿಟಕಿ ಗಾಜುಗಳನ್ನು ಒಡೆದುಹಾಕಿದೆ ಮತ್ತು ಸುತ್ತಮುತ್ತಲಿನ ಕಾರುಗಳು, ರಸ್ತೆಗಳು ಮತ್ತು ವಿದ್ಯುತ್ ಕಂಬಗಳನ್ನು ಹಾನಿಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಥಾಣೆ ಜಿಲ್ಲೆಯ ನ್ಯಾಯಾಲಯವು ರಾಸಾಯನಿಕ ಕಾರ್ಖಾನೆಯ ಮಾಲೀಕ ಮಲಯ್ ಮೆಹ್ತಾ (38) ಅವರನ್ನು ಮೇ 29ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಇದನ್ನೂ ಓದಿ: ಸವದಿ ಸಹಭಾಗಿತ್ವದ ಕಾರ್ಖಾನೆಯಲ್ಲಿ ಸ್ಫೋಟ: ಮಹಿಳೆ ಸಾವು, ಇನ್ನಿಬ್ಬರಿಗೆ ಗಂಭೀರ ಗಾಯ

ಡೊಂಬಿವ್ಲಿಯ ಎಂಐಡಿಸಿಯಲ್ಲಿ ಕಳೆದ 3 ದಿನಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸ್ಫೋಟದಿಂದ ಇನ್ನೂ ಹಲವರು ನಾಪತ್ತೆಯಾಗಿದ್ದು, ಯಾವುದೇ ತನಿಖೆ ನಡೆದಿಲ್ಲ. ಆದರೆ ಕೊನೆಯ ವ್ಯಕ್ತಿ ಪತ್ತೆಯಾಗುವವರೆಗೂ ರಕ್ಷಣಾ ಕಾರ್ಯಾಚರಣೆ ಮುಂದುವರೆಯಲಿದೆ ಎನ್ನಲಾಗಿದೆ. ಎನ್‌ಡಿಆರ್‌ಎಫ್ ತಂಡ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಎನ್‌ಡಿಆರ್‌ಎಫ್ ಜವಾನ್ ಸಾರಂಗ್ ಕುರ್ವೆ ಈ ರಕ್ಷಣಾ ಕಾರ್ಯಾಚರಣೆಯ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಕಾಣೆಯಾದ ಕೊನೆಯ ವ್ಯಕ್ತಿ ಪತ್ತೆಯಾಗುವವರೆಗೂ ನಮ್ಮ ಶೋಧ ಕಾರ್ಯಾಚರಣೆ ಮುಂದುವರಿಯುತ್ತದೆ. ಈ ಸ್ಥಳದಲ್ಲಿ ಇನ್ನೂ ರಾಸಾಯನಿಕಗಳಿವೆ. ಕೆಲವೆಡೆ ಬೆಂಕಿ ಹೊತ್ತಿ ಉರಿಯುತ್ತಿದೆ. ಹಾಗಾಗಿ ಅಪಾಯವಿದೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us