ಸಂಸತ್​​ನಲ್ಲಿ ‘ಅಬ್ ಕೀ ಬಾರ್ 400 ಪಾರ್’ ಎಂದು ಹೇಳಿದ ಮಲ್ಲಿಕಾರ್ಜುನ ಖರ್ಗೆ; ಸದನದಲ್ಲಿ ನಗೆಗಡಲು

2024ರ ಲೋಕಸಭೆ ಚುನಾವಣೆ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ. ಈ ಬಗ್ಗೆ ಸ್ವತಃ ಕಾಂಗ್ರೆಸ್ ಅಧ್ಯಕ್ಷರೇ ಭವಿಷ್ಯ ನುಡಿದಿದ್ದಾರೆ. ಬಿಜೆಪಿ 400 ದಾಟುತ್ತಿದೆ ಎಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಿಕಟವರ್ತಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೊ ಶೇರ್ ಆಗುತ್ತಿದೆ.

ಸಂಸತ್​​ನಲ್ಲಿ ಅಬ್ ಕೀ ಬಾರ್ 400 ಪಾರ್ ಎಂದು ಹೇಳಿದ ಮಲ್ಲಿಕಾರ್ಜುನ ಖರ್ಗೆ; ಸದನದಲ್ಲಿ ನಗೆಗಡಲು
ಮಲ್ಲಿಕಾರ್ಜುನ ಖರ್ಗೆ

Updated on: Feb 02, 2024 | 5:12 PM

ದೆಹಲಿ ಫೆಬ್ರುವರಿ 02: ಇಂದು (ಶುಕ್ರವಾರ) ಸಂಸತ್ ಅಧಿವೇಶನದ ವೇಳೆ ಕಾಂಗ್ರೆಸ್ (Congress) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಈ ಬಾರಿ 400 ಸೀಟು ದಾಟುತ್ತಾರೆ ಎಂದು ಹೇಳಿದ್ದಾರೆ.ಇದನ್ನು ಕೇಳಿ ಆಡಳಿತಾರೂಢ ಬಿಜೆಪಿ (BJP) ಸದಸ್ಯರು ಜೋರಾಗಿ ಚಪ್ಪಾಳೆ ತಟ್ಟಿದ್ದು ಸಂಸತ್ ಭವನದ ಆವರಣ ನಗೆಗಡಲಲ್ಲಿ  ಮುಳುಗಿತು. ಸಂಸತ್ತಿನಲ್ಲಿ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಿದ್ದರು. ಈ ಭಾಷಣದ ವೇಳೆ ಖರ್ಗೆ ಅವರು “ನಿಮಗೆ ಇಷ್ಟು ಬಹುಮತವಿದೆ.ಮೊದಲು ಅವರು 330-334 ಸ್ಥಾನಗಳ ಬಗ್ಗೆ ಮಾತನಾಡುತ್ತಿದ್ದರು, ಈಗ ಅದು 400 ದಾಟುತ್ತಿದೆ. ಅರೇ 400 ದಾಟಲಿದೆ, ಆರಿಸಿ ಅವರೆಲ್ಲ ಬರಲಿ ಎಂದು ಹೇಳಿದ್ದಾರೆ.

ಖರ್ಗೆ ಈ ರೀತಿ ಹೇಳುವುದನ್ನು ಕೇಳಿ ಸಭಾಪತಿ ಜಗದೀಪ್ ಧನ್ಖರ್ ಕೂಡಾ ನಕ್ಕಿದ್ದಾರೆ. ವಿಶೇಷವೆಂದರೆ ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಖರ್ಗೆಯವರ ‘400 ಪಾರ್’ ಕೇಳಿದ ನಂತರ ಪ್ರಧಾನಿ ಮೋದಿ ನಗಲು ಆರಂಭಿಸಿದರು. ಈ ವೇಳೆ ಆಡಳಿತ ಪಕ್ಷದ ಸಂಸದರು ಮೇಜು ಕುಟ್ಟಿ, ಚಪ್ಪಾಳೆ ತಟ್ಟಿ ಘೋಷಣೆ ಕೂಗಿದರು.

2024ರ ಲೋಕಸಭೆ ಚುನಾವಣೆ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ. ಈ ಬಗ್ಗೆ ಸ್ವತಃ ಕಾಂಗ್ರೆಸ್ ಅಧ್ಯಕ್ಷರೇ ಭವಿಷ್ಯ ನುಡಿದಿದ್ದಾರೆ. ಬಿಜೆಪಿ 400 ದಾಟುತ್ತಿದೆ ಎಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಿಕಟವರ್ತಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಖರ್ಗೆಯವರ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡವರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯ ಅಧಿಕೃತ ಎಕ್ಸ್ ಹ್ಯಾಂಡಲ್ ಹಂಚಿಕೊಂಡಿರುವ ಕ್ಲಿಪ್‌ನಲ್ಲಿ, “ನಿಮಗೆ ಬಹುಮತವಿದೆ, 330-334 ಸ್ಥಾನಗಳನ್ನು ಹೊಂದಿದ್ದೀರಿ. ಈ ಬಾರಿ ಅದು 400 ಕ್ಕಿಂತ ಹೆಚ್ಚಲಿದೆ” ಎಂದು ಖರ್ಗೆ ಹೇಳಿದ್ದಾರೆ. ಬಿಜೆಪಿ 2024 ರ ಲೋಕಸಭೆ ಚುನಾವಣೆಯಲ್ಲಿ ತನ್ನ ಅತ್ಯಧಿಕ ಸ್ಥಾನವನ್ನು ಸಾಧಿಸುವ ಗುರಿಯನ್ನು ಹೊಂದಿದ್ದು, 2019 ರ 303 ಸ್ಥಾನಗಳ ಸಾಧನೆಯನ್ನು ಮೀರಿಸುತ್ತದೆ. ಜೆಪಿ ನಡ್ಡಾ ನೇತೃತ್ವದ ಪಕ್ಷವು ಈಗಾಗಲೇ ಎನ್‌ಡಿಎ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸುವ ಥೀಮ್ ಸಾಂಗ್‌ನೊಂದಿಗೆ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದೆ.

“ಸಪ್ನೆ ನಹೀ ಹಕೀಕತ್ ಬುನ್ತೇ ಹೈ, ತಭಿ ತೋ ಸಬ್ ಮೋದಿ ಕೋ ಚುನ್ತೇ ಹೈ (ನಾವು ಕನಸುಗಳನ್ನು ಅಲ್ಲ  ವಾಸ್ತವವನ್ನು ಹೆಣೆಯುತ್ತೇವೆ ಅದಕ್ಕಾಗಿಯೇ ಜನರು ಮೋದಿಯನ್ನು ಆಯ್ಕೆ ಮಾಡುತ್ತಾರೆ)” ಹಾಡನ್ನು ಜನವರಿ 26 ರಂದು ನಡ್ಡಾ ಅವರು ಪ್ರಧಾನಿಯವರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಿದರು.

ಇದನ್ನೂ ಓದಿ: Gyanvapi Case: ಜ್ಞಾನವಾಪಿ ಆವರಣದಲ್ಲಿ ಹಿಂದೂಗಳ ಪೂಜೆಗೆ ಸದ್ಯಕ್ಕಿಲ್ಲ ನಿರ್ಬಂಧ: ಅಲಹಾಬಾದ್ ಹೈಕೋರ್ಟ್​

370 ನೇ ವಿಧಿಯನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ರಾಮಮಂದಿರವನ್ನು ಸಾರ್ವಜನಿಕರಿಗೆ ತೆರೆಯಲಾಗಿದೆ, ಮುಂಬರುವ ಚುನಾವಣೆಗಳು ಪ್ರಧಾನಿ ಮೋದಿಯನ್ನು ಮೂರನೇ ಬಾರಿಗೆ ಅಧಿಕಾರಕ್ಕೆ ತರುವುದಲ್ಲದೆ, ಲೋಕಸಭೆಯಲ್ಲಿ ತನ್ನ ಹಿಡಿತವನ್ನು ಬಲಪಡಿಸುತ್ತದೆ ಎಂದು ಪಕ್ಷವು ಆಶಿಸುತ್ತಿದೆ.

2019 ರಲ್ಲಿ, ಎನ್‌ಡಿಎ ಆಡಳಿತಕ್ಕೆ ಎರಡನೇ ಅವಧಿಗೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್ (ಮತ್ತೊಮ್ಮೆ, ಮೋದಿ ಸರ್ಕಾರ) ಎಂಬ ಘೋಷಣೆಯನ್ನು ರೂಪಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 4:44 pm, Fri, 2 February 24