ಸೋಲಿನ ಭೀತಿ ಹಿಂಸೆಗೆ ಕಾರಣ -ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಗೆಲ್ಲುವುದು ಖಚಿತ ಎಂಬುದು ಅರಿವಾಗಿರುವ ವಿರೋಧ ಪಕ್ಷವು ಹಿಂಸಾಚಾರವನ್ನ ಹರಡುತ್ತಿದೆ ಅಂತ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಈ ಗಲಭೆಗಳ ಹಿಂದೆ ಯಾರಿದ್ದಾರೆ ಎಂಬುದನ್ನು ಜನರು ಅರ್ಥ ಮಾಡಿಕೊಂಡು, ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದಿದ್ದಾರೆ. ಟೋಲ್​ನಲ್ಲಿ ಪಿಸ್ತೂಲ್​ ತೋರಿಸಿ ದರ್ಪ: ಕಾರು ಚಾಲಕನಿಗೆ ಟೋಲ್ ಕೇಳಿದ್ದಕ್ಕೆ ಪಿಸ್ತೂಲ್ ತೋರಿಸಿ ದುಷ್ಕರ್ಮಿ ದರ್ಪ ಮೆರೆದ ಘಟನೆ ಬಿಹಾರದ ವೈಶಾಲಿ ಎಂಬಲ್ಲಿ ನಡೆದಿದೆ. BR-01, DF – 9142 ನಂಬರಿನ ಕಾರಿನಲ್ಲಿದ್ದ ವ್ಯಕ್ತಿ […]

ಸೋಲಿನ ಭೀತಿ ಹಿಂಸೆಗೆ ಕಾರಣ -ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

Updated on: Dec 19, 2019 | 8:41 AM

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಗೆಲ್ಲುವುದು ಖಚಿತ ಎಂಬುದು ಅರಿವಾಗಿರುವ ವಿರೋಧ ಪಕ್ಷವು ಹಿಂಸಾಚಾರವನ್ನ ಹರಡುತ್ತಿದೆ ಅಂತ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಈ ಗಲಭೆಗಳ ಹಿಂದೆ ಯಾರಿದ್ದಾರೆ ಎಂಬುದನ್ನು ಜನರು ಅರ್ಥ ಮಾಡಿಕೊಂಡು, ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದಿದ್ದಾರೆ.

ಟೋಲ್​ನಲ್ಲಿ ಪಿಸ್ತೂಲ್​ ತೋರಿಸಿ ದರ್ಪ:
ಕಾರು ಚಾಲಕನಿಗೆ ಟೋಲ್ ಕೇಳಿದ್ದಕ್ಕೆ ಪಿಸ್ತೂಲ್ ತೋರಿಸಿ ದುಷ್ಕರ್ಮಿ ದರ್ಪ ಮೆರೆದ ಘಟನೆ ಬಿಹಾರದ ವೈಶಾಲಿ ಎಂಬಲ್ಲಿ ನಡೆದಿದೆ. BR-01, DF – 9142 ನಂಬರಿನ ಕಾರಿನಲ್ಲಿದ್ದ ವ್ಯಕ್ತಿ ಅಟ್ಟಹಾಸ ಮೆರೆದಿದ್ದು, ಟೋಲ್ ಸಿಸಿ ಕ್ಯಾಮರಾದಲ್ಲಿ ಎಲ್ಲಾ ದೃಶ್ಯ ಸೆರೆಯಾಗಿದೆ.

42 ಆಮೆಗಳು ವಶಕ್ಕೆ:
ಪಶ್ಚಿಮಬಂಗಾಳದ ಬುರ್ದ್ವಾನ್​​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 42ಕ್ಕೂ ಹೆಚ್ಚು ಆಮೆಗಳನ್ನ ವಶಕ್ಕೆ ಪಡೆಯಲಾಗಿದೆ. ರೈಲಿನಲ್ಲಿ ಇಬ್ಬರು ಮಹಿಳೆಯರು ಆಮೆಗಳನ್ನು ಸಾಗಿಸುತ್ತಿದ್ದು ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.

₹43 ಲಕ್ಷ ನಗದು ವಶ:
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 43 ಲಕ್ಷದ 98 ಸಾವಿರ ರೂಪಾಯಿಯನ್ನ ಹರಿಯಾಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹರಿಯಾಣದ ಜಹಾಜರ್​​ನಲ್ಲಿ ಹಣ ಸಾಗಿಸುತ್ತಿದ್ದು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಪೊಲೀಸರು ಹಣ ಸೀಜ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ಹಿಮಮಳೆಯಲ್ಲಿ ಮೋಜು-ಮಸ್ತಿ:
ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಹಿಮಮಳೆ ಜೋರಾಗಿದೆ. ಹಿಮಮಳೆಯಲ್ಲಿ ಪ್ರವಾಸಿಗರು ಮಿಂದೇಳ್ತಿದ್ದು ಮಸ್ತ್ ಮಸ್ತ್ ಎಂಜಾಯ್​ ಮಾಡ್ತಿದ್ದಾರೆ. ಇನ್ನೊಂದೆಡೆ ಶೀಮ್ಲಾದಲ್ಲೂ ಹಿಮಮಳೆ ಜೋರಾಗಿದ್ದು, ಪ್ರವಾಸಿಗರು ಹಿಮದಲ್ಲಿ ಆಟವಾಡ್ತಿದ್ದಾರೆ.

ಸೈರಸ್‌ ಮಿಸ್ತ್ರಿ ಮರುನೇಮಕಕ್ಕೆ ಆದೇಶ:
ಟಾಟಾ ಸನ್ಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಸೈರಸ್‌ ಮಿಸ್ತ್ರಿ ಅವರನ್ನ ಮರು ನೇಮಕ ಮಾಡುವಂತೆ ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿ ಹೇಳಿದೆ. ಅಲ್ಲದೆ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನಟರಾಜನ್‌ ಚಂದ್ರಶೇಖರನ್‌ ಅವರ ನೇಮಕವು ಕಾನೂನುಬಾಹಿರ ಅಂತಾನೂ ತಿಳಿಸಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us