ಪೊಲೀಸ್ ಪಂಚಾಯ್ತಿಯಿಂದ ಪರಿಹಾರ ಆಗದ ಸಮಸ್ಯೆ ಒಂದು ಎಮ್ಮೆಯಿಂದ ಆಗಿದೆ, ಈ ಎಮ್ಮೆಯ ಮಾಲೀಕ ಯಾರು?
ಒಂದು ಎಮ್ಮೆಗೆ ಎರಡು ಮಾಲೀಕ, ನಿಜವಾಗಿಯು ನಿಜವಾದ ಮಾಲೀಕ ಯಾರು? ಯಾರು ಎಂಬ ಗೊಂದಲದಲ್ಲಿದ್ದ ಪೊಲೀಸರಿಗೆ ಎಮ್ಮೆಯೇ ಪರಿಹಾರವಾಗಿದೆ. ಒಂದು ಊರಿನಿಂದ ಕಾಣೆಯಾಗಿ ಇನ್ನೊಂದು ಊರಿಗೆ ಸೇರಿಕೊಂಡು ಈ ಎಮ್ಮೆಯ ನಿಜವಾದ ಮಾಲೀಕ ಯಾರು ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅದು ಹೇಗೆ ಇಲ್ಲಿದೆ ನೋಡಿ.
ಪ್ರತಾಪಗಢ: ಪೊಲೀಸ್ ಪಂಚಾಯ್ತಿಯಲ್ಲಿ ಪರಿಹಾರ ಆಗದ ಸಮಸ್ಯೆ ಎಮ್ಮೆಯಿಂದ ಪರಿಹಾರ ಆಗಿದೆ. ಉತ್ತರ ಪ್ರದೇಶದ ಪ್ರತಾಪಗಢದ ಪೊಲೀಸರಿಗೆ ಹಲವು ದಿನಗಳಿಂದ ಈ ಪ್ರಕರಣವೊಂದು ಭಾರೀ ತಲೆನೋವುವಾಗಿತ್ತು. ಎಮ್ಮೆವೊಂದು ತನ್ನ ಮಾಲೀಕನಿಂದ ಕಾಣೆಯಾಗಿ ಮತ್ತೊಬ್ಬರ ಮನೆ ಹೋಗಿತ್ತು. ಆ ಮನೆಯಲ್ಲೂ ಕೂಡ ಇಂತಹದೇ ಒಂದು ಎಮ್ಮೆ ಇದೆ. ಆದರೆ ಆತ ಇದು ನನ್ನ ಎಮ್ಮೆ ಎಂದು ಸುಳ್ಳು ಹೇಳಿದ್ದಾರೆ. ಎಮ್ಮೆ ದೇಹ, ಎತ್ತರ ಎಲ್ಲವೂ ಕೂಡ ಒಂದೇ ತರ ಇತ್ತು. ಹಾಗಾಗಿ ಅಲ್ಲಿ ಯಾರಿಗೂ ಅದನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಸಮಸ್ಯೆಯನ್ನು ಪರಿಹಾರ ಮಾಡಲು ಪೊಲೀಸರು ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಪೊಲೀಸ್ ಪಂಚಾಯ್ತಿಯಲ್ಲಿ ಈ ಸಮಸ್ಯೆಯನ್ನು ಪರಿಹಾರ ಮಾಡಲು ಸಾಧ್ಯವಾಗದ ಕಾರಣ ಆ ಎಮ್ಮೆಯಿಂದಲ್ಲೆ ಪರಿಹಾರ ಪತ್ತೆ ಮಾಡಿದ್ದಾರೆ. ಎಮ್ಮೆಯನ್ನು ರಸ್ತೆಗೆ ಬಿಡುವ ಮೂಲಕ ಎಮ್ಮೆಯ ನಿಜವಾದ ಮಾಲೀಕ ಯಾರು? ಎಂಬುದನ್ನು ಪತ್ತೆ ಮಾಡಿದ್ದಾರೆ. ಎಮ್ಮೆಯನ್ನು ರಸ್ತೆಯಲ್ಲಿ ಇಟ್ಟ ತಕ್ಷಣ ತನ್ನ ನಿಜವಾದ ಮಾಲೀಕನ ಮನೆಗೆ ಹೋಗಿದೆ. ಅಲ್ಲಿಗೆ ಸಮಸ್ಯೆ ಮುಗಿಯಿತು.
ಜಿಲ್ಲೆಯ ಮಹೇಶ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಯ್ ಅಸ್ಕರನ್‌ಪುರ ಗ್ರಾಮದ ನಿವಾಸಿ ನಂದಲಾಲ್ ಸರೋಜ್ ಅವರಿಗೆ ಸಂಬಂಧಿಸಿದ ಎಂದು ಹೇಳಲಾಗಿದೆ. ಈ ಎಮ್ಮೆ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿತ್ತು ಮತ್ತು ಪುರೆ ಹರಿಕೇಶ್ ಗ್ರಾಮಕ್ಕೆ ದಾರಿ ತಪ್ಪಿ ಅಲ್ಲಿ ಹನುಮಾನ್ ಸರೋಜ ಎಂಬಾತ ಅದನ್ನು ಹಿಡಿದು ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾನೆ. ನಂದಲಾಲ್ ಸರೋಜ್ ಅವರು ಕಾಣೆಯಾದ ತಮ್ಮ ಎಮ್ಮೆಯನ್ನು ಮೂರು ದಿನಗಳ ಕಾಲ ಹುಡುಕುತ್ತಿದ್ದಾರೆ.
ಕೊನೆಗೆ ಈ ಎಮ್ಮೆ ಹನುಮಾನ್ ಸರೋಜ ಎಂಬುವವರ ಮನೆಯಲ್ಲಿದೆ ಎಂದು ಪತ್ತೆ ಮಾಡಲಾಗಿತ್ತು. ಆದರೆ ಹನುಮಾನ್ ಎಮ್ಮೆಯನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ. ನಂತರ ನಂದಲಾಲ್ ಮಹೇಶ್‌ಗಂಜ್ ಪೊಲೀಸ್ ಠಾಣೆಗೆ ತೆರಳಿ ಹನುಮಾನ್ ಸರೋಜ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಇಬ್ಬರನ್ನು ಕೂಡ ಪೊಲೀಸ ಠಾಣೆಗ ಕರೆದು ವಿಚಾರಣೆ ಮಾಡಿದ್ದಾರೆ. ಆದರೆ ಯಾವುದಕ್ಕೂ ಒಪ್ಪದ ಇಬ್ಬರು ಕೂಡ ಇದು ನನ್ನ ಎಮ್ಮೆ ಎಂದು ಕಿತ್ತಾಡುತ್ತಿದ್ದರು.
ನಂತರ ಮಹೇಶ್‌ಗಂಜ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಶ್ರವಣ್ ಕುಮಾರ್ ಸಿಂಗ್ ವಿವಾದವನ್ನು ಪರಿಹರಿಸಲು ಒಂದು ಮಾರ್ಗವನ್ನು ಕಂಡುಹಿಡಿದರು. ನಿರ್ಧಾರವನ್ನು ಎಮ್ಮೆಗೆ ಬಿಡಬೇಕು ಎಂದು ಹೇಳಲಾಯಿತು. ಎಮ್ಮೆಯನ್ನು ಒಂಟಿಯಾಗಿ ರಸ್ತೆಯಲ್ಲಿ ಬಿಡಲಾಗುತ್ತದೆ ಮತ್ತು ಅದು ಯಾರನ್ನು ಹಿಂಬಾಲಿಸುತ್ತದೆಯೋ ಅವರನ್ನು ಅದರ ಮಾಲೀಕ ಎಂದು ಹೇಳಿದರು.
ಇದನ್ನೂ ಓದಿ: ಹತ್ರಾಸ್ ಕಾಲ್ತುಳಿತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ‘ಭೋಲೆ ಬಾಬಾ’
ಗ್ರಾಮಸ್ಥರು ಸಹ ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದರು ಮತ್ತು ನಂದಲಾಲ್ ಮತ್ತು ಹನುಮಾನ್ ಇಬ್ಬರೂ ತಮ್ಮ ಹಳ್ಳಿಗಳಿಗೆ ಹೋಗುವ ಮಾರ್ಗದಲ್ಲಿ ವಿರುದ್ಧ ದಿಕ್ಕಿನಲ್ಲಿ ನಿಲ್ಲುವಂತೆ ಕೇಳಿಕೊಂಡರು. ನಂತರ ಪೊಲೀಸರು ಎಮ್ಮೆಯನ್ನು ಪೊಲೀಸ್ ಠಾಣೆಯಿಂದ ಬಿಟ್ಟರು. ಅದು ನಂದಲಾಲ್ ಅವರನ್ನು ಹಿಂಬಾಲಿಸಿಕೊಂಡು ರೈ ಅಸ್ಕರನ್‌ಪುರ ಗ್ರಾಮಕ್ಕೆ ಹೋಗಿದೆ. ಹನುಮಾನ್ ಸರೋಜ್ ವಿರುದ್ಧ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ