‘ಸ್ವತಂತ್ರ ಭಾರತದಲ್ಲಿ ನಡೆಯಲಿರುವ ಅತೀದೊಡ್ಡ ವಿನಾಶ’: ಅತಿಕ್ರಮಣ ವಿರೋಧಿ ಅಭಿಯಾನ ವಿರುದ್ಧ ಕೇಜ್ರಿವಾಲ್ ಆಕ್ರೋಶ

| Updated By: ರಶ್ಮಿ ಕಲ್ಲಕಟ್ಟ

Updated on: May 16, 2022 | 3:07 PM

ಕಳೆದ ಕೆಲವು ವಾರಗಳಿಂದ ದೆಹಲಿಯಲ್ಲಿ ಬಿಜೆಪಿ ಆಡಳಿತದ ನಾಗರಿಕ ಸಂಸ್ಥೆ, ಕೆಲವು ಭಾಗಗಳಲ್ಲಿ ಬುಲ್ಡೋಜರ್‌ಗಳಿಂದ ತೆರವು ಕಾರ್ಯಾಚರಣೆ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದು ಮುಂದಿನ ತಿಂಗಳುಗಳವರೆಗೆ ಮುಂದುವರಿಯುತ್ತದೆ ಎಂದು ಹೇಳಲಾಗಿದೆ.

ಸ್ವತಂತ್ರ ಭಾರತದಲ್ಲಿ ನಡೆಯಲಿರುವ ಅತೀದೊಡ್ಡ ವಿನಾಶ’: ಅತಿಕ್ರಮಣ ವಿರೋಧಿ ಅಭಿಯಾನ ವಿರುದ್ಧ ಕೇಜ್ರಿವಾಲ್ ಆಕ್ರೋಶ
ಅರವಿಂದ ಕೇಜ್ರಿವಾಲ್
Follow us on

ದೆಹಲಿಯಲ್ಲಿ ನಾಗರಿಕ ಸಂಸ್ಥೆಯಿಂದ ಅತಿಕ್ರಮಣ ವಿರೋಧಿ ಅಭಿಯಾನದ (anti-encroachment drive) ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅರವಿಂದ ಕೇಜ್ರಿವಾಲ್ (Arvind Kejriwal) ದೆಹಲಿಯಲ್ಲಿ ಬಿಜೆಪಿ (BJP) ಜನರ ಮನೆ ಮತ್ತು ಅಂಗಡಿಗಳನ್ನು ಧ್ವಂಸ ಮಾಡುತ್ತಿರುವ ರೀತಿ ಸರಿಯಲ್ಲ ಎಂದು ಹೇಳಿದ್ದಾರೆ. ಬುಲ್ಡೋಜರ್‌ಗಳು 63 ಲಕ್ಷ ಜನರ ಅಂಗಡಿಗಳು ಅಥವಾ ಮನೆಗಳ ಮೇಲೆ ಓಡಬಹುದು. ಇದು ಸ್ವತಂತ್ರ ಭಾರತದ ಅತಿ ದೊಡ್ಡ ವಿನಾಶವಾಗಲಿದೆ ಎಂದು ವಿಡಿಯೊ ಭಾಷಣದಲ್ಲಿ ಕೇಜ್ರಿವಾಲ್ ಹೇಳಿದ್ದಾರೆ. ಪ್ರತಿಭಟನೆಗಳ ನಡುವೆ ದೆಹಲಿಯಲ್ಲಿ ಬುಲ್ಡೋಜರ್‌ಗಳನ್ನು ಬಳಸಿ ತೆರವು ಕಾರ್ಯಾಚರಣೆ ನಡೆಸುತ್ತಿರುವ ನಾಗರಿಕ ಸಂಸ್ಥೆ ಮತ್ತು ದೆಹಲಿಯಲ್ಲಿನ ಆಮ್ ಆದ್ಮಿ ಪಕ್ಷದ ಸರ್ಕಾರ ನಡುವೆ ವಾಕ್ಸಮರ ನಡೆಯುತ್ತಿದೆ. ಕಳೆದ ವಾರ, ಶಾಹೀನ್ ಬಾಗ್‌ನಲ್ಲಿ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲು ನಾಗರಿಕ ಸಂಸ್ಥೆ ಬುಲ್ಡೋಜರ್‌ಗಳೊಂದಿಗೆ ತಲುಪಿದಾಗ ಪ್ರತಿಭಟನೆ ತೀವ್ರವಾಗಿತ್ತು. ನಂತರದ ದಿನಗಳಲ್ಲಿ ನ್ಯೂ ಫ್ರೆಂಡ್ಸ್ ಕಾಲೋನಿ, ದ್ವಾರಕಾ ಸೇರಿದಂತೆ ಹಲವು ಕಡೆ ಇದೇ ರೀತಿಯ ದೃಶ್ಯಗಳು ಕಂಡು ಬಂದವು. ಕಳೆದ ಕೆಲವು ವಾರಗಳಿಂದ ದೆಹಲಿಯಲ್ಲಿ ಬಿಜೆಪಿ ಆಡಳಿತದ ನಾಗರಿಕ ಸಂಸ್ಥೆ, ಕೆಲವು ಭಾಗಗಳಲ್ಲಿ ಬುಲ್ಡೋಜರ್‌ಗಳಿಂದ ತೆರವು ಕಾರ್ಯಾಚರಣೆ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದು ಮುಂದಿನ ತಿಂಗಳುಗಳವರೆಗೆ ಮುಂದುವರಿಯುತ್ತದೆ ಎಂದು ಹೇಳಲಾಗಿದೆ. ನಗರದಲ್ಲಿ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳನ್ನು ತೆಗೆಯುತ್ತಿದ್ದೇವೆ ಎಂದು ಅವರು ಹೇಳುತ್ತಿದ್ದಾರೆ.” ಅತಿಕ್ರಮಣ ನಡೆಯುವುದು ಬೇಡ ಎಂದು ನಾವು ಬಯಸುತ್ತೇವೆ. ಆದರೆ, ಕಳೆದ ವರ್ಷದಿಂದ ನಗರದಲ್ಲಿ ಅಭಿವೃದ್ಧಿ ಆಗಿರುವ ರೀತಿ ನೋಡಿದರೆ ಶೇ.80ಕ್ಕೂ ಹೆಚ್ಚು ಒತ್ತುವರಿಯಾಗಿದೆ ಎಂದು ಹೇಳಬಹುದು” ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಈ ವಿಷಯದ ಕುರಿತು ಆಮ್ ಆದ್ಮಿ ಪಕ್ಷದ ಶಾಸಕರೊಂದಿಗಿನ ಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್ ದೆಹಲಿಯ ವಿವಿಧ ಭಾಗಗಳಲ್ಲಿ ಬಿಜೆಪಿ ನೇತೃತ್ವದ ಮುನ್ಸಿಪಲ್ ಕಾರ್ಪೊರೇಷನ್‌ಗಳು ನಡೆಸುತ್ತಿರುವ ಅತಿಕ್ರಮಣ ವಿರೋಧಿ ಅಭಿಯಾನವನ್ನು ವಿರೋಧಿಸಿ ಜೈಲಿಗೆ ಹೋಗಲು ಸಿದ್ಧರಾಗಿರಬೇಕು ಎಂದು ಹೇಳಿದ್ದಾರೆ. ಅವರು ಬುಲ್ಡೋಜರ್‌ಗಳೊಂದಿಗೆ ಕಾಲೋನಿಗಳನ್ನು ತಲುಪಿ ಯಾವುದೇ ಅಂಗಡಿ ಮತ್ತು ಮನೆಯನ್ನು ಧ್ವಂಸ ಮಾಡುತ್ತಿದ್ದಾರೆ, ಕಟ್ಟಡವು ಕಾನೂನುಬಾಹಿರವಲ್ಲ ಎಂದು ಸಾಬೀತುಪಡಿಸಲು ಜನರು ಕಾಗದಗಳನ್ನು ತೋರಿಸಿದರೂ, ಅವರು ಅವುಗಳನ್ನು ಪರಿಶೀಲಿಸುವುದಿಲ್ಲ.

ದೆಹಲಿಯನ್ನು ಯೋಜಿತ ರೀತಿಯಲ್ಲಿ ಮಾಡಿಲ್ಲ. ದೆಹಲಿಯ ಶೇಕಡಾ 80 ಕ್ಕಿಂತ ಹೆಚ್ಚು ಪ್ರದೇಶವನ್ನು ಅಕ್ರಮ ಮತ್ತು ಅತಿಕ್ರಮಣ ಎಂದು ಕರೆಯಬಹುದು. ಅಂದರೆ ನೀವು ಶೇಕಡಾ 80 ರಷ್ಟು ದೆಹಲಿಯನ್ನು ನಾಶಪಡಿಸುತ್ತೀರಾ?. ಅತಿಕ್ರಮಣ ವಿರೋಧಿ ಆಂದೋಲನ ನಡೆಸುತ್ತಿರುವ ರೀತಿಯನ್ನು ಪಕ್ಷ ವಿರೋಧಿಸುತ್ತಿದೆ. ಸುಮಾರು 50 ಲಕ್ಷ ಜನರು ಅನಧಿಕೃತ ಕಾಲೋನಿಗಳಲ್ಲಿದ್ದಾರೆ, 10 ಲಕ್ಷ ಜನರು ‘ಜುಗ್ಗಿ’ಗಳಲ್ಲಿದ್ದಾರೆ. ಬಾಲ್ಕನಿಗಳನ್ನು ಮಾರ್ಪಡಿಸಿದ ಅಥವಾ ಮೂಲ ನಕ್ಷೆಗಳಿಗೆ ಹೊಂದಿಕೆಯಾಗದ ಏನಾದರೂ ಬದಲಾವಣೆ ಮಾಡಿದ ಲಕ್ಷಾಂತರ ಜನರು ಇದ್ದಾರೆ.

ಆಮ್ ಆದ್ಮಿ ಪಕ್ಷವು ಅತಿಕ್ರಮಣಕ್ಕೆ ವಿರುದ್ಧವಾಗಿದೆ ಮತ್ತು ದೆಹಲಿ ಸುಂದರವಾಗಿ ಕಾಣಬೇಕೆಂದು ಬಯಸುತ್ತದೆ. ಕಳೆದ 15 ವರ್ಷಗಳಲ್ಲಿ ಬಿಜೆಪಿ ಎಂಸಿಡಿಯಲ್ಲಿ ಅಧಿಕಾರದಲ್ಲಿದ್ದು, ಹಣ ತೆಗೆದುಕೊಂಡಿತು. ಅವರ ಅಧಿಕಾರಾವಧಿ ಮೇ 18 ಕ್ಕೆ ಕೊನೆಗೊಳ್ಳಲಿದೆ. ಅಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಂವಿಧಾನಿಕ ಶಕ್ತಿ ನಿಮಗೆ ಇದೆಯೇ. ಚುನಾವಣೆ ನಡೆಯಲಿ ಮತ್ತು ಆ ಪಕ್ಷವು ನಿರ್ಧಾರ ತೆಗೆದುಕೊಳ್ಳಲಿ. ಎಮ್‌ಸಿಡಿಯಲ್ಲಿ ಎಎಪಿ ಅಧಿಕಾರಕ್ಕೆ ಬರಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಎಎಪಿ ಅತಿಕ್ರಮಣ ಸಮಸ್ಯೆಯನ್ನು ಪರಿಹರಿಸುತ್ತದೆ. ಅನಧಿಕೃತಕಾಲೋನಿಗಳಲ್ಲಿ ವಾಸಿಸುವ ಜನರು ಮಾಲೀಕತ್ವದ ಹಕ್ಕುಗಳನ್ನು ಪಡೆಯುತ್ತಾರೆ ಎಂದು ಕೇಜ್ರಿವಾಲ್ ಜನರಿಗೆ ಭರವಸೆ ನೀಡಿದ್ದಾರೆ.

Published On - 2:44 pm, Mon, 16 May 22