Telangana: ಮಾಟ ಮಂತ್ರ ಮಾಡುವ ದಂಪತಿಯನ್ನು ಮರಕ್ಕೆ ನೇತಾಡಿಸಿ ಬೆತ್ತದಲ್ಲಿ ಹೊಡೆದ ಗ್ರಾಮಸ್ಥರು
ವಾಮಾಚಾರ ಮಾಡುತ್ತಿದ್ದಾರೆ ಎಂಬ ಶಂಕಿಸಿ ಗ್ರಾಮಸ್ಥರು ದಂಪತಿಗಳಿಗೆ ಥಳಿಸಿ, ಮರಕ್ಕೆ ಕಟ್ಟಿ ಹಾಕಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಹೈದರಾಬಾದ್: ವಾಮಾಚಾರ ಮಾಡುತ್ತಿದ್ದಾರೆ ಎಂಬ ಶಂಕಿಸಿ ಗ್ರಾಮಸ್ಥರು ದಂಪತಿಗಳಿಗೆ ಥಳಿಸಿ, ಮರಕ್ಕೆ ಕಟ್ಟಿ ಹಾಕಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ದಂಪತಿಯನ್ನು ಮರಕ್ಕೆ ನೇತುಹಾಕಿ ಗ್ರಾಮಸ್ಥರು ಬೆತ್ತದಿಂದ ಹೊಡೆದಿದ್ದಾರೆ. ದಂಪತಿಯನ್ನು ಶ್ಯಾಮಮ್ಮ ಮತ್ತು ಯಾದಯ್ಯ ಎಂದು ಗುರುತಿಸಲಾಗಿದೆ. ಇವರನ್ನು ಜಿಲ್ಲೆಯ ಕೋಲ್ಕೂರು ಗ್ರಾಮದವರು ಎಂದು ಹೇಳಲಾಗಿದೆ.
#Horrific Terrible incident happened in Telangana, A Dalit husband and wife were severely thrashed and then hanged from a tree in Telangana’s Sangareddy district after being accused of practising witchcraft. pic.twitter.com/RI2TRrL8jt
— The Dalit Voice (@ambedkariteIND) June 19, 2023
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಅವರನ್ನು ರಕ್ಷಿಸಿದ್ದಾರೆ. ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: Telangana: MP LADS ನಿಧಿಯನ್ನು ಸ್ವಂತ ಕೆಲಸಕ್ಕೆ ಬಳಸಿಕೊಂಡ ತೆಲಂಗಾಣ ಬಿಜೆಪಿ ಸಂಸದ
ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Tue, 20 June 23