AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Redmi Note 15 Pro Series: 7000mAh ಬ್ಯಾಟರಿ, 50MP ಕ್ಯಾಮೆರಾ: ಕಡಿಮೆ ಬೆಲೆಗೆ ಬಿಡುಗಡೆ ಆಗಿದೆ ಹೊಸ ಪವರ್​ಫುಲ್ ಸ್ಮಾರ್ಟ್​ಫೋನ್

ರೆಡ್ಮಿಯ ಹೊಸ ಸ್ಮಾರ್ಟ್ಫೋನ್ ರೆಡ್ಮಿ ನೋಟ್ 15 Pro + ಮತ್ತು ರೆಡ್ಮಿ ನೋಟ್ 15 Pro ಬಿಡುಗಡೆ ಆಗಿದೆ. ಇದು ಶಕ್ತಿಯುತ 7,000mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿದೆ. ಕ್ವಾಲ್ಕಂ ಸ್ನಾಪ್ಡ್ರಾಗನ್ 7s Gen 4 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ 16GB LPDDR4X RAM ಮತ್ತು 512GB UFS 2.2 ವರೆಗಿನ ಸಂಗ್ರಹಣೆಯನ್ನು ಬೆಂಬಲಿಸುತ್ತದೆ.

Redmi Note 15 Pro Series: 7000mAh ಬ್ಯಾಟರಿ, 50MP ಕ್ಯಾಮೆರಾ: ಕಡಿಮೆ ಬೆಲೆಗೆ ಬಿಡುಗಡೆ ಆಗಿದೆ ಹೊಸ ಪವರ್​ಫುಲ್ ಸ್ಮಾರ್ಟ್​ಫೋನ್
Redmi Note 15 Pro Series
ಪ್ರೀತಿ ಭಟ್​, ಗುಣವಂತೆ
| Updated By: Vinay Bhat|

Updated on: Aug 22, 2025 | 5:31 PM

Share

ಬೆಂಗಳೂರು (ಆ. 22): ಚೀನಾ ಮೂಲದ ಪ್ರಸಿದ್ಧ ಶಿಯೋಮಿ (Xiaomi) ಕಂಪನಿ ತನ್ನ ಸಬ್​-ಬ್ರ್ಯಾಂಡ್ ರೆಡ್ಮಿ ಅಡಿಯಲ್ಲಿ ಹೊಸ ರೆಡ್ಮಿ ನೋಟ್ 15 Pro + ಮತ್ತು ರೆಡ್ಮಿ ನೋಟ್ 15 Pro ಬಿಡುಗಡೆ ಮಾಡಿದೆ. ಈ ಎರಡೂ ಮಧ್ಯಮ-ಬಜೆಟ್ ಫೋನ್‌ಗಳು ದೊಡ್ಡ 7,000mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಈ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ರೆಡ್ಮಿ ನೋಟ್ 14 ಸರಣಿಯನ್ನು ಬಿಡುಗಡೆ ಮಾಡಿತು. ಈಗ ಕಂಪನಿಯು ತನ್ನ ಮುಂದಿನ ಸರಣಿಯನ್ನು ತಂದಿದೆ. ಆದಾಗ್ಯೂ, ಈ ಸ್ಮಾರ್ಟ್‌ಫೋನ್ ಸರಣಿಯನ್ನು ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಬಹುದು.

ರೆಡ್ಮಿ ನೋಟ್ 15 Pro ಸರಣಿಯ ಬೆಲೆ

ರೆಡ್ಮಿ ನೋಟ್ 15 Pro+ ಅನ್ನು CNY 1899 ಅಂದರೆ ಸುಮಾರು 23,000 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ – 12GB RAM + 256GB, 12GB RAM + 512GB ಮತ್ತು 16GB RAM + 512GB. ಇದರ ಇತರ ಎರಡು ರೂಪಾಂತರಗಳ ಬೆಲೆ CNY 2099 ಅಂದರೆ ಸುಮಾರು 25,000 ಮತ್ತು CNY 2299 (28,000 ರೂ.) ಆಗಿದೆ.

ರೆಡ್ಮಿ ನೋಟ್ 15 Pro ಅನ್ನು CNY 1399 ಅಂದರೆ ಸುಮಾರು 17,000 ರೂ. ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಮೂರು ಶೇಖರಣಾ ರೂಪಾಂತರಗಳಲ್ಲಿಯೂ ಬರುತ್ತದೆ – 8GB RAM + 256GB, 12GB RAM + 256GB ಮತ್ತು 12GB RAM + 512GB.

ಇದನ್ನೂ ಓದಿ
Image
ನಿಮ್ಮ ಫೋನ್‌ನಲ್ಲಿ RAM ಹೆಚ್ಚಿಸುವ ಆ್ಯಪ್ಸ್ ಬಳಸುತ್ತೀರಾ?: ಇದೆಲ್ಲ ಸುಳ್ಳು
Image
ಪಿಕ್ಸೆಲ್ 10 vs ಪಿಕ್ಸೆಲ್ 9 ನಡುವಿನ ವ್ಯತ್ಯಾಸವೇನು?, ಯಾವುದು ಬೆಸ್ಟ್?
Image
Apple Hebbal: ಬೆಂಗಳೂರಿನಲ್ಲಿ ಆಪಲ್​ನ ಮೊದಲ ಚಿಲ್ಲರೆ ಅಂಗಡಿ
Image
ಭಾರತದಲ್ಲಿ ಪಿಕ್ಸೆಲ್ 10 ಪ್ರೊ, 10 ಪ್ರೊ XL, 10 ಪ್ರೊ ಫೋಲ್ಡ್ ಬಿಡುಗಡೆ

ರೆಡ್ಮಿ ನೋಟ್ 15 Pro+ ವೈಶಿಷ್ಟ್ಯಗಳು

ಈ ಮಧ್ಯಮ ಬಜೆಟ್ ಫೋನ್ ರೆಡ್ಮಿ 6.83-ಇಂಚಿನ ಮೈಕ್ರೋ ಕರ್ವ್ಡ್ AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ, ಇದು 1.5K ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಈ ಫೋನ್‌ನ ಡಿಸ್ಪ್ಲೇ 120Hz ರಿಫ್ರೆಶ್ ದರ ಮತ್ತು 3200 nits ವರೆಗಿನ ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ. ಇದರ ರಕ್ಷಣೆಗಾಗಿ ಶಿಯೋಮಿ ಡ್ರ್ಯಾಗನ್ ಕ್ರಿಸ್ಟಲ್ ಗ್ಲಾಸ್ ಅನ್ನು ಒದಗಿಸಲಾಗಿದೆ. ಅಲ್ಲದೆ, ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ನ ಬಲವನ್ನು ಪಡೆಯುತ್ತದೆ.

Tech Tips: ನೀವು ನಿಮ್ಮ ಫೋನ್‌ನಲ್ಲಿ RAM ಹೆಚ್ಚಿಸುವ ಆ್ಯಪ್ಸ್ ಬಳಸುತ್ತೀರಾ?: ಹಾಗಾದರೆ ಇದನ್ನು ತಿಳಿದುಕೊಳ್ಳಿ

ಈ ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 7s Gen 4 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ 16GB LPDDR4X RAM ಮತ್ತು 512GB UFS 2.2 ವರೆಗಿನ ಸಂಗ್ರಹಣೆಯನ್ನು ಬೆಂಬಲಿಸುತ್ತದೆ. ಆಂಡ್ರಾಯ್ಡ್ 15 ಆಧಾರಿತ HyperOS 2 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಶಕ್ತಿಯುತ 7,000mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿದೆ.

ರೆಡ್ಮಿ ನೋಟ್ 15 ಪ್ರೊ ಪ್ಲಸ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ಇದು 50MP ಮುಖ್ಯ, 50MP ಟೆಲಿಫೋಟೋ ಮತ್ತು 8MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾವನ್ನು ಹೊಂದಿರುತ್ತದೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32MP ಕ್ಯಾಮೆರಾವನ್ನು ಹೊಂದಿದೆ. ಸಂಪರ್ಕಕ್ಕಾಗಿ ಬ್ಲೂಟೂತ್ 5.4, NFC ನಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ರೆಡ್ಮಿ ನೋಟ್ 15 ಪ್ರೊ ವೈಶಿಷ್ಟ್ಯಗಳು

ರೆಡ್ಮಿ ನೋಟ್ 15 Pro ನ ಹಲವು ವೈಶಿಷ್ಟ್ಯಗಳು ಅದರ ಪ್ರೊ ಪ್ಲಸ್ ಮಾದರಿಯಂತೆಯೇ ಇರುತ್ತವೆ. ಇದು 7000mAh ಬ್ಯಾಟರಿಯೊಂದಿಗೆ 45W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆಯುತ್ತದೆ. ಈ ಫೋನ್ ಮೀಡಿಯಾಟೆಕ್ 7400 Ultra ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 12GB RAM ನೊಂದಿಗೆ 512GB ವರೆಗೆ ಆಂತರಿಕ ಸಂಗ್ರಹಣೆಯನ್ನು ಬೆಂಬಲಿಸುತ್ತದೆ. ಫೋನ್‌ನ ಹಿಂಭಾಗವು 50MP ಮುಖ್ಯ ಮತ್ತು 8MP ಅಲ್ಟ್ರಾ ವೈಡ್ ಕ್ಯಾಮೆರಾವನ್ನು ಹೊಂದಿರುತ್ತದೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 20MP ಕ್ಯಾಮೆರಾವನ್ನು ನೀಡಲಾಗಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!