ಅಳಿವಿನಲ್ಲಿರುವ ಚಿತಾಲ್ ಜಿಂಕೆಗಳು ಚೀತಾಕ್ಕೆ ಆಹಾರ? ಬಿಷ್ಣೋಯ್ ಸಮುದಾಯದಿಂದ ಮೋದಿಗೆ ಪತ್ರ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 21, 2022 | 7:09 PM

ಹೊಸ ಚೀತಾಗಳಿಗೆ ಆಹಾರಕ್ಕಾಗಿ ರಾಜಸ್ಥಾನದಿಂದ ಜಿಂಕೆಗಳನ್ನು ರಾಜ್ಯದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದೆ ಎಂಬ ವರದಿಗಳನ್ನು ಮಧ್ಯಪ್ರದೇಶ ಸರ್ಕಾರ ನಿರಾಕರಿಸಿದೆ.

ಅಳಿವಿನಲ್ಲಿರುವ ಚಿತಾಲ್ ಜಿಂಕೆಗಳು ಚೀತಾಕ್ಕೆ ಆಹಾರ?  ಬಿಷ್ಣೋಯ್ ಸಮುದಾಯದಿಂದ ಮೋದಿಗೆ ಪತ್ರ
ಸಾಂದರ್ಭಿಕ ಚಿತ್ರ
Follow us on

ಮೋದಿ ಹುಟ್ಟುಹಬ್ಬದಂದು ಆಫ್ರಿಕಾದಿಂದ ​ಎಂಟು ಆಫ್ರಿಕನ್ ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದೆ. ಇದೀಗ ಈ ಚೀತಾ ಆಹಾರಕ್ಕಾಗಿ ರಾಜಸ್ಥಾನದಿಂದ ಚಿತಾಲ್ (ಮಚ್ಚೆಯುಳ್ಳ ಜಿಂಕೆ) ನ್ನು ತರಲಾಗಿದೆ ಎಂಬ ವರದಿಗಳನ್ನು ಮಧ್ಯಪ್ರದೇಶ ಸರ್ಕಾರ ನಿರಾಕರಿಸಿದೆ. ಹೊಸದಾಗಿ ಆಫಿಕಾದಿಂದ ತಂದಿರುವ ಚೀತಾ ಬಗ್ಗೆ ಜನರಲ್ಲಿ ಕುತೂಹಲತೆಯನ್ನು ಸೃಷ್ಟಿ ಮಾಡಿದೆ. ಆದರೆ ರಾಜಸ್ಥಾನದಿಂದ ಚಿತಾಲ್ ಅನ್ನುವ ಜಿಂಕೆಗಳನ್ನು ಚೀತಾದ ಆಹಾರಕ್ಕಾಗಿ ಕುನೋಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ದೃಢೀಕರಿಸದ ವರದಿಗಳು ಹೊರಬಂದಿದೆ.

ಈ ಬಗ್ಗೆ ರಾಜಸ್ಥಾನದ ಬಿಷ್ಣೋಯಿ ಸಮುದಾಯವು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಮರುಭೂಮಿ ರಾಜ್ಯದಲ್ಲಿ ಚಿತಾಲ್ ಪ್ರಭೇದವು ಅಳಿವಿನ ಅಂಚಿನಲ್ಲಿದೆ ಎಂದು ಹೇಳಿದೆ ಮತ್ತು ಇಂತಹ ಪ್ರಜ್ಞಾಶೂನ್ಯ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದೆ. ಬಿಷ್ಣೋಯ್ ಸಮುದಾಯದ ಸದಸ್ಯರು ಹರಿಯಾಣದ ಫತೇಹಾಬಾದ್‌ನಲ್ಲಿರುವ ಮಿನಿ-ಸೆಕ್ರೆಟರಿಯೇಟ್‌ನ ಹೊರಗೆ ಧರಣಿ ಸತ್ಯಾಗ್ರಹ ನಡೆಸಿದರು ಮತ್ತು ನಿರ್ಧಾರವನ್ನು ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ವರದಿಗಳನ್ನು ತಳ್ಳಿಹಾಕಿರುವ ಮಧ್ಯಪ್ರದೇಶ ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ. ರಾಜಸ್ಥಾನದಿಂದ ಮಧ್ಯಪ್ರದೇಶಕ್ಕೆ ಯಾವುದೇ ಚಿತಾಲ್ ಅನ್ನು ತರಲಾಗಿಲ್ಲ ಏಕೆಂದರೆ ಅದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ ಎಂದು ಹೇಳಿದೆ. ಕುನೋ ರಾಷ್ಟ್ರೀಯ ಉದ್ಯಾನದಲ್ಲಿ 20,000 ಕ್ಕೂ ಹೆಚ್ಚು ಚಿತಾಲ್‌ಗಳಿವೆ, ಆದ್ದರಿಂದ ಹೊರಗಿನಿಂದ ಚಿತಾಲ್ ಅನ್ನು ತರಲಾಗುತ್ತಿದೆ ಎಂಬ ಸುದ್ದಿ ಸುಳ್ಳು ಎಂದು ಅರಣ್ಯ ಇಲಾಖೆ ಹೇಳಿದೆ.

ಭಾರತದಲ್ಲಿ ಅಳಿವಿನಂಚಿನಲ್ಲಿರುವ ಏಳು ದಶಕಗಳ ನಂತರ, ಎಂಟು ಚೀತಾಗಳನ್ನು ನಮೀಬಿಯಾದಿಂದ ದೇಶಕ್ಕೆ ತರಲಾಗಿದೆ ಮತ್ತು ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನದ ಸಂರಕ್ಷಿತ ಆವರಣಕ್ಕೆ ಪ್ರಧಾನಿ ಮೋದಿ ಬಿಡುಗಡೆ ಮಾಡಿದ್ದಾರೆ.

Published On - 7:07 pm, Wed, 21 September 22