ಹಿಮಂತ, ಮಿಲಿಂದ್‌ರಂತಹವರು ಕಾಂಗ್ರೆಸ್ ತೊರೆದಿದ್ದನ್ನು ನಾನು ಒಪ್ಪುವೆ: ರಾಹುಲ್ ಗಾಂಧಿ

Rahul Gandhi: ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ  'ಡಿಜಿಟಲ್ ಮೀಡಿಯಾ ವಾರಿಯರ್ಸ್' ಜೊತೆಗಿನ ಸಂವಾದದಲ್ಲಿ ರಾಹುಲ್ ಗಾಂಧಿಯವರಲ್ಲಿ ಕಾಂಗ್ರೆಸ್ ಪಕ್ಷದ 'ಪತನ' ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ )ಬಗ್ಗೆ ಕೇಳಲಾಯಿತು. ಅದಕ್ಕೆ ಕಾಂಗ್ರೆಸ್ ನಾಯಕ ನೀಡಿದ ಉತ್ತರ ಹೀಗಿತ್ತು...

ಹಿಮಂತ, ಮಿಲಿಂದ್‌ರಂತಹವರು ಕಾಂಗ್ರೆಸ್ ತೊರೆದಿದ್ದನ್ನು ನಾನು ಒಪ್ಪುವೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
|

Updated on: Feb 02, 2024 | 5:36 PM

ದೆಹಲಿ ಫೆಬ್ರುವರಿ 02: ಹಿಮಂತ ಮತ್ತು ಮಿಲಿಂದ್‌ರಂತಹವರು ಕಾಂಗ್ರೆಸ್ ತೊರೆಯುವುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದು ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಶುಕ್ರವಾರ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯ (Bharat Jodo Nyay Yatra) ಸಂದರ್ಭದಲ್ಲಿ ಪಶ್ಚಿಮ ಬಂಗಾಳದ  ‘ಡಿಜಿಟಲ್ ಮೀಡಿಯಾ ವಾರಿಯರ್ಸ್’ ಜೊತೆಗಿನ ಸಂವಾದದಲ್ಲಿ ರಾಹುಲ್ ಗಾಂಧಿಯವರಲ್ಲಿ ಕಾಂಗ್ರೆಸ್ ಪಕ್ಷದ ‘ಪತನ’ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himanta Biswa Sarma )ಬಗ್ಗೆ ಕೇಳಲಾಯಿತು. ಶರ್ಮಾ ಅವರು ಕಾಂಗ್ರೆಸ್ ಜೊತೆಗಿದ್ದರು. “ಹಿಮಂತ ಮತ್ತು ಮಿಲಿಂದ್ ಅವರಂತಹ ಜನರು ಪಕ್ಷ ತೊರೆಯಬೇಕಿತ್ತ.ನಾನು ಅದಕ್ಕೆ ಸಂಪೂರ್ಣವಾಗಿ ಒಪ್ಪುತ್ತೇನೆ. ಹಿಮಂತ ಅವರು ಕಾಂಗ್ರೆಸ್‌ನ ರಾಜಕೀಯವಲ್ಲದ ನಿರ್ದಿಷ್ಟ ರೀತಿಯ ರಾಜಕೀಯವನ್ನು ಪ್ರತಿನಿಧಿಸುತ್ತಾರೆ.ಮುಸ್ಲಿಮರ ಬಗ್ಗೆ ಹಿಮಂತ ಹೇಳುವ ಕೆಲವು ಹೇಳಿಕೆಗಳನ್ನು ನೀವು ನೋಡಿದ್ದೀರಾ? ನಾನು ರಕ್ಷಿಸಲು ಬಯಸುವ ಕೆಲವು ಮೌಲ್ಯಗಳಿವೆ ಎಂದು ರಾಹುಲ್ ಗಾಂಧಿ ವಿಡಿಯೊದಲ್ಲಿ ಹೇಳಿದ್ದಾರೆ.

ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಅಸ್ಸಾಂ ಮೂಲಕ ಹಾದುಹೋದಾಗ ರಾಹುಲ್ ಗಾಂಧಿ ಮತ್ತು ಹಿಮಂತ ಬಿಸ್ವಾ ಶರ್ಮಾ ನಡುವೆ ವಾಗ್ದಾಳಿ ನಡೆದಿದೆ. ಜನವರಿ 22 ರಂದು ಅಸ್ಸಾಂನಲ್ಲಿ ಅಶಾಂತಿಯನ್ನು ಪ್ರಚೋದಿಸಲು ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂದು ಹಿಮಂತ ಆರೋಪಿಸಿದರು, ಆದರೆ ರಾಹುಲ್ ಹಿಮಂತ ಅವರನ್ನು ಭಾರತದ ‘ಅತ್ಯಂತ ಭ್ರಷ್ಟ ಸಿಎಂ’ ಎಂದು ಕರೆದರು.

ಹಿಮಂತ ಅವರ ಹೇಳಿಕೆಯಲ್ಲೇ ಮಿಲಿಂದ್ ದಿಯೋರಾ ಅವರನ್ನು ರಾಹುಲ್ ಉಲ್ಲೇಖಿಸಿದ್ದಾರೆ. ಮಿಲಿಂದ್ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದು, ಕಾಂಗ್ರೆಸ್ ಮತ್ತು ಉದ್ಧವ್ ಅವರ ಶಿವಸೇನಾ, ಶರದ್ ಪವಾರ್ ಅವರ ಎನ್‌ಸಿಪಿ ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿರುವ ಮಹಾರಾಷ್ಟ್ರದಲ್ಲಿ ಇಂಡಿಯಾ ಸೀಟು ಹಂಚಿಕೆಯ ನಡುವಿನ ಭಿನ್ನಾಭಿಪ್ರಾಯದ ನಂತರ ಪಕ್ಷವನ್ನು ತೊರೆದು ಮಿಲಿಂದ್ ದಿಯೋರಾ ಏಕನಾಥ್ ಶಿಂಧೆ ಅವರ ಶಿವಸೇನಾ ಬಣವನ್ನು ಸೇರಿಕೊಂಡರು. ಮಿಲಿಂದ್ ದಿಯೋರಾ ಅವರು ಮುಂಬೈ ದಕ್ಷಿಣದಿಂದ ಸ್ಪರ್ಧಿಸಲು ಬಯಸಿದ ಸ್ಥಾನವು ಉದ್ಧವ್ ನೇತೃತ್ವದ ಶಿವಸೇನಾ ಹೋಗುತ್ತದೆ, ಏಕೆಂದರೆ ಹಾಲಿ ಸಂಸದರು ಅಲ್ಲಿದ್ದಾರೆ.

ಬಾಬಾ ಸಿದ್ದಿಕ್ ಅವರ ಊಹಾಪೋಹದ ನಿರ್ಗಮನದೊಂದಿಗೆ ಮಹಾರಾಷ್ಟ್ರ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗುವ ಸಮಯದಲ್ಲಿ ಮಿಲಿಂದ್ ದಿಯೋರಾ ಕುರಿತು ರಾಹುಲ್ ಗಾಂಧಿಯವರ ಹೇಳಿಕೆ ಬಂದಿದೆ. ಅದ್ದೂರಿ ಇಫ್ತಾರ್ ಕೂಟಗಳಿಗೆ ಬಾಲಿವುಡ್ ವಲಯದಲ್ಲಿ ವಿಶೇಷವಾಗಿ ಹೆಸರುವಾಸಿಯಾಗಿರುವ ಬಾಬಾ ಸಿದ್ದಿಕ್ ನಾನು ಇನ್ನೂ ಕಾಂಗ್ರೆಸ್‌ನಲ್ಲಿದ್ದೇನೆ. ಆದರೆ ಯಾರೂ ಭವಿಷ್ಯವನ್ನು ನೋಡಿಲ್ಲ ಎಂದು ಹೇಳಿದರು.

ಒತ್ತಡವಿಲ್ಲದೆ ನಿತೀಶ್ ಕುಮಾರ್ ಎನ್‌ಡಿಎಗೆ ಮರಳಲಿಲ್ಲ

ಜನವರಿ 31 ರಂದು ಇಡಿ ಹೇಮಂತ್ ಸೊರೆನ್ ಅವರನ್ನು ಬಂಧಿಸುವ ಮೊದಲು ರಾಹುಲ್ ಗಾಂಧಿಯವರ ಸಂವಾದ ನಡೆಯಿತು. “ಇಂದು ಲಾಲು ಜಿಯನ್ನು ಪ್ರಶ್ನಿಸಲಾಗಿದೆ, ತೇಜಸ್ವಿ ಅವರನ್ನು ವಿಚಾರಣೆ ಮಾಡಲಾಗಿದೆ, ಹೇಮಂತ್ ಸೊರೆನ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ, ಕೇಜ್ರಿವಾಲ್‌ಗೆ ಮತ್ತೊಂದು ಸಮನ್ಸ್ ನೀಡಲಾಗಿದೆ. ನನ್ನನ್ನು 55 ಗಂಟೆಗಳ ಕಾಲ ವಿಚಾರಣೆ ಮಾಡಲಾಗಿದೆನಿತೀಶ್ ಜೀ ಯಾವುದೇ ಒತ್ತಡವಿಲ್ಲದೆ ಇಂಡಿಯಾ ಮೈತ್ರಿಕೂಟ ತೊರೆದರು ಎಂದು ನೀವು ಯೋಚಿಸುತ್ತೀರಾ? ಎಂದು ರಾಹುಲ್ ಕೇಳಿದ್ದಾರೆ.

ಇದನ್ನೂ ಓದಿ:ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ್ ಯಾತ್ರೆ ಹೋದಲ್ಲೆಲ್ಲಾ ಮಮತಾ ಬ್ಯಾನರ್ಜಿ ಪಾದಯಾತ್ರೆ

ಮಮತಾ ಬ್ಯಾನರ್ಜಿ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು?

“ಕಾಂಗ್ರೆಸ್ ಅಥವಾ ಮಮತಾ ಬ್ಯಾನರ್ಜಿ ಮೈತ್ರಿ ಮುಗಿದಿದೆ ಎಂದು ಹೇಳಿಲ್ಲ. ಮಮತಾ ಅವರು ಮೈತ್ರಿಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಮಾತುಕತೆ ನಡೆಯುತ್ತಿದೆ. ಅದನ್ನು ಪರಿಹರಿಸಲಾಗುವುದು” ಎಂದು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಎದುರಿಸುತ್ತಿರುವ ಸೀಟು ಹಂಚಿಕೆ ಅಡೆತಡೆಗಳ ಕುರಿತು ರಾಹುಲ್ ಗಾಂಧಿ ಹೇಳಿದರು. ಏತನ್ಮಧ್ಯೆ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?