Satta Sammelan: ಪ್ರಧಾನಿ ಮೋದಿಗೆ ಫಂಡಿಂಗ್ ಮಾಡುವವರೇ ನಮಗೂ ಹಣ ಕೊಡ್ತಾರೆ: ಪ್ರಶಾಂತ್ ಕಿಶೋರ್

ಪ್ರಧಾನಿ ಮೋದಿಯವರಿಗೆ ಹಣ ನೀಡುವವರೇ ನಮಗೂ ಹಣಕಾಸು ಒದಗಿಸುತ್ತಾರೆ ಎಂದು ಜನಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್(Prashant Kishor) ಹೇಳಿದ್ದಾರೆ. ಟಿವಿ9 ಭಾರತ್​ವರ್ಷ್​ ಬಿಹಾರದ ಪಾಟ್ನಾದಲ್ಲಿ ಆಯೋಜಿಸಿರುವ ‘ಸತ್ತಾ ಸಮ್ಮೇಳನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜನಸೂರಜ್ ಪಕ್ಷದ ಹಣಕಾಸಿನ ಮೂಲದ ಬಗ್ಗೆ ಕೇಳಿದಾಗ ಬುದ್ಧಿವಂತಿಕೆಯಿಂದ ಉತ್ತರಿಸಿದ್ದಾರೆ. ತಮ್ಮ ಉತ್ತರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸಿದ್ದಾರೆ.

Satta Sammelan: ಪ್ರಧಾನಿ ಮೋದಿಗೆ ಫಂಡಿಂಗ್ ಮಾಡುವವರೇ ನಮಗೂ ಹಣ ಕೊಡ್ತಾರೆ: ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್

Updated on: Jul 11, 2025 | 2:03 PM

ಪಾಟ್ನಾ, ಜುಲೈ 11: ಪ್ರಧಾನಿ ಮೋದಿಯವರಿಗೆ ಹಣ ನೀಡುವವರೇ ನಮಗೂ ಹಣಕಾಸು ಒದಗಿಸುತ್ತಾರೆ ಎಂದು ಜನಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್(Prashant Kishor) ಹೇಳಿದ್ದಾರೆ. ಟಿವಿ9 ಭಾರತ್​ವರ್ಷ್​ ಬಿಹಾರದ ಪಾಟ್ನಾದಲ್ಲಿ ಆಯೋಜಿಸಿರುವ ‘ಸತ್ತಾ ಸಮ್ಮೇಳನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜನಸುರಾಜ್ ಪಕ್ಷದ ಹಣಕಾಸಿನ ಮೂಲದ ಬಗ್ಗೆ ಕೇಳಿದಾಗ ಬುದ್ಧಿವಂತಿಕೆಯಿಂದ ಉತ್ತರಿಸಿದ್ದಾರೆ. ತಮ್ಮ ಉತ್ತರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸಿದ್ದಾರೆ. ಪ್ರಧಾನಿಗೆ ಹಣ ನೀಡುವವರೇ ನಮ್ಮ ಪಕ್ಷಕ್ಕೂ ನೀಡುತ್ತಾರೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ.

ಪಕ್ಷದ ಹಣಕಾಸಿನ ಮೂಲದ ಕುರಿತು ಮಾತನಾಡಿರುವ ಪ್ರಶಾಂತ್ ಕಿಶೋರ್, ಯಾವುದೇ ಪತ್ರಕರ್ತ, ವೈದ್ಯ, ವಕೀಲರಿಗೆ ಹಣ ಎಲ್ಲಿಂದ ಬರುತ್ತೆ? ಅವರು ರೋಗಿಗೆ ಚಿಕಿತ್ಸೆ ನೀಡುತ್ತಾರೆ, ಪತ್ರಕರ್ತರು ಅವರ ವೃತ್ತಿ ಮಾಡುತ್ತಾರೆ, ವಕೀಲರು ನ್ಯಾಯ ಒದಗಿಸುವ ಕೆಲಸ ಮಾಡುತ್ತಾರೆ. ನಾನು ಯಾವುದೇ ಉದ್ಯಮ ಮಾಡುತ್ತಿಲ್ಲ, ಸರ್ಕಾರಿ ಕೆಲಸವೂ ಇಲ್ಲ, ಎಂಎಲ್​ಎ, ಎಂಪಿಯೂ ಆಗಿಲ್ಲ, ಹಾಗಾದರೆ ಹಣ ಎಲ್ಲಿಂದ ಬರಬೇಕು. ಹಣವು ಕಳೆದ ಹತ್ತು ವರ್ಷಗಳಿಂದ ನಾವು ಯಾರಿಗೆ ಸಹಾಯ ಮಾಡಿದ್ದೆವೋ ಅಲ್ಲಿಂದಲೇ ಬರುತ್ತಿದೆ. ಕೆಟ್ಟ ಕೆಲಸ ಮಾಡಿ ಗಳಿಸಿಲ್ಲ. ಈಗ ಅವರ ಬಳಿ ಇಷ್ಟು ವರ್ಷದಿಂದ ನಾವು ಅಷ್ಟೆಲ್ಲಾ ಸಹಾಯ ಮಾಡಿದ್ದೇವೆ ಈಗ ನಮಗೂ ಸ್ವಲ್ಪ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದೇವೆ ಎಂದರು.

ಮತ್ತಷ್ಟು ಓದಿ: ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ, ಚುನಾವಣಾ ಆಯೋಗ ಮಾಡಬಾರದ್ದೇನೂ ಮಾಡಿಲ್ಲ ಎಂದ ಸುಪ್ರೀಂ

ನಾವು ಯಾರಿಗೆ ಹೆಗಲು ಕೊಟ್ಟಿದ್ದೆವೋ ಅವರಿಂದಲೇ ಸಹಾಯ
ಕಳೆದ 12 ವರ್ಷಗಳಲ್ಲಿ ಹಲವು ಪಕ್ಷಗಳು ದೇಶದಲ್ಲಿ ಅಧಿಕಾರಕ್ಕೆ ಬರಲು ನಾನು ಸಹಾಯ ಮಾಡಿದ್ದೇನೆ. ಆದ್ದರಿಂದ ಅವರ ಬೆಂಬಲಿಗರು ನಮಗೆ ಸಹಾಯ ಮಾಡುತ್ತಿದ್ದಾರೆ. ಹೀಗಾಗಿಯೇ ಹಣ ಬರುತ್ತಿದೆ. ಮೋದಿಯವರಿಗೆ ಹಣ ನೀಡುವ ಜನರು ಇಂದು ನಮಗೂ ಹಣ ನೀಡುತ್ತಿರಬೇಕು. ಹಣ ಕೊಡುವವರಿಗೆ ಮೋದಿಯವರ ಬಗ್ಗೆಯಾಗಲಿ ಮಮತಾ ಅವರ ಬಗ್ಗೆಯಾಗಲೀ ಆಸಕ್ತಿ ಇಲ್ಲ.ಕೇವಲ ಪ್ರಶಾಂತ್ ಕಿಶೋರ್ ಬಗ್ಗೆ ಮಾತ್ರ ಆಸಕ್ತಿ ಇದೆ ಎಂದು ಹೇಳಿದ್ದಾರೆ.

ಸುದ್ದಿಯ ಹಿಂದಿ ಲಿಂಕ್ ಇಲ್ಲಿದೆ 

ನಿತೀಶ್​, ಲಾಲೂಗೆ ಹಣ ಕೊಡುವವರು ಯಾರು?

ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ, ಆದರೆ ಈಗ ಆರ್‌ಜೆಡಿ ಎಲ್ಲಿಂದ ಹಣ ಪಡೆಯುತ್ತದೆ ಎಂಬುದನ್ನು ಹೇಳಬೇಕು ಎಂದು ಪ್ರಶಾಂತ್ ಕಿಶೋರ್ ಹೇಳಿದರು. ಇಲ್ಲಿಯವರೆಗೆ ಯಾರೂ ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರನ್ನು ಅವರ ಪಕ್ಷಕ್ಕೆ ಎಲ್ಲಿಂದ ಹಣ ಬರುತ್ತೆ ಎಂದು ಕೇಳಿಲ್ಲ. ಇವರು ಬಿಹಾರದ ಜನರಿಗೆ ಮೀಸಲಾದ ಯೋಜನೆಗಳನ್ನು ಲೂಟಿ ಮಾಡುತ್ತಾರೆ, ಮದ್ಯ ಮತ್ತು ಮರಳು ಮಾಫಿಯಾಗಳಿಗೆ ಆಶ್ರಯ ನೀಡುತ್ತಾರೆ ಮತ್ತು ಅವರಿಂದ ಹಣವನ್ನು ಪಡೆಯುತ್ತಾರೆ. ಅವರು ಆ ಹಣದಿಂದ ತಮ್ಮ ಪಕ್ಷವನ್ನು ನಡೆಸುತ್ತಾರೆ ಎಂದರು.

 

ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:19 pm, Fri, 11 July 25