Nepal Prime Minister: 4 ದಿನಗಳ ಭಾರತ ಪ್ರವಾಸ ಕೈಗೊಳ್ಳಲಿರುವ ನೇಪಾಳ ಪ್ರಧಾನಿ, ಉಜ್ಜಯಿನಿ, ಇಂದೋರ್​​ಗೆ ಭೇಟಿ

|

Updated on: May 27, 2023 | 2:11 PM

ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಅಕಾ 'ಪ್ರಚಂಡ' ಅವರು ಭಾರತಕ್ಕೆ ಭೇಟಿ ನೀಡಿದ್ದು, ಮುಂದಿನ 4 ದಿನಗಳ ಕಾಲ ಭಾರತದ ಅನೇಕ ಕಡೆ ಪ್ರವಾಸ ಕೈಗೊಳ್ಳಲಿದ್ದಾರೆ.

Nepal Prime Minister: 4 ದಿನಗಳ ಭಾರತ ಪ್ರವಾಸ ಕೈಗೊಳ್ಳಲಿರುವ ನೇಪಾಳ ಪ್ರಧಾನಿ, ಉಜ್ಜಯಿನಿ, ಇಂದೋರ್​​ಗೆ ಭೇಟಿ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಅಕಾ ‘ಪ್ರಚಂಡ’ ಅವರು ಭಾರತಕ್ಕೆ ಭೇಟಿ ನೀಡಿದ್ದು, ಮುಂದಿನ 4 ದಿನಗಳ ಕಾಲ ಭಾರತದ ಅನೇಕ ಕಡೆ ಪ್ರವಾಸ ಕೈಗೊಳ್ಳಲಿದ್ದಾರೆ. ಇದೀಗ ಪ್ರವಾಸದ ಭಾಗವಾಗಿ ಮಧ್ಯಪ್ರದೇಶದ ಉಜ್ಜಯಿನಿ ಮತ್ತು ಇಂದೋರ್‌ಗೆ ಭೇಟಿ ನೀಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ಪಿಎಂ ದಹಲ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನಕ್ಕೆ ಸಂಬಂಧಿಸಿದಂತೆ ಮೇ 31ರಿಂದ ಜೂನ್ 3ರವರೆಗೆ ತಮ್ಮ ಭಾರತ ಪ್ರವಾಸವನ್ನು ಪ್ರಾರಂಭಿಸಲಿದ್ದಾರೆ. ಈ ಸಮಯದಲ್ಲಿ ನೇಪಾಳದ ಪ್ರಧಾನಿ ಅವರು ಅಧ್ಯಕ್ಷ ದ್ರೌಪದಿ ಮುರ್ಮು ಮತ್ತು ಉಪಾಧ್ಯಕ್ಷ ಜಗದೀಪ್ ಧಂಖರ್ ಅವರನ್ನು ಭೇಟಿ ಮಾಡಲಿದ್ದಾರೆ. ಈಗಾಗಲೇ ಪ್ರವಾಸಕ್ಕೆ ಎಲ್ಲ ಸಿದ್ಧತೆಗಳನ್ನು ನಡೆಸಿದ್ದು, ನೇಪಾಳದ ಪ್ರಧಾನಿ ತಮ್ಮ ಭೇಟಿಯ ಭಾಗವಾಗಿ ಉಜ್ಜಯಿನಿ ಮತ್ತು ಇಂದೋರ್‌ಗೆ ಭೇಟಿ ನೀಡಲಿದ್ದಾರೆ ಎಂದು MEA ಅಧಿಕೃತ ಪ್ರಕಟಣೆ ತಿಳಿಸಿದೆ.

ನೇಪಾಳ ಪ್ರಧಾನಿ ದಹಲ್ ಅವರ ಭೇಟಿಯ ಸಂದರ್ಭದಲ್ಲಿ ಉನ್ನತ ಮಟ್ಟದ ನಿಯೋಗ ಕೂಡ ಅವರ ಜೊತೆಗಿರುತ್ತದೆ. ಭಾರತ ಮತ್ತು ನೇಪಾಳ ನಡುವಿನ ದ್ವಿಪಕ್ಷೀಯ ಸಹಭಾಗಿತ್ವದ ವಿವಿಧ ಕ್ಷೇತ್ರಗಳ ಕುರಿತು ಚರ್ಚಿಸಲು ಪ್ರಧಾನಿ ದಹಲ್ ಅವರು ಪ್ರಧಾನಿ ಮೋದಿಯವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಇತರ ಭಾರತೀಯ ನಾಯಕರು ನೇಪಾಳದ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಲಿದ್ದಾರೆ. ಈ ಭೇಟಿಯು ಭಾರತ ಮತ್ತು ನೇಪಾಳದ ನಡುವಿನ ಉನ್ನತ ಮಟ್ಟದ ವಿನಿಮಯಕ್ಕೆ ಸಂಬಂಧಿಸಿದಂತೆ ‘ನೆರೆಹೊರೆಗೆ ಮೊದಲು ಸಹಕಾರ’ ನೀತಿಯ ಒಂದು ಭಾಗವಾಗಿದೆ.

ಇದನ್ನೂ ಓದಿ:Nepal Citizenship: ಪೌರತ್ವ ಹೋರಾಟದಲ್ಲಿ ನೇಪಾಳದ ಗೃಹ ಸಚಿವರಿಗೆ ಸೋಲು, ಶಾಸಕ ಸ್ಥಾನ ರದ್ದು ಮಾಡಿದ ಸುಪ್ರೀಂ

ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಕಳೆದ ಕೆಲವು ವರ್ಷಗಳಲ್ಲಿ ಸಹಕಾರದ ಎಲ್ಲಾ ಕ್ಷೇತ್ರಗಳಲ್ಲಿ ಗಮನಾರ್ಹವಾಗಿ ಬಲಗೊಂಡಿವೆ. ಈ ಭೇಟಿಯು ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಪಾಲುದಾರಿಕೆಯನ್ನು ವೇಗಗೊಳಿಸಲು ಸಹಕಾರಿಯಾಗಿದೆ ಎಂದು ಹೇಳಲಾಗಿದೆ.