ಆಪರೇಶನ್ ಅನಿಕಾ: 20 ದಿನಗಳಿಂದ NCB ಅಧಿಕಾರಿಗಳ ಗೌಪ್ಯ ಕಾರ್ಯಾಚರಣೆ ಹೀಗೆ ನಡೆದಿತ್ತು..

|

Updated on: Aug 28, 2020 | 3:23 PM

ಬೆಂಗಳೂರು:ಇಡೀ ಸ್ಯಾಂಡಲ್​ವುಡ್​ಅನ್ನೇ ತಲ್ಲಣಗೊಳಿಸಿರುವ ಡ್ರಗ್ಸ್ ಪ್ರಕರಣ, ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಡ್ರಗ್ ಡೀಲರ್​ ಅನಿಕಾಳನ್ನು ಖೆಡ್ಡಾಕ್ಕೆ ಕೆಡವಲು NCB ಯಿಂದ 20 ದಿನಗಳ ‘ಆಪರೇಷನ್ ಅನಿಕಾ’ ಕಾರ್ಯಾಚರಣೆ ನಡೆದಿತ್ತು ಎನ್ನಲಾಗಿದೆ. ಮುಂಬೈ NCB ವಲಯಾಧಿಕಾರಿ ಉಗಮ್ ಧನ್ ಚರಣ್ ಹಾಗೂ ಬೆಂಗಳೂರು NCB ವಲಯಾಧಿಕಾರಿ ಅಮಿತ್ ಗವಾಟೆ ನೇತೃತ್ವದಲ್ಲಿ ಈ ಕಾರ್ಯಾಚರಣೆ ನೆಡೆದಿದೆ. ಬೆಂಗಳೂರಿನ ಅಧಿಕಾರಿಗಳು ಜುಲೈ 31 ರಂದು ಮಾಡಿದ್ದ ಕಾರ್ಯಾಚರಣೆಯಲ್ಲಿ, ಬೆಂಗಳೂರಿನ ಫಾರಿನ್ ಪೋಸ್ಟ್ ಅಫೀಸ್​ನಲ್ಲಿ 159 ಗ್ರಾಂ MDMA ಮಾತ್ರೆಗಳನ್ನ ಸೀಜ್ […]

ಆಪರೇಶನ್ ಅನಿಕಾ: 20 ದಿನಗಳಿಂದ NCB ಅಧಿಕಾರಿಗಳ ಗೌಪ್ಯ ಕಾರ್ಯಾಚರಣೆ ಹೀಗೆ ನಡೆದಿತ್ತು..
Follow us on

ಬೆಂಗಳೂರು:ಇಡೀ ಸ್ಯಾಂಡಲ್​ವುಡ್​ಅನ್ನೇ ತಲ್ಲಣಗೊಳಿಸಿರುವ ಡ್ರಗ್ಸ್ ಪ್ರಕರಣ, ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಡ್ರಗ್ ಡೀಲರ್​ ಅನಿಕಾಳನ್ನು ಖೆಡ್ಡಾಕ್ಕೆ ಕೆಡವಲು NCB ಯಿಂದ 20 ದಿನಗಳ ‘ಆಪರೇಷನ್ ಅನಿಕಾ’ ಕಾರ್ಯಾಚರಣೆ ನಡೆದಿತ್ತು ಎನ್ನಲಾಗಿದೆ.

ಮುಂಬೈ NCB ವಲಯಾಧಿಕಾರಿ ಉಗಮ್ ಧನ್ ಚರಣ್ ಹಾಗೂ ಬೆಂಗಳೂರು NCB ವಲಯಾಧಿಕಾರಿ ಅಮಿತ್ ಗವಾಟೆ ನೇತೃತ್ವದಲ್ಲಿ ಈ ಕಾರ್ಯಾಚರಣೆ ನೆಡೆದಿದೆ. ಬೆಂಗಳೂರಿನ ಅಧಿಕಾರಿಗಳು ಜುಲೈ 31 ರಂದು ಮಾಡಿದ್ದ ಕಾರ್ಯಾಚರಣೆಯಲ್ಲಿ, ಬೆಂಗಳೂರಿನ ಫಾರಿನ್ ಪೋಸ್ಟ್ ಅಫೀಸ್​ನಲ್ಲಿ 159 ಗ್ರಾಂ MDMA ಮಾತ್ರೆಗಳನ್ನ ಸೀಜ್ ಮಾಡಿದ್ದರು.

ಇದೇ ಮಾಹಿತಿ ಆಧಾರದ ಮೇಲೆ ಆಗಸ್ಟ್ 10 ರಂದು ಮುಂಬೈನ ಎರಡು ಕಡೆ NCB ದಾಳಿ ಮಾಡಿತ್ತು. ಈ ದಾಳಿಯಲ್ಲಿ ಎಚ್.ಎ. ಚೌಧರಿ ಹಾಗೂ ಆರ್ ಭಾತ್ರಿ ಎಂಬ ದಂಪತಿಯನ್ನು ಅಧಿಕಾರಿಗಳು ಬಂಧಿಸಿದರು. ಇದೇ ದಂಪತಿ ಭಾರತದ ಬಹುತೇಕ ನಗರಗಳ ಪ್ರತಿಷ್ಠಿತರ ಪಾರ್ಟಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂಬುದು ತನಿಖೆಯಿಂದ ಬಯಲಾಗಿತ್ತು.

ಇವರ ಮಾಹಿತಿ ಅಧಾರದ ಮೇಲೆ ರೆಹಮಾನ್ ಎಂಬಾತನನ್ನ ಮುಂಬೈನಲ್ಲಿ NCB ತಂಡ ಬಂಧಿಸಿತ್ತು. ನಂತರ ಆಗಸ್ಟ್ 21 ರಂದು ಬೆಂಗಳೂರಿನ ಕಲ್ಯಾಣ ನಗರದ ರಾಯಲ್ ಸ್ಯೂಟ್ಸ್ ಅಪರಾರ್ಟ್ ಮೆಂಟ್ ನಲ್ಲಿ ಕಾರ್ಯಾಚರಣೆ ನೆಡೆಸಿದ NCB ತಂಡ ಅನೂಪ್​ನನ್ನು ಬಂಧಿಸುವುದರ ಜೊತೆಗೆ ಸಾಕಷ್ಟು ಡ್ರಗ್ಸ್ ವಶಕ್ಕೆ ಪಡೆದಿತ್ತು.

ಬಂಧಿತ ಅನೂಪ್ ಮಾಹಿತಿ ಮೇರೆಗೆ ಇಬ್ಬರು ಮಹಿಳಾ ಅಧಿಕಾರಿಗಳೊಂದಿಗೆ ತೆರಳಿದ್ದ NCB ಅಧಿಕಾರಿಗಳು, ದೊಡ್ಡ ಗುಬ್ಬಿಯಲ್ಲಿ ಡ್ರಗ್ಸ್ ಸೇವನೆ ಮಾಡಿದ್ದ ಅನಿಕಾ‌ಳನ್ನು ಬಂಧಿಸಿದರು.ಜೊತೆಗೆ ಮನೆಯಲ್ಲಿದ್ದ ಸಾಕಷ್ಟು ಡ್ರಗ್ಸ್​ನ್ನು ವಶಕ್ಕೆ ಪಡೆದಿದ್ದರು.