‘ಡೈರಿಗೆ ಹಾಲು ನೀಡುತ್ತೀರಿ ಅಂದ್ರೆ, ಡೈರಿಯವರು ನಿಮ್ಮ ಆಕಳನ್ನು ವಶಪಡಿಸಿಕೊಳ್ತಾರಾ?’ ಪರೋಕ್ಷವಾಗಿ ವಿಪಕ್ಷಗಳಿಗೆ ಟಾಂಗ್ ಕೊಟ್ಟ ಪ್ರಧಾನಿ ಮೋದಿ

| Updated By: ಸಾಧು ಶ್ರೀನಾಥ್​

Updated on: Dec 15, 2020 | 4:36 PM

ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಗಮನಾರ್ಹ ಬದಲಾವಣೆಗಳನ್ನು ಬಳಸಿಕೊಂಡು ವಿಪಕ್ಷಗಳು ರೈತರನ್ನು ಅಡ್ಡದಾರಿಗೆ ಎಳೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ಮೇಲೆ ಆಕ್ಷೇಪ ವ್ಯಕ್ತಪಡಿಸಿದರು.

‘ಡೈರಿಗೆ ಹಾಲು ನೀಡುತ್ತೀರಿ ಅಂದ್ರೆ, ಡೈರಿಯವರು ನಿಮ್ಮ ಆಕಳನ್ನು ವಶಪಡಿಸಿಕೊಳ್ತಾರಾ?’  ಪರೋಕ್ಷವಾಗಿ ವಿಪಕ್ಷಗಳಿಗೆ ಟಾಂಗ್ ಕೊಟ್ಟ ಪ್ರಧಾನಿ ಮೋದಿ
ಕಚ್ ಪ್ರದೇಶದ ರೈತರ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಿದರು.
Follow us on

ಅಹಮದಾಬಾದ್: ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಗಮನಾರ್ಹ ಬದಲಾವಣೆಗಳನ್ನು ಬಳಸಿಕೊಂಡು ವಿಪಕ್ಷಗಳು ರೈತರನ್ನು ಅಡ್ಡದಾರಿಗೆ ಎಳೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ಮೇಲೆ ಆಕ್ಷೇಪ ವ್ಯಕ್ತಪಡಿಸಿದರು. ‘ನೀವು ಡೈರಿಯೊಂದಕ್ಕೆ ಹಾಲು ನೀಡುತ್ತೀರಿ ಎಂದರೆ, ಡೈರಿಯವರು ನಿಮ್ಮ ಆಕಳನ್ನು ವಶಪಡಿಸಿಕೊಳ್ಳುತ್ತಾರಾ?’ ಎಂದು ಪ್ರಶ್ನಿಸಿದ ಅವರು, ಪರೋಕ್ಷವಾಗಿ ನೂತನ ಕೃಷಿ ಕಾಯ್ದೆಗಳ ಕುರಿತು ಪಂಜಾಬ್ ರೈತರ ಆಕ್ಷೇಪವನ್ನು ನಿರಾಕರಿಸಿದರು. ಕಂಪನಿಗಳು ಕೃಷಿ ಉತ್ಪನ್ನ ಖರೀದಿಸುತ್ತಾರೆಂದರೆ ಕೃಷಿ ಭೂಮಿಯನ್ನೂ ವಶಪಡಿಸಿಕೊಂಡಂತಲ್ಲ ಎಂದು ಸಮರ್ಥಿಸಿಕೊಂಡರು.

ಅವರು ಗುಜರಾತ್​ನ ಕಚ್​ನ ವಿಘಾಕೋಟ್ ಗ್ರಾಮದ ಬಳಿ 30 ಗಿಗಾವ್ಯಾಟ್ಸ್ ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನಾ ಘಟಕ, ಹಾಲು ಸಂಸ್ಕರಣೆ ಮತ್ತು ಪ್ಯಾಕಿಂಗ್, ಡಿಸಾಲಿನೇಶನ್ ಘಟಕಗಳಿಗೆ ಶಂಕು ಸ್ಥಾಪನೆ ಮಾಡಿ ಮಾತನಾಡಿದರು.

ಕೇಂದ್ರ ಸರ್ಕಾರ ದೇಶದ ರೈತರ ಹಿತ ಕಾಯಲು ಬದ್ಧವಾಗಿದೆ. ಹಲವು ವರ್ಷಗಳಿಂದ ರೈತ ಒಕ್ಕೂಟಗಳ ಬೇಡಿಕೆಯಂತೆಯೇ ನೂತನ ಕೃಷಿ ಕಾಯ್ದೆಗಳನ್ನು ರೂಪಿಸಲಾಗಿದೆ.  ಕೃಷಿ ಕ್ಷೇತ್ರದಲ್ಲಿ ಕೈಗೊಂಡ ಗಮನಾರ್ಹ ಬದಲಾವಣೆಗಳು ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿವೆ. ದೇಶದ ರೈತ ಒಕ್ಕೂಟಗಳು ಮತ್ತು ವಿರೋಧ ಪಕ್ಷಗಳು ವರ್ಷಗಳಿಂದ ಇಟ್ಟ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ ಎಂದು ಅವರು ನೂತನ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡರು.

ಕಚ್ ಪ್ರದೇಶದ ಮಹಿಳೆಯರ ಜೊತೆ ಸಂವಾದ ನಡೆಸಿದ ಪ್ರಧಾನಿ

ಸೌರಶಕ್ತಿ, ಜಲಶಕ್ತಿಯ ಬಳಕೆಯಿಂದ ಸರ್ವತೋಮುಖ ಅಭಿವೃದ್ಧಿ
ಒಂದು ಕಾಲದಲ್ಲಿ ಕಚ್ ತೀರಾ ಹಿಂದುಳಿದ ಪ್ರದೇಶವಾಗಿತ್ತು. ಆದರೆ ಇಂದು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ವಿಫುಲವಾಗಿ ದೊರಕುವ ಸೌರಶಕ್ತಿಯ ಬಳಕೆಯಿಂದ ಇದು ಸಾಧ್ಯವಾಗಿದೆ.  ನರ್ಮದಾ ನದಿ ನೀರು ಬಳಸಿ ಮರುಭೂಮಿಯಂತಿದ್ದ ಕಚ್​ನಲ್ಲಿ ಹಸಿರು ಚಿಗುರಲಿದೆ. ಸೌರಶಕ್ತಿ, ಜಲಶಕ್ತಿಗಳ ಸಮರ್ಥ ಬಳಕೆಯಿಂದ ಸರ್ವತೋಮುಖ ಅಭಿವೃದ್ಧಿಯಾಗಲಿದೆ ಎಂದು ಅವರು ಹೇಳಿದರು.

ಕಚ್​ನ ವಿಘಾಕೋಟ್ ಗ್ರಾಮದ ಬಳಿ 30 ಗಿಗಾವ್ಯಾಟ್ಸ್ ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನಾ ಘಟಕ ದೇಶದ ಅತಿ ದೊಡ್ಡ ಸೌರ ವಿದ್ಯುತ್ ಉತ್ಪಾದನಾ ಘಟಕವಾಗಲಿದೆ. ಹಾಲು ಸಂಸ್ಕರಣೆ ಮತ್ತು ಪ್ಯಾಕಿಂಗ್ ಘಟಕಕ್ಕೂ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದರು. ಕಚ್ ಭಾಗದಲ್ಲಿನ ನೀರಿನ ಬವಣೆಯನ್ನು ದೂರ ಮಾಡುವ ಉದ್ದೇಶ ಹೊಂದಿದ ಡಿಸಾಲೇಶನ್ ಘಟಕಕ್ಕೂ ಶಿಲಾನ್ಯಾಸ ನೆರವೇರಿಸಿದರು.