ಒಂದೇ ಒಂದು ಹಾವು ಮನೆಯ ಒಳಗೆ ಅಥವಾ ಹೊರಗೆ ಕಾಣಿಸಿಕೊಂಡರೆ ಹಣೆಯಲ್ಲಿ ಬೆವರಿಳಿಯುತ್ತದೆ, ಒಂದೊಮ್ಮೆ ಮನೆ ತುಂಬಾ ಹಾವೇ ತುಂಬಿಕೊಂಡರೆ ಪರಿಸ್ಥಿತಿ ಏನಾಗಬಹುದು ಒಮ್ಮೆ ಯೋಚಿಸಿ.
ಮುಜಾಫರ್ಪುರ ಜಿಲ್ಲೆಯ ಸರೈಯಾ ಬ್ಲಾಕ್‌ನ ಖೈರಾ ಗ್ರಾಮದಲ್ಲಿ ಇಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಮನೆಯೊಂದರಲ್ಲಿ 16 ನಾಗರ ಹಾವುಗಳು ಪತ್ತೆಯಾಗಿವೆ ಅಷ್ಟೇ ಅಲ್ಲದೆ 32 ಮೊಟ್ಟೆಗಳು ಕೂಡ ಇದ್ದವು. ಇದನ್ನು ನೋಡಿ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಬೆಚ್ಚಿಬಿದ್ದಿದ್ದಾರೆ.
ಸರಯ್ಯ ಬ್ಲಾಕ್‌ನ ಖೈರಾ ಗ್ರಾಮದ ನಿವಾಸಿ ಸಂಜೀತ್ ಮಹತೋ ಎಂಬುವವರ ಮನೆಯಲ್ಲಿ ಕಳೆದ ಎರಡು ದಿನಗಳಿಂದ ಹಾವುಗಳು ಕಾಣಿಸಿಕೊಳ್ಳುತ್ತಿದ್ದವು. ಮಳೆ ನೀರು ನುಗ್ಗಿದ್ದರಿಂದ ಹಾವುಗಳು ಬಂದಿವೆ ಎಂದು ಅವರು ಭಾವಿಸಿದ್ದರು. ಈ ವೇಳೆ ಹನ್ನೆರಡು ಹಾವಿನ ಮರಿಗಳನ್ನು ಹಿಡಿದು ಹೊಲಕ್ಕೆ ಬಿಡಲಾಯಿತು.
ಆದರೂ ಅವರ ಮನೆಯಲ್ಲಿ ಮತ್ತಷ್ಟು ಹಾವುಗಳು ಕಾಣಿಸಿಕೊಂಡಿವೆ. ತಕ್ಷಣ ಗ್ರಾಮದವರಿಗೆ ಮಾಹಿತಿ ನೀಡಿದ್ದಾರೆ. ಆಗ ಅವರು ಮನೆಗೆ ಬಂದು ನೋಡಿದಾಗ ಹತ್ತಾರು ಹಾವುಗಳು ಪತ್ತೆಯಾಗಿವೆ.
6 ಹಾವುಗಳನ್ನು ರಕ್ಷಿಸಲಾಗಿವೆ, ಈ ವೇಳೆ ಮನೆಯಲ್ಲಿ 32 ಹಾವಿನ ಮೊಟ್ಟೆಗಳು ಪತ್ತೆಯಾಗಿದ್ದು, ಇವುಗಳಿಂದ ಮರಿಗಳೂ ಶೀಘ್ರದಲ್ಲೇ ಹೊರಬರಲಿವೆ.
ಮತ್ತಷ್ಟು ಓದಿ: Video Viral: ಶೂ ಒಳಗೆ ಕಾಲು ಹಾಕಲು ಮುಂದಾಗುತ್ತಿದ್ದಂತೆ ಹೆಡೆ ಎತ್ತಿ ನಿಂತ ನಾಗರ ಹಾವು; ವಿಡಿಯೋ ವೈರಲ್
ರಕ್ಷಣೆ ಬಳಿಕ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಅರಣ್ಯ ಇಲಾಖೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆಯ ಡಾ.ರಾಜೀವ್ ರಂಜನ್ ಮಾತನಾಡಿ, ಖೈರಾ ಗ್ರಾಮದ ಗ್ರಾಮಸ್ಥರೊಬ್ಬರ ಮನೆಯನ್ನು ಹಾವುಗಳು ಅಡಗುದಾಣ ಮಾಡಿಕೊಂಡಿರುವ ಮಾಹಿತಿ ಲಭಿಸಿದೆ.
मुजफ्फरपुर: जब घर से निकलने लगे कोबरा सांप और उसके बच्चे, 32 अंडे भी मिले#Biharnews #Jungle pic.twitter.com/6wuIpFxf0n
— NBT Bihar (@NBTBihar) July 19, 2024
ಬಳಿಕ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಸಾಕಷ್ಟು ಇಲಿ ರಂಧ್ರಗಳಿರುವುದು ಪತ್ತೆಯಾಗಿದೆ. ಅದರಲ್ಲಿ ಹಾವುಗಳಿದ್ದವು. ವಾಸ್ತವವಾಗಿ, ನಾಗರಹಾವು ಎಂದಿಗೂ ರಂಧ್ರವನ್ನು ಮಾಡುವುದಿಲ್ಲ, ಅದು ಇಲಿಯ ರಂಧ್ರದಲ್ಲಿ ಮಾತ್ರ ಮೊಟ್ಟೆಗಳನ್ನು ಇಡುತ್ತದೆ.
ಈ ಗುಂಡಿಗಳನ್ನು ಅಗೆದಾಗ 16 ಹಾವುಗಳು ಪತ್ತೆಯಾಗಿದ್ದು, 32 ಮೊಟ್ಟೆಗಳೂ ಪತ್ತೆಯಾಗಿವೆ. ಎಲ್ಲಾ ಹಾವುಗಳು ನಾಗರ ಹಾವುಗಳಾಗಿದ್ದು, ಅವು ಮನೆಯಲ್ಲಿ ಆಶ್ರಯ ಪಡೆದಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ