ಇಂಡಿಯನ್ ಪನೋರಮಾ ಚಿತ್ರೋತ್ಸವದಲ್ಲಿ ಈ ಬಾರಿ ಪ್ರದರ್ಶನಗೊಳ್ಳುವ ಸಿನಿಮಾಗಳಾವವು ಗೊತ್ತಾ?

| Updated By: ರಾಜೇಶ್ ದುಗ್ಗುಮನೆ

Updated on: Dec 19, 2020 | 7:04 PM

ಐಎಫ್ಎಫ್ಐನ ಇಂಡಿಯನ್ ಪನೋರಮಾ ಚಿತ್ರೋತ್ಸವ 2021ರ ಜನವರಿ 16ರಿಂದ 24ರವರೆಗೆ ಗೋವಾದಲ್ಲಿ ನಡೆಯಲಿದೆ. ಇದರಲ್ಲಿ ಸಾಂದ್ ಕೀ ಆಂಖ್, ಚಿಚೋರ್ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ ಜಾವಡೇಕರ ತಿಳಿಸಿದ್ದಾರೆ.

ಇಂಡಿಯನ್ ಪನೋರಮಾ ಚಿತ್ರೋತ್ಸವದಲ್ಲಿ ಈ ಬಾರಿ ಪ್ರದರ್ಶನಗೊಳ್ಳುವ ಸಿನಿಮಾಗಳಾವವು ಗೊತ್ತಾ?
ಪ್ರಕಾಶ ಜಾವಡೇಕರ್
Follow us on

ನವದೆಹಲಿ: ಐಎಫ್ಎಫ್ಐನ ಇಂಡಿಯನ್ ಪನೋರಮಾ ಚಿತ್ರೋತ್ಸವ 2021ರ ಜನವರಿ 16ರಿಂದ 24ರವರೆಗೆ ಗೋವಾದಲ್ಲಿ ನಡೆಯಲಿದೆ. ಇದರಲ್ಲಿ ಸಾಂದ್ ಕೀ ಆಂಖ್, ಚಿಚೋರೆ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್​ ಜಾವಡೇಕರ ತಿಳಿಸಿದ್ದಾರೆ.

ನವೆಂಬರ್ 20 ರಿಂದ 28ರವರೆಗೆ ನಡೆಯಬೇಕಿದ್ದ ಒಂಬತ್ತು ದಿನಗಳ ಈ ಚಿತ್ರೋತ್ಸವ ಕೊರೋನಾ ಕಾರಣದಿಂದ ರದ್ದಾಗಿತ್ತು. 51 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ ಸುಶಾಂತ ಸಿಂಗ್ ರಜಪೂತ್ ಅವರ ಚಿಚೋರೇ ಸೇರಿದಂತೆ 20 ನಾನ್ ಫೀಚರ್ ಸಿನೆಮಾಗಳು, ಫೀಚರ್ 23 ಸಿನೆಮಾಗಳು ಆಯ್ಕೆಗೊಂಡಿವೆ ಎಂದು ಟ್ವಿಟರ್ ಖಾತೆಯಲ್ಲಿ ಜಾವಡೇಕರ್ ಮಾಹಿತಿ ಹಂಚಿಕೊಂಡಿದ್ದಾರೆ.

ತುಷಾರ್ ಹೀರಾನಂದಾನಿ ನಿರ್ದೇಶನದ ತಾಪ್ಸಿ ಪನ್ನು ಮತ್ತು ಭೂಮಿ ಪೆಡ್ನೇಕರ್ ಅಭಿನಯದ ‘ಸಾಂದ್​ ಕೀ ಆಂಖ್’ ಈ ಉತ್ಸವದಲ್ಲಿ ಪನೋರಮಾ ವಿಭಾಗದಲ್ಲಿ ಮೊದಲು ಪ್ರದರ್ಶನವಾಗಲಿರುವ ಚಿತ್ರ. ವೆಟ್ರಿ ಮಾರನ್ರ ಅಸುರನ್, ನೀಲಾ ಮಾಧವ್ ಪಾಂಡಾ ಅವರ ‘ಕಲಿರಾ ಅತಿಟಾ’, ಗೋವಿಂದ ನಿಹಲಾನಿಯ ‘ಅಪ್​, ಅಪ್​ ಅಂಡ್ ಅಪ್​’ ಸಿನೆಮಾಗಳೂ ಪ್ರದರ್ಶನಗೊಳ್ಳಲಿವೆ.

ನಿರ್ಮಾಪಕ, ಲೇಖಕ ಜಾನ್ ಮ್ಯಾಥ್ಯೂ ಮ್ಯಾಥನ್ ನೇತೃತ್ವದ ತೀರ್ಪುಗಾರರ ತಂಡ ಈ ಚಿತ್ರಗಳನ್ನು ಆಯ್ಕೆ ಮಾಡಿದ ಚಲನಚಿತ್ರಗಳ ಪಟ್ಟಿಯಲ್ಲಿ ಬ್ರಿಡ್ಜ್ (ಅಸ್ಸಾಮಿ), ಅವಿಜಾಟ್ರಿಕ್ (ಬಂಗಾಳಿ), ಪಿಂಕಿ ಎಲ್ಲಿ (ಕನ್ನಡ), ಟ್ರಾನ್ಸ್ (ಮಲಯಾಳ) ಪ್ರವಾಸ್ (ಮರಾಠಿ), ಅಸುರನ್ (ತಮಿಳು), ಕಪ್ಪೆಲಾ (ಮಲಯಾಳಂ) ಕೂಡ ಸೇರಿವೆ. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (ಎಫ್ಎಫ್ಐ) ಮತ್ತು ನಿರ್ಮಾಪಕರ ಸಂಘದ ಶಿಫಾರಸುಗಳ ಆಧಾರದ ಮೇಲೆ ಹಾಗೂ ಚಲನಚಿತ್ರೋತ್ಸವಗಳ ನಿರ್ದೇಶನಾಲಯದ (ಡಿಎಫ್ಎಫ್) ಆಂತರಿಕ ಸಮಿತಿಯ ನೇತೃತ್ವದಲ್ಲಿ ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. 100 ಇಯರ್ಸ್ ಆಫ್ ಕ್ರೈಸೊಟೊಮ್ – ಎ ಬಯಾಗ್ರಫಿಕಲ್ ಫಿಲ್ಮ್, ಅಹಿಂಸಾ- ಗಾಂಧಿ: ದಿ ಪವರ್ ಆಫ್ ದಿ ಪವರ್‌ಲೆಸ್ ಕೂಡ ಪ್ರದರ್ಶನಗೊಳ್ಳಲಿದೆ.

 

ಎಲ್ಲ ರೀತಿಯ ಚಲನಚಿತ್ರಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರದ ಚಿಂತನೆ: ಪ್ರಕಾಶ್ ಜಾವಡೇಕರ್