NITI Aayog Meeting: ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ಗೈರಾದರೆ ರಾಜ್ಯಕ್ಕೆ ನಷ್ಟ
ಒಂದು ವೇಳೆ ಯಾವುದಾದರೂ ರಾಜ್ಯದ ಮುಖ್ಯಮಂತ್ರಿ ಈ ಸಭೆ ಬಹಿಷ್ಕರಿಸಿದರೆ ಈ ಎಲ್ಲ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಅಂದರೆ ಮುಖ್ಯಮಂತ್ರಿಗಳು ಗೈರಾದರೆ ಅದು ರಾಜ್ಯದ ಜನರ ಮೇಲೆ ಪರಿಣಾಮ ಬೀರುತ್ತದೆ. ಈ ಹಿಂದಿನ ಸಭೆಯಲ್ಲಿ ತೆಗೆದುಕೊಂಡಿದ್ದ ತೀರ್ಮಾನಗಳ ಅನುಷ್ಠಾನದ ಮಾಹಿತಿಯೂ ಇರುವುದಿಲ್ಲ.
ದೆಹಲಿ: ನೀತಿ ಆಯೋಗದ (NITI Aayog meeting) ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ 100ಕ್ಕೂ ಅಧಿಕ ವಿಚಾರಗಳು ಚರ್ಚೆಯಾಗುತ್ತವೆ. ಒಂದು ವೇಳೆ ಸಭೆಗೆ ರಾಜ್ಯ ಸರ್ಕಾರದ ಪ್ರತಿನಿಧಿಗಳು (Chief Minister) ಹಾಜರಾಗದೇ ಇದ್ದರೆ ರಾಜ್ಯಕ್ಕೆ ಅದು ದೊಡ್ಡ ನಷ್ಟ.ಇಲ್ಲಿಯವರೆಗೆ ನಡೆದ 7 ಸಭೆಗಳಲ್ಲಿ ಹಲವಾರು ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಲಾಗಿದೆ. ಕಳೆದ ಸಭೆಯಲ್ಲಿ ಸುಮಾರು 40 ಪ್ರಮುಖ ಕ್ಷೇತ್ರಗಳನ್ನು ಗುರುತಿಸಲಾಗಿದ್ದು, ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜಂಟಿಯಾಗಿ ಕಾರ್ಯಕ್ರಮ ಅನುಷ್ಠಾನ ಮಾಡಿಕೊಂಡು ಬರುತ್ತಿವೆ. ಈ ಬಾರಿ ಸಹ ಅನೇಕ ಗುರಿಗಳನ್ನು ಇಟ್ಟುಕೊಳ್ಳಲಾಗಿದೆ. ವಿಕಸಿತ್ ಭಾರತ್ @ 2047, MSMEಗಳ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಹೂಡಿಕೆ ಉತ್ತೇಜನ, ಅನಗತ್ಯ ಖರ್ಚು ವೆಚ್ಚ ಕಡಿಮೆ ಮಾಡುವುದು, ಮಹಿಳಾ ಸಬಲೀಕರಣ, ಆರೋಗ್ಯ ಮತ್ತು ಪೋಷಕಾಂಶಗಳ ಪೂರೈಕೆ, ಕೌಶಲ್ಯ ಅಭಿವೃದ್ಧಿ ಹಾಗೂ ಪ್ರದೇಶಾಭಿವೃದ್ಧಿ ಮತ್ತು ಸಾಮಾಜಿಕ ಮೂಲಸೌಕರ್ಯಕ್ಕಾಗಿ ಗತಿ ಶಕ್ತಿ ಯೋಜನೆಯ ಸಮರ್ಪಕ ಅನುಷ್ಠಾನದ ಗುರಿಗಳು ಈ ಸಭೆಯಲ್ಲಿ ಚರ್ಚೆಯಾಗುತ್ತದೆ.
ಒಂದು ವೇಳೆ ಯಾವುದಾದರೂ ರಾಜ್ಯದ ಮುಖ್ಯಮಂತ್ರಿ ಈ ಸಭೆ ಬಹಿಷ್ಕರಿಸಿದರೆ ಈ ಎಲ್ಲ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಅಂದರೆ ಮುಖ್ಯಮಂತ್ರಿಗಳು ಗೈರಾದರೆ ಅದು ರಾಜ್ಯದ ಜನರ ಮೇಲೆ ಪರಿಣಾಮ ಬೀರುತ್ತದೆ. ಈ ಹಿಂದಿನ ಸಭೆಯಲ್ಲಿ ತೆಗೆದುಕೊಂಡಿದ್ದ ತೀರ್ಮಾನಗಳ ಅನುಷ್ಠಾನದ ಮಾಹಿತಿಯೂ ಇರುವುದಿಲ್ಲ.
ನಗರ ಯೋಜನೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಸಾಮರ್ಥ್ಯ ನಿರ್ಮಾಣ, ಕೌಶಲ್ಯ, ನಗರ ಉದ್ಯೋಗ, ನಗರ ತೆರಿಗೆ ಮತ್ತು ಆಡಳಿತ, ಕಾರ್ಮಿಕರ ವಲಸೆ, ಸಹಭಾಗಿತ್ವದ ಆಡಳಿತಕ್ಕೆ ಈ ಸಭೆಯಲ್ಲೊಂದು ರೋಡ್ ಮ್ಯಾಪ್ ನಿರ್ಮಾಣ ಮಾಡಿಕೊಳ್ಳಲಾಗುತ್ತದೆ. ಹಾಗಿದ್ದರೆ ಈ ಆ್ಯಕ್ಷನ್ ಪ್ಲಾನ್ ನಲ್ಲಿ ಇಲ್ಲಿವರಿಗೆ ಏನೆಲ್ಲಾ ಆಗಿದೆ ಎನ್ನುವುದನ್ನು ಗಮನಿಸಬೇಕು.
ಇದನ್ನೂ ಓದಿ: Viksit Bharat @2047: ನೀತಿ ಆಯೋಗದ ಎಂಟನೇ ಆಡಳಿತ ಮಂಡಳಿ ಸಭೆ ಅಧ್ಯಕ್ಷತೆ ವಹಿಸಿಕೊಳ್ಳಲಿರುವ ಪ್ರಧಾನಿ ಮೋದಿ
ನಗರಾಭಿವೃದ್ಧಿ:
ಕೇಂದ್ರಾಡಳಿತ ಪ್ರದೇಶಗಳು ಮತ್ತು 30 ರಾಜ್ಯದ 2,530 ನಗರಗಳು ಆನ್ ಲೈನ್ ಬಿಲ್ಡಿಂಗ್ ಪರ್ಮಿಟ್ ಸಿಸ್ಟಮ್ ಪಡೆದುಕೊಂಡಿವೆ. 10 ರಾಜ್ಯಗಳು ಟ್ರಾನ್ಸಿಟ್ ಓರಿಯೆಂಟೆಡ್ ಡೆವಲಪ್‌ಮೆಂಟ್ (TOD)ನೀತಿಯನ್ನು ಜಾರಿಗೆ ತಂದಿವೆ ಮತ್ತು ಇದಕ್ಕೆ ಸಂಬಂಧಿಸಿದ ಕಾರಿಡಾರ್ ಗಳನ್ನು ಗುರುತಿಸಿಕೊಂಡಿವೆ.
ರಾಷ್ಟ್ರೀಯ ನಗರ ಡಿಜಿಟಲ್ ಮಿಷನ್:
NUDM ಅಂದರೆ ಆಲ್ ಇಂಡಿಯಾ ಒಪನ್ ಸೋರ್ಸ್ ಸಾಫ್ಟ್‌ವೇರ್ ಮೂಲಕ 9 ಸೇವೆಗಳನ್ನು ಆನ್‌ಲೈನ್‌ನಲ್ಲಿ ಆರಂಭಿಸಲಾಗುತ್ತದೆ. 27 ರಾಜ್ಯಗಳು ಒಪ್ಪಿಗೆ ನೀಡಿದ್ದು ಎಲ್ಲಾ ನಗರಗಳನ್ನು 2026 ರ ವೇಳೆಗೆ ಆನ್‌ಲೈನ್ ವ್ಯಾಪ್ತಿಗೆ ತರಲಾಗುವುದು. ಸಿಟಿ ಫೈನಾನ್ಸ್ ಶ್ರೇಯಾಂಕದ ಪೋರ್ಟಲ್ ಮಾರ್ಚ್ 2023 ರಂದು ಸೇವೆಗೆ ಮುಕ್ತಗೊಳಿಸಲಾಗಿದೆ.
ಪಿಎಂ ಗತಿಶಕ್ತಿ:
PM ಗತಿ ಶಕ್ತಿ ಪೋರ್ಟಲ್ ಇಲ್ಲಿನ ಎಲ್ಲಾ ಡೇಟಾಗಳನ್ನು ಹಂಚಿಕೊಳ್ಳಲಾಗಿದೆ. ಆಪ್ಟಿಕ್ ಫೈಬರ್ ಕೇಬಲ್‌ಗಳು ಮತ್ತು 5G ಸೇವೆಗೆ ವಿಶೇಷ ಒತ್ತು ನೀಡುವುದು. ನೆಟ್ ವರ್ಕ್ ಜಾಲದ ಮತ್ತಷ್ಟು ವಿಸ್ತರಣೆ ಇಲ್ಲಿನ ಪ್ರಮುಖ ಆ್ಯಕ್ಷನ್ ಪ್ಲ್ಯಾನ್. ಬ್ರಾಡ್‌ಬ್ಯಾಂಡ್‌ನೊಂದಿಗೆ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ( 2,50,000) ಆನ್ ಲೈನ್ ಸಂಪರ್ಕವನ್ನು ಒದಗಿಸಲು ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸಲು ಹಂತ ಹಂತವಾಗಿ ಭಾರತ್‌ನೆಟ್ ಅನ್ನು ಕಾರ್ಯಗತಗೊಳಿಸಲಾಗುತ್ತಿದೆ.
ಮಾರ್ಚ್ 2023 ರ ಹೊತ್ತಿಗೆ, 6.2 ಲಕ್ಷ ಕಿಮೀ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲಾಗಿದೆ. 1.96 ಲಕ್ಷಕ್ಕೂ ಹೆಚ್ಚು GPಗಳನ್ನು ಆಪ್ಟಿಕಲ್ ಫೈಬರ್ ಕೇಬಲ್ (OFC) ಮೂಲಕ ಸಂಪರ್ಕಿಸಲಾಗಿದೆ. 1.85 ಲಕ್ಷ GP ಗಳು OFC ನಲ್ಲಿ ಸೇವೆ ಸಿದ್ಧವಾಗಿವೆ. ಅಲ್ಲದೆ, 4702 ಜಿಪಿಗಳನ್ನು ಉಪಗ್ರಹದ ಮೂಲಕ ಸಂಪರ್ಕಿಸಲಾಗಿದೆ. ಟೆಲಿಕಾಂ ಲೋಕದ ವೇಗದ ಬೆಳವಣಿಗೆಗಾಗಿ ಡಾರ್ಕ್ ಫೈಬರ್‌ಗಳು, ಡಕ್ಟ್ ಸ್ಪೇಸ್, ಮೊಬೈಲ್ ಟವರ್‌ಗಳ ಅಭಿವೃದ್ಧಿಗೆ ವೇಗ ನೀಡಲಾಗಿದೆ. 2023 ಮಾರ್ಚ್ ಅಂತ್ಯಕ್ಕೆ 1386 ನೋಂದಣಿ ನೀಡಲಾಗಿದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸರ್ಕಾರ: ಜೋಡೆತ್ತು ಸಂಪುಟಕ್ಕೆ ಸೇರಿದ ನೂತನ ಸಚಿವರು ಇವರೆ ನೋಡಿ
ಕೃಷಿ ವಿಶ್ವವಿದ್ಯಾಲಯಗಳು
ಕೃಷಿ ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ವಿಶ್ವವಿದ್ಯಾಲಯಗಳಿಗೆ NIRF ಶ್ರೇಯಾಂಕ ನೀಡಿಕೆ ಕಡ್ಡಾಯಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು NAAC ಮತ್ತು NIRFಗೆ ಸೇರಿಸುವುದರ ಜತೆಗೆ ಅವುಗಳ ಶ್ರೇಯಾಂಕ ಸುಧಾರಣೆಗೆ ನಿರಂತರ ಯತ್ನ ನಡೆದಿದೆ. NIRF ಪೋರ್ಟಲ್ ಮುಖೇನ ಕೃಷಿ ಮತ್ತು ಸಂಬಂಧಿತ ವಲಯಗಳ ಉನ್ನತ ಶಿಕ್ಷಣ ಸಂಸ್ಥೆಗಳ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. 67 ಕೃಷಿ ವಿಶ್ವವಿದ್ಯಾಲಯಗಳಲ್ಲಿ 64 ವಿವಿಗಳು NIRF ಶ್ರೇಯಾಂಕಕ್ಕೆ ಅರ್ಜಿ ಸಲ್ಲಿಸಿವೆ. ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳು NAAC ಗೆ ಸೇರುವ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ. ಕೆಲವರು ಈಗಾಗಲೇ ಸೇರಿಕೊಂಡಿದ್ದಾರೆ. ಇನ್ನು ಕೆಲವರು ನ್ಯಾಕ್ ಮಾನ್ಯತೆ ಪಡೆಯುವ ವಿವಿಧ ಹಂತಗಳಲ್ಲಿದ್ದಾರೆ.
ಕೃಷಿ ಉತ್ಪನ್ನ ರಫ್ತು
ರೈತರ ಕಲ್ಯಾಣವನ್ನು ಉತ್ತೇಜಿಸಲು ಕೃಷಿಯನ್ನು ವೈವಿಧ್ಯಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡಬೇಕಾದ ಯತ್ನಗಳ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಕೃಷಿ ಉತ್ಪನ್ನಗಳ ರಫ್ತು ಉತ್ತೇಜಿಸಲು ಎಫ್‌ಪಿಒಗಳನ್ನು ಬಳಸಿಕೊಳ್ಳಬೇಕು. ಅಲ್ಲದೆ, ಕಚ್ಚಾ ವಸ್ತುಗಳ ರಫ್ತಿಗಿಂತ ಕೃಷಿಯಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ರಫ್ತಿಗೆ ಒತ್ತು ನೀಡಬೇಕು ಎನ್ನುವುದನ್ನು ತಿಳಿಸಲಾಗಿದೆ.
ಕೃಷಿ ಮತ್ತು ಪರಿಸರ
ರಾಜ್ಯಗಳು ಕ್ಲಸ್ಟರ್ ವಿಧಾನದ ಆಧಾರದ ಮೇಲೆ ಕೃಷಿ ಪರಿಸರ ವಲಯ ಆಧಾರಿತ ಯೋಜನೆಗಳ ಮೇಲೆ ಕೇಂದ್ರೀಕರಿಸುತ್ತಿವೆ. ಮಧ್ಯಪ್ರದೇಶ, ಹರಿಯಾಣ, ಕೇರಳ, ತಮಿಳುನಾಡು, ಛತ್ತೀಸ್‌ಗಢ, ಒಡಿಶಾದಲ್ಲಿ ಇಂತಹ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. 17 ರಾಜ್ಯಗಳಲ್ಲಿ 14 ಕೃಷಿ-ಪರಿಸರ ವಲಯಗಳನ್ನು ಗುರುತಿಸಲಾಗಿದೆ. ಒಟ್ಟು 75 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿ ಮಾಡಲಾಗುವುದು. ಕೃಷಿ ಉತ್ಪನ್ನಗಳ ರಫ್ತುಗಳನ್ನು ಉತ್ತೇಜಿಸಲು ಎಫ್‌ಪಿಒಗಳ ಸ್ಥಾಪನೆ ಮಾಡಿಕೊಳ್ಳಲಾಗಿದೆ. ಅರಬ್ ದೇಶಗಳಿಗೆ ಬಣ್ಣದ ಕ್ಯಾಪ್ಸಿಕಂ, ಚೆರ್ರಿ ಟೊಮ್ಯಾಟೊ ಮತ್ತು ಬ್ರೊಕೊಲಿ ಮತ್ತು ಯುರೋಪಿಯನ್ ರಾಷ್ಟ್ರಗಳಿಗೆ ಹಸಿ ಮೆಣಸಿನಕಾಯಿ ಮತ್ತು ಬೆಂಡೆಕಾಯಿ ರಫ್ತು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಇನ್ನು ಮೌಲ್ಯವರ್ಧಿತ ಉತ್ಪನ್ನಗಳ ರಫ್ತು ದ್ವಿದಳ ಧಾನ್ಯ, ಸಂಸ್ಕರಿಸಿದ ತರಕಾರಿ, ಹಣ್ಣುಗಳು, ಕಡಲೆಕಾಯಿ ರಫ್ತಿಗೂ ಉತ್ತೇಜನ ನೀಡಲಾಗಿದೆ.
ಪ್ರತಿ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ G20 ಸಭೆ ನಡೆಸಲಾಗಿದೆ. 59 ನಗರಗಳಲ್ಲಿ G20 ಸಭೆಗಳನ್ನು ನಡೆಸಲಾಗುತ್ತಿದೆ. ಜಾಹೀರಾತು ಮತ್ತು ಫೆಸ್ಟಿವಲ್ ಮುಖೇನ ಜನರಿಗೆ ವಿವಿಧ ರಾಜ್ಯಗಳ ಪರಂಪರೆ ತಿಳಿಸಿಕೊಡಲಾಗುತ್ತಿದೆ. ಕಾಲೇಜುಗಳಲ್ಲಿ ಉಪನ್ಯಾಸ ಆಯೋಜಿಸಲಾಗಿದೆ. ವಿಶ್ವ ಪುಸ್ತಕ ಮೇಳ, ಮಣಿಪುರ ಸಂಗೈ ಉತ್ಸವ, ಗುಜರಾತ್‌ನಲ್ಲಿ ಗಾಳಿಪಟ ಉತ್ಸವ, ಸೂರಜ್‌ಕುಂಡ್ ಅಂತಾರಾಷ್ಟ್ರೀಯ ಕರಕುಶಲ ಮೇಳ, G20 ಆಹಾರ ಉತ್ಸವ, ಪುಷ್ಪ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ: NITI Aayog Meeting: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ NITI ಆಯೋಗ ಸಭೆಗೆ 7 ಮುಖ್ಯಮಂತ್ರಿಗಳು ಗೈರು
ಜಿಎಸ್ಟಿ ಸಂಗ್ರಹಣೆ
ಹಿಂದಿನ ವರ್ಷ 2022ರ ಹಣಕಾಸು ವರ್ಷದಲ್ಲಿ ಸಂಗ್ರಹಿಸಿದ ಆದಾಯಕ್ಕೆ ಹೋಲಿಸಿದರೆ ಹಣಕಾಸು ವರ್ಷ 23 ರಲ್ಲಿ ಶೇ. 50ರಷ್ಟು ಹೆಚ್ಚು ಜಿಎಸ್ ಟಿ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ.
ಶಿಕ್ಷಣ ನೀತಿ
ನ್ಯಾಶನಲ್ ಎಜುಕೇಶನ್ ಪಾಲಿಸಿ ಅನುಷ್ಠಾನಕ್ಕೂ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF) ಅಳವಡಿಸಿಕೊಳ್ಳಲು ತಿಳಿಸಲಾಗಿದೆ.
ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಭಾವಚಿತ್ರಗಳ ಜತೆಗೆ ಅವರ ಅರ್ಹತೆ ತಿಳಿಸಲಾಗುತ್ತಿದೆ. ಬಹುಭಾಷಾ ವಿಷಯ ಅಧ್ಯಯನಕ್ಕೆ ಆದ್ಯತೆ ಕಲ್ಪಿಸಿಕೊಡಲಾಗಿದೆ. ಉನ್ನತ ಶಿಕ್ಷಣ ಅಭಿವೃದ್ಧಿಗೆ ಎಬಿಸಿ (ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್) ಪೋರ್ಟಲ್ ಸ್ಥಾಪಿಸಲಾಗಿದೆ – ಸುಮಾರು 889 ವಿಶ್ವವಿದ್ಯಾನಿಲಯಗಳನ್ನು ಇದಕ್ಕೆ ಸೇರಿಸಿಕೊಳ್ಳಲಾಗಿದೆ. 81 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಗೆ ನೋಂದಾವಣೆ ಮಾಡಿಕೊಂಡಿದ್ದಾರೆ. 1553 ಸ್ವಯಂ ಕೋರ್ಸ್ ಗಳನ್ನು ಆರಂಭಿಸಲಾಗಿದ್ದು ಉದ್ಯೋಗ ಸೃಷ್ಟಿಗೆ ಇದು ನೆರವಾಗಬಲ್ಲದು ಎಂ ಸರ್ಕಾರದ ಮೂಲಗಳು ತಿಳಿಸಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Sat, 27 May 23