ಆವಂತಿಪೋರಾದಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾಪಡೆ

ಇದೀಗ ಹತ್ಯೆಯಾದ ಮೂವರು ಭಯೋತ್ಪಾದಕರಲ್ಲಿ, ಇಬ್ಬರು ಉಗ್ರರು ಜುಲೈ 23ರಂದು ಕಾಶ್ಮೀರದ ಸರ್ಕಾರಿ ಹೈಸ್ಕೂಲ್​​  ಜವಾನನ್ನು ಹತ್ಯೆ ಪ್ರಕರಣದಲ್ಲಿ ಬೇಕಾದವರಾಗಿದ್ದರು ಎಂದು ಕಾಶ್ಮೀರ ಐಜಿಪಿ ತಿಳಿಸಿದ್ದಾರೆ.

ಆವಂತಿಪೋರಾದಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾಪಡೆ
ಪ್ರಾತಿನಿಧಿಕ ಚಿತ್ರ
Edited By:

Updated on: Aug 21, 2021 | 9:06 AM

ಶ್ರೀನಗರ: ಜಮ್ಮು-ಕಾಶ್ಮೀರದ ಅವಂತಿಪೋರಾದ ನಾಗಬರೇನ್ ಟ್ರಾಲ್​​ನಲ್ಲಿ ಶನಿವಾರ ಮುಂಜಾನೆ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಈ ಮೂವರೂ ಉಗ್ರರು ಜೈಶ್​-ಇ-ಮೊಹಮ್ಮದ್​ (JeM) ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಹೇಳಲಾಗಿದೆ. ಸ್ಥಳದಲ್ಲಿ ಇನ್ನೂ ಕೂಡ ಕಾರ್ಯಾಚರಣೆ ನಡೆಯುತ್ತಿದೆ. ಇನ್ನಷ್ಟು ಮಂದಿ ಭಯೋತ್ಪಾದಕರು ಅಡಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರನ್ನು ಸೆರೆಹಿಡಿಯಲು ಭದ್ರತಾ ಪಡೆಗಳು ಮುಂದಾಗಿವೆ.

ಕಾಶ್ಮೀರದ ಪೊಲೀಸರು ಮತ್ತು ಭಾರತೀಯ ಸೇನಾಪಡೆಗಳು ಜಂಟಿಯಾಗಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಈ ಬಗ್ಗೆ ತಿಳಿಸಿರುವ ಕಾಶ್ಮೀರ ಪೊಲೀಸರು, ಹತ್ಯೆಯಾದ ಮೂವರು ಉಗ್ರರು ಜೈಷ್​-ಇ-ಮೊಹಮ್ಮದ್​ ಸಂಘಟನೆಗೆ ಸೇರಿದವರು ಎಂದು ಗೊತ್ತಾಗಿದೆ. ಆದರೆ ಇವರ ಹೆಸರು, ಮತ್ತಿತರ ವಿವರಗಳಿನ್ನೂ ಲಭ್ಯವಾಗಿಲ್ಲ ಎಂದಿದ್ದಾರೆ.  ಶುಕ್ರವಾರ ಮುಂಜಾನೆ ಆವಂತಿಪೋರಾದ  ಖ್ರೆ, ಪಾಂಪೋರ್​ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಎನ್​ಕೌಂಟರ್ ಕಾರ್ಯಾಚರಣೆ ನಡೆಸಿದ್ದವು. ಆಗಲೇ ಇಬ್ಬರು ಉಗ್ರರನ್ನು ಕೊಂದಿದ್ದರು. ಸದ್ಯ ಮೃತರಾದ ಎಲ್ಲ ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನೂ ರಕ್ಷಣಾ ಪಡೆಗಳು ವಶಪಡಿಸಿಕೊಂಡಿವೆ.

ಇದೀಗ ಹತ್ಯೆಯಾದ ಮೂವರು ಭಯೋತ್ಪಾದಕರಲ್ಲಿ, ಇಬ್ಬರು ಉಗ್ರರು ಜುಲೈ 23ರಂದು ಕಾಶ್ಮೀರದ ಸರ್ಕಾರಿ ಹೈಸ್ಕೂಲ್​​  ಜವಾನನ್ನು ಹತ್ಯೆ ಪ್ರಕರಣದಲ್ಲಿ ಬೇಕಾದವರಾಗಿದ್ದರು. ಆ ಜವಾನನ ಹೆಸರು ಮುಸೈಬ್ ಮುಷ್ತಾಕ್ ಎಂದಾಗಿತ್ತು ಎಂದು ಕಾಶ್ಮೀರ ಐಜಿಪಿ ವಿಜಯ್​ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಸೋಮವಾರದಿಂದ ಶಾಲೆ ಆರಂಭ; ಮಕ್ಕಳು, ಪೋಷಕರು ಮತ್ತು ಶಿಕ್ಷಕರು ಕಡ್ಡಾಯವಾಗಿ ಪಾಲಿಸಬೇಕಾದ ಅಂಶಗಳು ಇಲ್ಲಿವೆ

ಸೊನಾಲಿ ಬೇಂದ್ರೆಗೆ ರಾತ್ರಿ ಕರೆ ಮಾಡಿ ‘ಓಡಿ ಹೋಗಿ ಮದ್ವೆ ಆಗೋಣ ಬಾ’ ಎಂದಿದ್ರಾ ಸುನೀಲ್​ ಶೆಟ್ಟಿ? ಇಲ್ಲಿದೆ ಅಸಲಿ ವಿಷಯ

Published On - 8:57 am, Sat, 21 August 21