QR Code Scam: OLXನಲ್ಲಿ ಸೋಫಾ ಕೊಳ್ಳುವುದಾಗಿ ಹೇಳಿ ಅರವಿಂದ್ ಕೇಜ್ರಿವಾಲ್ ಪುತ್ರಿಗೆ ಮೋಸ ಮಾಡಿದ ಆರೋಪಿಗಳು ಅರೆಸ್ಟ್

QR Code Scam: ಸಜೀದ್, ಕಪಿಲ್ ಮತ್ತು ಮನ್ವೇಂದ್ರ ಎಂಬುವವರು ಸೆರೆಸಿಕ್ಕಿದ್ದು, ಇ-ಕಾಮರ್ಸ್​ ಸೈಟ್​ನಲ್ಲಿ ನಕಲಿ ಖಾತೆ ತೆರೆದು ಜನರಿಗೆ ಟೋಪಿ ಹಾಕುತ್ತಿದ್ದ ಇನ್ನೊಬ್ಬ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.

QR Code Scam: OLXನಲ್ಲಿ ಸೋಫಾ ಕೊಳ್ಳುವುದಾಗಿ ಹೇಳಿ ಅರವಿಂದ್ ಕೇಜ್ರಿವಾಲ್ ಪುತ್ರಿಗೆ ಮೋಸ ಮಾಡಿದ ಆರೋಪಿಗಳು ಅರೆಸ್ಟ್
ಅರವಿಂದ್​ ಕೇಜ್ರಿವಾಲ್, ಹರ್ಷಿತಾ ಕೇಜ್ರಿವಾಲ್
Edited By:

Updated on: Feb 15, 2021 | 5:30 PM

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪುತ್ರಿ ಹರ್ಷಿತಾ ಕೇಜ್ರಿವಾಲ್ ಕಳೆದ ವಾರವಷ್ಟೇ ಸುದ್ದಿಯಾಗಿದ್ದರು. OLXನಲ್ಲಿ ಸೋಫಾ ಮಾರಲು ಹೋಗಿ ₹34 ಸಾವಿರ ಕಳೆದುಕೊಂಡಿದ್ದ ಹರ್ಷಿತಾ, QR Code Scamಗೆ ಒಳಗಾಗಿದ್ದರು. ಆದರೆ ಇದೀಗ ಅವರಿಗೆ ಮೋಸ ಮಾಡಿದ ಆರೋಪದ ಮೇಲೆ ಮೂವರು ಕಿರಾತಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸಜೀದ್, ಕಪಿಲ್ ಮತ್ತು ಮನ್ವೇಂದ್ರ ಎಂಬುವವರು ಸೆರೆಸಿಕ್ಕಿದ್ದು, ಇ-ಕಾಮರ್ಸ್​ ಸೈಟ್​ನಲ್ಲಿ ನಕಲಿ ಖಾತೆ ತೆರೆದು ಜನರಿಗೆ ಟೋಪಿ ಹಾಕುತ್ತಿದ್ದ ಇನ್ನೊಬ್ಬ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಪ್ರಕರಣ ಏನು?
ಅರವಿಂದ್ ಕೇಜ್ರಿವಾಲ್ ಮಗಳು ಹರ್ಷಿತಾ OLXನಲ್ಲಿ ಸೋಫಾ ಮಾರುವುದಾಗಿ ಜಾಹೀರಾತು ನೀಡಿದ್ದಾರೆ. ಅದನ್ನು ಗಮನಿಸಿದ ಖದೀಮರು ಸೋಫಾವನ್ನು ತಾವೇ ಕೊಳ್ಳುವುದಾಗಿ ಹೇಳಿ ಆಕೆಗೆ ಉಪಾಯವಾಗಿ ಬಲೆ ಬೀಸಿದ್ದಾರೆ. ಸೋಫಾಕ್ಕೆ ತಗಲುವ ಮೊತ್ತವನ್ನು ಆನ್​ಲೈನ್ ಮೂಲಕ ಪಾವತಿಸುತ್ತೇವೆ. ಆ ಹಣವನ್ನು ಪಡೆಯಲು QR Code ಸ್ಕ್ಯಾನ್ ಮಾಡಿಕೊಳ್ಳಿ ಎಂದ ಖದೀಮರು ಯಾವತ್ತಿನಂತೆ ತಮ್ಮ ದಾಳ ಎಸೆದಿದ್ದಾರೆ. ಅದನ್ನರಿಯದ ಹರ್ಷಿತಾ ಕೇಜ್ರಿವಾಲ್ ಎರಡು ಬಾರಿ ಕೋಡ್ ಸ್ಕ್ಯಾನ್ ಮಾಡಿದ್ದು, ಮೊದಲು ₹20,000 ಹಾಗೂ ಎರಡನೆಯ ಬಾರಿ ₹14,000 ಸೇರಿದಂತೆ ಒಟ್ಟು ₹34,000 ಕಳೆದುಕೊಂಡಿದ್ದಾರೆ. ಹೀಗೆ ಕ್ಯೂಆರ್​ ಕೋಡ್ ಸ್ಕ್ಯಾನ್ ಮಾಡಿದರೆ ತಮ್ಮ ಅಕೌಂಟಿನಿಂದಲೇ ಹಣ ಕಡಿತವಾಗುತ್ತದೆ ಎಂದು ಗೊತ್ತಾಗುವಷ್ಟರಲ್ಲೇ ಆ ಮೊತ್ತ ಖದೀಮರ ಖಾತೆ ಸೇರಿದೆ. ನಂತರ ಆ ಬಗ್ಗೆ ದೂರು ದಾಖಲಿಸಿದ್ದ ಪರಿಣಾಮ ಮೂವರು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ.

ಇದನ್ನೂ ಓದಿ: OLXನಲ್ಲಿ ಸೋಫಾ ಮಾರಲು ಹೋಗಿ 34 ಸಾವಿರ ರೂಪಾಯಿ ಕಳೆದುಕೊಂಡ ಅರವಿಂದ್ ಕೇಜ್ರಿವಾಲ್ ಮಗಳು